ವಿದ್ಯಾರ್ಥಿಗಳೇ ಗಮನಿಸಿ : 1 ರಿಂದ 10 ನೇ ತರಗತಿ ಮಧ್ಯಂತರ ಪರೀಕ್ಷೆ – ಶಿಕ್ಷಣ ಇಲಾಖೆಯಿಂದ ಪರಿಷ್ಕೃತ ವೇಳಾಪಟ್ಟಿ ಪ್ರಕಟ

ಸಾರ್ವಜನಿಕ ಶಿಕ್ಷಣ ಇಲಾಖೆ, 2022-23 ನೇ ಶೈಕ್ಷಣಿಕ ಸಾಲಿನ ಮೊದಲನೆಯ ಸಂಕಲನಾತ್ಮಕ (SA-1) ಪರೀಕ್ಷೆಯ ಪರಿಷ್ಕೃತ ವೇಳಾಪಟ್ಟಿ 1 ರಿಂದ 10 ನೇ ತರಗತಿವರೆಗೆ, ದಿನಾಂಕ 03-10-2022 ರಿಂದ 10-11-2022 ರವರೆಗೆ ಪರೀಕ್ಷೆಗಳನ್ನು ನಡೆಸಲು ನಿಗದಿ ಪಡಿಸಿದೆ.

ಸಾರ್ವಜನಿಕ ಶಿಕ್ಷಣ ಇಲಾಖೆ 2022-23 ನೇ ಶೈಕ್ಷಣಿಕ ಸಾಲಿನ 1 ರಿಂದ 10 ನೇ ತರಗತಿಯ ವಿದ್ಯಾರ್ಥಿಗಳಿಗೆ ನಡೆಸಲಾಗುವ ಮಧ್ಯಂತರ ಪರೀಕ್ಷೆಯನ್ನು, ಎರಡು ವಾರಗಳ ಕಾಲ ಮುಂದೂಡಲಾಗಿದ್ದು, ಈಗ ಶಿಕ್ಷಣ ಇಲಾಖೆ ಹೊಸ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ.

ಈ ವೇಳಾಪಟ್ಟಿಯ ಪ್ರಕಾರ ನವೆಂಬರ್ 3 ರಿಂದ ನವೆಂಬರ್ 10 ರವರೆಗೆ ಮಧ್ಯಂತರ ಪರೀಕ್ಷೆ ನಡೆಯಲಿವೆ.ಈ ಕುರಿತು ಸಾರ್ವಜನಿಕ ಶಿಕ್ಷಣ ಇಲಾಖೆ ಪ್ರಕಟಣೆಯನ್ನು ಹೊರಡಿಸಿದೆ.

ಪ್ರಕಟಣೆಯ ಪ್ರಕಾರ 2022-23 ನೇ ಶೈಕ್ಷಣಿಕ ಸಾಲಿನ ಮೊದಲನೆಯ ಸಂಕಲನಾತ್ಮಕ (SA-1)ಪರೀಕ್ಷೆಯ ವೇಳಾಪಟ್ಟಿಯನ್ನು ಪರಿಷ್ಕರಿಸಲಾಗಿದ್ದು, ಈ ಮುಂಚೆ, ಮೊದಲನೆಯ ಸಂಕಲನಾತ್ಮಕ (SA-1) ಪರೀಕ್ಷೆಯನ್ನು ದಿನಾಂಕ 17-10-2022 ರಿಂದ 25-10-2022 ರೊಳಗಾಗಿ ಪೂರ್ಣಗೊಳಿಸುವಂತೆ ವೇಳಾಪಟ್ಟಿ ನಿಗದಿ ಮಾಡುವಂತೆ ನಿರ್ದೇಶನ ನೀಡಲಾಗಿತ್ತು.

