48 ಗಂಟೆಯ ಪ್ರೆಗ್ನೆಂಟ್ ಮಹಿಳೆಗೆ ಆರೋಗ್ಯವಂತ ಮಗು ; ಇದು ಸಾಧ್ಯ ಆದದ್ದು ಹೇಗೆ ?!
ಹೆಂಗಸೊಬ್ಬಳು ತಾವು ಗರ್ಭಿಣಿ ಎಂದು ತಿಳಿದು ಬಂದ ಕೇವಲ ಕೇವಲ 48 ಗಂಟೆಗಳಲ್ಲಿಯೇ ಮಗುವಿಗೆ ಜನ್ಮ ನೀಡುವ ಮೂಲಕ ಅಚ್ಚರಿಯ ಘಟನೆ ನಡೆದಿದೆ.
ಅಮೆರಿಕಾದ 23 ವರ್ಷದ ಪೇಟನ್ ಸ್ಟೋವರ್ ಅವರು ಒಮಾಹಾದಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾಕೆ. ಯಾವಾಗಲೂ ಆಕೆಗೆ ತುಂಬಾ ಆಯಾಸವಾಗುತ್ತಿತ್ತು. ಮೊದಲಿಗೆ ಕೆಲಸದ ಒತ್ತಡದಿಂದ ಎಂದು ಆಕೆ ಭಾವಿಸಿದ್ದಳು. ಅಲ್ಲದೆ ಆಕೆಯ ಕಾಲುಗಳಲ್ಲಿ ಊತವುಂಟಾಗುತ್ತಿದ್ದರಿಂದ ಯಾವುದಕ್ಕೂ ಒಮ್ಮೆ ವೈದ್ಯರನ್ನು ಭೇಟಿ ಮಾಡಿ ಬರುವ ಎಂದು ಆ ದಂಪತಿ ಆಸ್ಪತ್ರೆಗೆ ಭೇಟಿ ನೀಡಿದ್ದರು. ಈ ವೇಳೆ ವೈದ್ಯರು ನೀಡಿದ ಹೇಳಿಕೆ ಕೇಳಿ ಆ ದಂಪತಿ ಬೆಚ್ಚಿ ಬಿದ್ದಿದ್ದಾರೆ. ” ನೀವೀಗ ಗರ್ಭಿಣಿಯಾಗಿದ್ದೀರಾ ” ಎಂದು ವೈದ್ಯರು ಹೇಳಿದಾಗ ಆ ಮಹಿಳೆಗೆ ನಂಬುವುದಕ್ಕೆ ಸಾಧ್ಯವಾಗಲಿಲ್ಲ.
ವೈದ್ಯರ ಮೇಲೆಯೇ ಅನುಮಾನಗೊಂಡ ಮಹಿಳೆಯ ಪತಿ, ಮತ್ತೊಮ್ಮೆ ಟೆಸ್ಟ್ ಮಾಡಿಸಿಕೊಂಡಾಗ ಗರ್ಭಿಣಿಯಾಗಿರುವುದು ದೃಢವಾಗಿದೆ. ಅಲ್ಲದೇ ಅಲ್ಟ್ರಾ ಸೌಂಡ್ ಸ್ಕ್ಯಾನಿಂಗ್ ವೇಳೆ ಹೊಟ್ಟೆಯಲ್ಲಿ ಮಗು ಇರುವುದನ್ನು ಅವರೇ ಸ್ಕ್ರೀನಿನ ಮೇಲೆ ನೋಡಿದ್ದಾರೆ. ಆಗ ಪಕ್ಕಾ ಕನ್ಫರ್ಮ್ ಆಗಿದೆ.
ಅಷ್ಟರಲ್ಲಿ ಪೇಟನ್ ಸ್ಟೋವರ್ ಗೆ ಅನಾರೋಗ್ಯ ಸಮಸ್ಯೆ ಕಾಡಿದ್ದು, ಡಾಕ್ಟರರು ಚಿಕಿತ್ಸೆಗಾಗಿ ಅಡ್ಮಿಟ್ ಮಾಡಿಕೊಂಡಿದ್ದಾರೆ. ವೈದ್ಯರು ಚಿಕಿತ್ಸೆ ನೀಡುತ್ತಿದ್ದ ರಾತ್ರಿಯೇ ಆಕೆಗೆ ಹೆರಿಗೆಯಾಗಿ ಹೋಗಿದೆ. ಅಂದರೆ, ಗರ್ಭಿಣಿಯಾಗಿರುವ ಬಗ್ಗೆ ಮಾಹಿತಿ ಗೊತ್ತಾದ 48 ಗಂಟೆಗಳ ಒಳಗೆ ಮಹಿಳೆ ಮಗುವಿಗೆ ಜನ್ಮ ನೀಡಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ದಂಪತಿ ತಮಗೊಂದು ಮಗು ಬೇಕು ಅಂದುಕೊಂಡಿದ್ದರಂತೆ. ಆದರೆ ಕೇವಲ 48 ಗಂಟೆಗಳ ಬಸುರಿ ಆರೈಕೆಯ ಒಳಗೇ ಆರೋಗ್ಯವಂತ ಗಂಡು ಮಗು ಬರಬಹುದು ಅಂತ ಯಾರಾದರೂ ಊಹಿಸಲಿಕ್ಕೆ ಸಾಧ್ಯವಾ ? ಆದರೆ ಅವರು ಅಂದುಕೊಂಡಿದ್ದಕ್ಕಿಂತ ಬೇಗನೇ ಮಗು ಜನಿಸಿದ್ದು, ಈ ವಿಚಾರವಾಗಿ ಸಖತ್ ಥ್ರಿಲ್ ಆಗಿದ್ದಾರೆ. ಪೇಟನ್ ಸ್ಟೋವರ್ ಮತ್ತು ಆಕೆಯ ಪತಿಗೆ ಅಷ್ಟು ಬೇಗನೆ ಸಂತಸ ತಂದು ಕೊಟ್ಟಿದ್ದಾನೆ ಇಲ್ಲಿಯ ತನಕ ಕಣ್ಣಾಮುಚ್ಚಾಲೆ ಮಾಡಿ ಅಡಗಿ ಕುಳಿತಿದ್ದ ಆ ಪೋರ.