Kantara : ಭೂತಕೋಲ ಹಿಂದೂ ಸಂಸ್ಕೃತಿ ಅಲ್ಲ – ನಟ ಚೇತನ್ ಕುಮಾರ್ ಟ್ವೀಟ್

ಕಾಂತಾರ ಭರ್ಜರಿ ಹಿಟ್ ಕಾಣುತ್ತಿರುವ ಸಿನಿಮಾ. ಪ್ರಕೃತಿ ಮತ್ತು ಮನುಷ್ಯನ ನಡುವಿನ ಸಂಘರ್ಷದ ಕಥೆಯೇ ಈ ಕಾಂತಾರ. ರಿಷಬ್ ಶೆಟ್ಟಿ ನಿರ್ದೇಶನ, ನಟನೆ ಅದ್ಭುತ ಎಂದೇ ಹೇಳಬಹುದು. ಕರಾವಳಿಯ ಭೂತಾರಾಧನೆ ಹಾಗೂ ಕಂಬಳದ ಸೊಗಡನ್ನೇ ನೀಡಿದ ಈ ಸಿನಿಮಾ ದೇಶ ವಿದೇಶದಾದ್ಯಂತ ಉತ್ತಮ ಪ್ರದರ್ಶನ ಕಾಣುತ್ತಿದ್ದು, ಸಿನಿರಸಿಕರ ಮನಸ್ಸನ್ನು ಗೆದ್ದಿದೆ.

 

ಈ ಸಿನಿಮಾದಲ್ಲಿ ಭೂತಕೋಲ, ಕರಾವಳಿ ಭಾಗದ ದೈವಗಳ ಆರಾಧನೆ, ಚಿತ್ರ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದೇ ಹೇಳಬಹುದು. ಈ ಮಧ್ಯೆ ಭೂತಕೋಲ ಹಿಂದೂ ಸಂಸ್ಕೃತಿ ಎಂದು ನಿರ್ದೇಶಕ ರಿಷಬ್ ಶೆಟ್ಟಿ ಹೇಳಿಕೆಯನ್ನು ನಟ ಚೇತನ್ ಕುಮಾರ್ ಅಲ್ಲಗಳೆದಿದ್ದಾರೆ.

“ನಮ್ಮ ಕನ್ನಡ ಸಿನಿಮಾ ಕಾಂತಾರ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡುತ್ತಿರುವುದು ಖುಷಿ ತಂದಿದೆ. ಭೂತಕೋಲ ಹಿಂದೂ ಸಂಸ್ಕೃತಿ ಎಂದು ಹೇಳಿರುವ ರಿಷಬ್ ಶೆಟ್ಟಿ ಅವರ ಮಾತು ಸುಳ್ಳು, ನಮ್ಮ ಪಂಬದ, ನಲಿಕೆ, ಪರವರ ಬಹುಜನ ಸಂಪ್ರದಾಯಗಳು, ವೈದಿಕ ಬ್ರಾಹ್ಮಣೀಯ ಹಿಂದೂ ಧರ್ಮಕ್ಕಿಂತ ಹಿಂದಿನವು. ಮೂಲ ನಿವಾಸಿ ಸಂಸ್ಕೃತಿಗಳನ್ನು ಪರದೆ ಮೇಲೆ ಮತ್ತು ಹೊರಗೆ ಸತ್ಯದೊಂದಿಗೆ ಪ್ರದರ್ಶಿಸಬೇಕು” ಎಂದು ಅವರು ಟ್ವಿಟ್ಟರ್ ನಲ್ಲಿ ಹೇಳಿದ್ದಾರೆ.

ರಿಷಬ್ ಶೆಟ್ಟಿ ಹೇಳಿಕೆಯನ್ನು ನಟ ಚೇತನ್‌ ಅಲ್ಲಗೆಳೆದಿದ್ದು, ಈ ಬಗ್ಗೆ ನೆಟ್ಟಿಗರು ನಟ ಚೇತನ್‌ ಪ್ರಚಾರಕ್ಕಾಗಿ ಈ ವಿವಾದವನ್ನು ಎತ್ತಿದ್ದಾರೆ ಎಂದು ಎಲ್ಲೆಡೆ ಕಿಡಿಕಾರಿದ್ದಾರೆ. ಈ ಟ್ವೀಟ್ ಇದೀಗ ಭಾರೀ ಚರ್ಚೆಗೆ ಗ್ರಾಸವಾಗುತ್ತಿದೆ.

Leave A Reply

Your email address will not be published.