ಆದರೆ ಮಕ್ಕಳಿಗೆ ಮಧ್ಯಂತರ ಅವಧಿ ರಜೆ ಮುಕ್ತಾಯಗೊಂಡಿದ್ದು, ಶಾಲೆಗಳು 17-10-2022 ರಿಂದಲೇ ಆರಂಭ ವಾಗುವುದರಿಂದ, ಕಲಿಕಾ ಪ್ರಕ್ರಿಯೆ ಅನುಪಾಲನೆಯಲ್ಲಿ ಕೊರತೆ ಉಂಟಾಗಿ ಜೊತೆಗೆ ಮಕ್ಕಳಿಗೆ ಪರೀಕ್ಷೆಗೆ ಮಾನಸಿಕವಾಗಿ ತಯಾರಾಗಲು ಸಮಯ ಬೇಕಾಗಿರುವುದರಿಂದ ಈ ಅಂಶವನ್ನು ಪರಿಗಣಿಸಿ ಪರಿಷ್ಕೃತ ವೇಳಾಪಟ್ಟಿಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಪ್ರಕಟಿಸಿದೆ.

2022-23 ನೇ ಶೈಕ್ಷಣಿಕ ಸಾಲಿನ ಮೊದಲನೆಯ ಸಂಕಲನಾತ್ಮಕ (SA-1)ಪರೀಕ್ಷೆಯ ಪರಿಷ್ಕೃತ ವೇಳಾಪಟ್ಟಿಯನ್ನು 1 ರಿಂದ 10 ನೇ ತರಗತಿವರೆಗೆ ದಿನಾಂಕ 03-10-2022 ರಿಂದ 10-11-2022 ರವರೆಗೆ ನಿಗದಿಪಡಿಸಲಾಗಿದ್ದು, ನಿಗದಿತ ಸಮಯದಲ್ಲಿ ಪರೀಕ್ಷೆಗಳನ್ನು ನಡೆಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಸೂಚನೆಯನ್ನು ನೀಡಿದೆ.

ಆದರೆ ಶಾಲೆಗಳು ತಮ್ಮ ಅವಶ್ಯಕತೆಗೆ ಅನುಗುಣವಾಗಿ ವಿಷಯಗಳ ಕ್ರಮ ಮತ್ತು ಪರೀಕ್ಷೆಯ ದಿನಾಂಕಗಳನ್ನು ಮರುಹೊಂದಿಸಲು ಅವಕಾಶ ನೀಡಲಾಗಿದೆ. ಪರೀಕ್ಷೆಗಳನ್ನು ನಿಗದಿಪಡಿಸಿದ ದಿನಾಂಕದೊಳಗೆ ಪೂರ್ಣಗೊಳಿಸಿ, ಕಲಿಕಾ ಪ್ರಗತಿಯನ್ನು ದಿನಾಂಕ 30-11-2022 ರೊಳಗೆ ಎಸ್‌ ಎ ಟಿ ಎಸ್‌ನಲ್ಲಿ ದಾಖಲಿಸುವಂತೆ ಸೂಚಿಸಿದೆ.

ಸಂಕಲನಾತ್ಮಕ (SA-1) ಪರೀಕ್ಷೆ ಪರಿಷ್ಕೃತ ವೇಳಾಪಟ್ಟಿ ಹೀಗಿದೆ:

ಪ್ರಥಮ ಭಾಷೆ – 03-11-2022.

ದ್ವಿತೀಯ ಭಾಷೆ – 04 -11-2022.

ತೃತೀಯ ಭಾಷೆ – 05-11-2022.

ಗಣಿತ – 07-11-2022.

ವಿಜ್ಞಾನ – 08-11-2022.

ಸಮಾಜ ವಿಜ್ಞಾನ – 09-11-2022.

ಭಾಗ -ಬಿ/ ದೈಹಿಕ ಶಿಕ್ಷಣ- 10 -11-2022

ಪರಿಷ್ಕೃತ ವೇಳಾಪಟ್ಟಿಯು ಹೀಗಿದ್ದು, ವಿದ್ಯಾರ್ಥಿಗಳು ತಯಾರಿ ನಡೆಸಿ ಪರೀಕ್ಷೆ ಎದುರಿಸಬಹುದಾಗಿದೆ.

Leave A Reply

Your email address will not be published.