Travel Now Pay Later : ರೈಲು ಪ್ರಯಾಣಿಕರಿಗೆ ಗುಡ್ ನ್ಯೂಸ್ | ಪ್ರಯಾಣದ ನಂತರವೂ ‘ಟಿಕೆಟ್ ಶುಲ್ಕ’ ಪಾವತಿಸಬಹುದು!
ಸದ್ಯ ಕಳೆದೆರಡು ವರ್ಷಗಳಿಂದ ಕೊರೋನಾ ಮಹಾಮಾರಿಯಿಂದ ಹಬ್ಬವನ್ನು ಆಚರಿಸಲಾಗದೆ ಇದ್ದ ಜನತೆ ಈ ಬಾರಿ ದೀಪಾವಳಿ ಹಬ್ಬದ ಸಂಭ್ರಮದಲ್ಲಿ ತೊಡಗಿಕೊಂಡಿದ್ದು ಇನ್ನೇನೂ ಕೆಲವೇ ದಿನಗಳಲ್ಲಿ ಆರಂಭ ವಾಗಲಿರುವ ದೀಪದ ಹಬ್ಬದ ಪ್ರಯುಕ್ತ ಭರದ ಸಿದ್ದತೆ ಎಲ್ಲೆಡೆ ನಡೆಯುತ್ತಿದೆ. ಈ ನಡುವೆ ಜನರಿಗೆ ರೈಲ್ವೆ ಇಲಾಖೆ ದೂರ ಪ್ರಯಾಣ ಮಾಡುವ ಪ್ರಯಾಣಿಕರಿಗೆ ಹೆಚ್ಚುವರಿ ರೈಲಿನ ವ್ಯವಸ್ಥೆ ಮಾಡಿ ನೆರವಾಗಿದೆ.
ಅದರಲ್ಲೂ ಹಬ್ಬದ ಸಂದರ್ಭ ತಮ್ಮ ಊರಿಗೆ ತೆರಳುವ ಮಂದಿ ಹೆಚ್ಚು ಇದ್ದು, ಬಸ್, ಮಾತ್ರವಲ್ಲದೇ ರೈಲಿಗಳಲ್ಲಿಯು ಪ್ರಯಾಣಿಕರ ಸಂಖ್ಯೆ ಹೆಚ್ಚಾಗಲಿದ್ದು ಪ್ರಯಾಣಿಕರಿಗೆ ನೆರವಾಗಲು ದಕ್ಷಿಣ ಮಧ್ಯ ರೈಲ್ವೆ ವಿಶೇಷ ಎಕ್ಸ್‌ಪ್ರೆಸ್ ಹೆಚ್ಚುವರಿ ರೈಲುಗಳನ್ನು ಓಡಿಸಲು ತೀರ್ಮಾನಿಸಿದೆ.
ರೈಲ್ವೆಯನ್ನ ಸಾಮಾನ್ಯ ಜನರ ಜೀವನಾಡಿ ಎಂದು ಪರಿಗಣಿಸಲಾಗಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ರೈಲ್ವೇ ಹಲವು ಹಬ್ಬದ ವಿಶೇಷ ರೈಲುಗಳನ್ನು ಆರಂಭಿಸಿದ್ದು, ಈ ರೈಲುಗಳಲ್ಲಿ ಕಾಯ್ದಿರಿಸುವಿಕೆಗಾಗಿ, ಭಾರತೀಯ ರೈಲ್ವೆ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮ (IRCTC) ಪ್ರಯಾಣಿಕರಿಗಾಗಿ ಹೊಸ ಸೌಲಭ್ಯವನ್ನು ಒದಗಿಸಲು ಮುಂದಾಗಿದೆ.
ಇದರಿಂದಾಗಿ ಪ್ರಯಾಣಿಕರು ಯಾವುದೇ ಹಣವನ್ನು ವ್ಯಯಿಸದೆ ಅಥವಾ ಖರ್ಚು ಮಾಡದೆ, ರೈಲ್ವೆ ಟಿಕೆಟ್ಗಳನ್ನು ಬುಕ್ ಮಾಡಬಹುದಾಗಿದೆ.
‘ಟ್ರಾವೆಲ್ ನೌ ಪೇ ಲೇಟರ್'(Travel Now Pay Later) ಸೌಕರ್ಯದ ಮುಖೇನ ಗ್ರಾಹಕರು ಖಾತೆಯಲ್ಲಿ ಹಣವಿಲ್ಲದಿದ್ದರೂ ರೈಲ್ವೆ ಟಿಕೆಟ್ (Railway Ticket Booking TNPL) ಬುಕ್ ಮಾಡುವ ಅವಕಾಶ ಕಲ್ಪಿಸಲಾಗಿದೆ.
ಅಲ್ಲದೆ, IRCTC ಯ ರೈಲ್ ಕನೆಕ್ಟ್ ಅಪ್ಲಿಕೇಶನ್‌ನಲ್ಲಿಯೂ ಈ ಸೌಲಭ್ಯವನ್ನು ಪಡೆಯಬಹುದು.CASHeನ EMI ಅಯ್ಕೆ ಯನ್ನು ಆರಿಸಿಕೊಂಡು ಪ್ರಯಾಣಿಕರು ಸುಲಭವಾಗಿ ಟಿಕೆಟ್ಗಳನ್ನು ಬುಕ್ ಮಾಡಬಹುದಾಗಿದೆ. ಅಲ್ಲದೆ, 3 ರಿಂದ 6 ತಿಂಗಳ EMI ಆಯ್ಕೆಯ ಮೂಲಕ ಈ ಟಿಕೆಟ್ ಹಣ ಪಾವತಿಸಬಹುದಾಗಿದೆ.
ಈ ಹೊಸ ಸೌಲಭ್ಯದ ಮೂಲಕ ದೇಶಾದ್ಯಂತ ಕೋಟ್ಯಂತರ ರೈಲ್ವೇ ಪ್ರಯಾಣಿಕರು ಭಾರಿ ಲಾಭ ಪಡೆಯಬಹುದಾಗಿದೆ. ಇದರ ಮತ್ತೊಂದು ವಿಶೇಷವೆಂದರೆ ತತ್ಕಾಲ್ ಮತ್ತು ಸಾಮಾನ್ಯ ಟಿಕೆಟ್ ಬುಕಿಂಗ್ ಎರಡಕ್ಕೂ ಟ್ರಾವೆಲ್ ನೌ ಮತ್ತು ಪೇ ಲೇಟರ್ ಸೌಲಭ್ಯವನ್ನು ಪಡೆಯಬಹುದು ಜೊತೆಗೆ ಈ ಸೌಲಭ್ಯವನ್ನು ಪಡೆಯಲು ಯಾವುದೇ ರೀತಿಯ ದಾಖಲೆಗಳ ಅಗತ್ಯವಿಲ್ಲ ಎಂಬುದು ಮತ್ತೊಂದು ವಿಶೇಷ ಸಂಗತಿ.
CASHe ಅಧ್ಯಕ್ಷ ವಿ.ರಾಮನ್ ಕುಮಾರ್, ದೇಶಾದ್ಯಂತ IRCTC ಮೂಲಕ ‘ಟ್ರಾವೆಲ್ ನೌ ಪೇ ಲೇಟರ್’ ಸೌಲಭ್ಯವನ್ನು ಪ್ರಾರಂಭಿಸಿದ್ದು, ಪ್ರತಿ ದಿನ 15 ಲಕ್ಷ ಮಂದಿ ಈ ಆ್ಯಪ್ ಮೂಲಕ ಟಿಕೆಟ್ ಬುಕ್ ಮಾಡುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ, ಅತಿ ಹೆಚ್ಚು ಜನರಿಗೆ TNPL ಸೌಲಭ್ಯವನ್ನು ಒದಗಿಸಲು ಸಾಧ್ಯವಾಗುತ್ತದೆ.
CASHe ತನ್ನ ಹಣಕಾಸಿನ ಸೇವೆಗಳನ್ನು TNPL ಸೇವೆಯ ಮೂಲಕ ಸಾಧ್ಯವಾದಷ್ಟು ಜನರಿಗೆ ವಿಸ್ತರಿಸಲು ಯೋಜಿಸುತ್ತಿರುವುದು ಗಮನಾರ್ಹ ಸಂಗತಿ . ಇದರೊಂದಿಗೆ, ತನ್ನ ಪ್ಲಾಟ್‌ಫಾರ್ಮ್ ಅನ್ನು ಭಾರತದಲ್ಲಿ ಅತಿದೊಡ್ಡ ಡಿಜಿಟಲ್ ಕ್ರೆಡಿಟ್ ಪ್ಲಾಟ್‌ಫಾರ್ಮ್ ಮಾಡುವ ಯೋಜನೆಯಲ್ಲಿ ತೊಡಗಿಸಿಕೊಂಡಿದೆ.
ಹಬ್ಬದ ಸಮಯದಲ್ಲಿ ಮನೆಗೆ ರೈಲಿನಲ್ಲಿ ಪ್ರಯಾಣಿಸುವವರು ತಕ್ಷಣ ಕಾಯ್ದಿರಿಸುವಿಕೆಯನ್ನು ಪಡೆಯದಿದ್ದರೆ, ಅದರ ಬಗ್ಗೆ ಚಿಂತಿಸುವ ಅವಶ್ಯಕತೆ ಇಲ್ಲ ಏಕೆಂದರೆ, IRCTC ಯ ರೈಲ್ ಕನೆಕ್ಟ್ ಅಪ್ಲಿಕೇಶನ್ ಮೂಲಕ ಸುಲಭವಾಗಿ ಕಾಯ್ದಿರಿಸಬಹುದಾಗಿದ್ದು, ಇದಕ್ಕಾಗಿ ಅದನ್ನು ಗೂಗಲ್ ಪ್ಲೇ ಸ್ಟೋರ್ ಅಥವಾ ಐಫೋನ್ ಸ್ಟೋರ್‌ನಿಂದ ಆ್ಯಪ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು.
ಈ ಪ್ರಕ್ರಿಯೆಯ ಬಳಿಕ, ಕೆಲವು ಸುಲಭ ಹಂತಗಳನ್ನು ಅನುಸರಿಸಿ ಸುಲಭವಾಗಿ ರೈಲ್ವೇ ಟಿಕೆಟ್‌ಗಳನ್ನು ಬುಕ್ ಮಾಡಬಹುದಾಗಿದ್ದು, ಪ್ರಸ್ತುತ ಬುಕಿಂಗ್ ಮಾಡುವ ಸಂದರ್ಭದಲ್ಲಿ ನಿಮ್ಮ ಬಳಿ ಹಣವಿಲ್ಲದಿದ್ದರೆ, ನೀವು CASHe TNPL ಆಯ್ಕೆಯನ್ನು ಸಹ ಆರಿಸಿಕೊಳ್ಳಬಹುದಾಗಿದೆ.
ದೀಪಾವಳಿಯಲ್ಲಿ ವಿಶೇಷವಾಗಿ ರೈಲಿನಲ್ಲಿ ಮನೆಗೆ ಹೋಗಲು ಯೋಜಿಸುತ್ತಿದ್ದರೆ, ಟಿಕೆಟ್ ಕಾಯ್ದಿರಿಸಿದ ನಂತರ, ನೀವು IRCTC ಯ ‘ಟ್ರಾವೆಲ್ ನೌ ಪೇ ಲೇಟರ್’ ಅನ್ನು ಬಳಸಿಕೊಂಡು ರೈಲಿನಲ್ಲಿ ಆಸನವನ್ನು ಕಾಯ್ದಿರಿಸಬಹುದು.
ಅನೇಕ ಬಾರಿ ತುರ್ತು ಪರಿಸ್ಥಿತಿಯಲ್ಲಿ ಟಿಕೆಟ್ ಕಾಯ್ದಿರಿಸಬೇಕಾದ ಜನರಿಗೆ ಟಿಕೆಟ್ ಕಾಯ್ದಿರಿಸಲು ಸಾಧ್ಯವಾಗುವುದಿಲ್ಲ. ಈ ಸಮಯದಲ್ಲಿ , ಈ ಸೌಲಭ್ಯದ ಪ್ರಯೋಜನವನ್ನ ಪಡೆದುಕೊಳ್ಳುವ ಮೂಲಕ, ಯಾವುದೇ ಹಣವನ್ನು ಖರ್ಚು ಮಾಡದೇ ರೈಲ್ವೆ ಟಿಕೆಟ್’ಗಳನ್ನು ಬುಕ್ ಮಾಡಬಹುದಾಗಿದೆ.