Kantara : ಬಾಕ್ಸಾಫೀಸ್ ಕಲೆಕ್ಷನ್ ನಲ್ಲಿ ಭರ್ಜರಿ ಓಟ ಕಂಡ ‘ಕಾಂತಾರ’ | 4 ಭಾಷೆಯಲ್ಲಿ ಈ ಸಿನಿಮಾ ಗಳಿಸಿದೆಷ್ಟು ಗೊತ್ತಾ?

ಕಾಂತಾರ ಸಿನಿಮಾ‌ ಎಬ್ಬಿಸಿದ ಹವಾ ಬೇರೆ ಯಾವ ಸಿನಿಮಾ ಕೂಡಾ ಎಬ್ಬಿಸಿಲ್ಲ ಅನ್ನೋ ಮಟ್ಟಿಗೆ ಈ ಸಿನಿಮಾ ಹಿಟ್ ಗಳಿಸಿದೆ ಎಂದೇ ಹೇಳಬಹುದು. ಉತ್ತರದಿಂದ ದಕ್ಷಿಣದವರೆಗೂ ಬರೀ ರಿಷಬ್ ಶೆಟ್ಟಿ ‘ಕಾಂತಾರ’ ಬಗ್ಗೆನೇ ಮಾತು. ಬಾಕ್ಸಾಫೀಸ್‌ನಲ್ಲೂ ಕಾಂತಾರ ಅಬ್ಬರಿಸುತ್ತಾ ಮುನ್ನಡೆಯುತ್ತಿದೆ.

 

ಕನ್ನಡ, ತೆಲುಗು, ತಮಿಳು ಹಾಗೂ ಹಿಂದಿ ವರ್ಷನ್‌ ಈಗಾಗಲೇ ರಿಲೀಸ್ ಆಗಿ ಸಕ್ಸಸ್ ಕಾಣುತ್ತಿದೆ. ಈ ಬೆನ್ನಲ್ಲೇ ಕರ್ನಾಟಕದಲ್ಲಿ ‘ಕಾಂತಾರ’ ರಿಲೀಸ್ ಆಗಿ ಮೂರನೇ ವಾರಕ್ಕೆ ಕಾಲಿಟ್ಟಿದೆ. ಆದರೂ, ಸಿನಿಮಾ ಸ್ಪೀಡ್ ಹೆಚ್ಚಾಗುತ್ತಲೇ ಇದೆ.

ಇದೇ ಮೊದಲ ಬಾರಿಗೆ ‘ಕಾಂತಾರ’ ಎಲ್ಲಾ ಭಾಷೆಗಳಿಂದ ಬಾಕ್ಸಾಫೀಸ್‌ನಲ್ಲಿ ಎರಡಂಕಿ ದಾಟಿದೆ. ಅಲ್ಲದೆ ಮೂರನೇ ವಾರದ ಗಳಿಕೆ ಮೇಲೆ ಹಿಂದೆಂದಿಗಿಂತಲೂ ದುಪ್ಪಟ್ಟು ಆಗುತ್ತೆ ಅಂತ ಟ್ರೇಡ್ ಅನಲಿಸ್ಟ್‌ಗಳು ಭವಿಷ್ಯ ನುಡಿದಿದ್ದಾರೆ. ಅಲ್ಲದೇ ಇನ್ನೊಂದು ವಾರದೊಳಗೆ 100 ಕೋಟಿ ರೂ. ಕ್ಲಬ್ ಸೇರುತ್ತೆ ಅಂತ ಮಾತು ಕೇಳಿ ಬರುತ್ತಿದೆ.

‘ಕಾಂತಾರ’ ಮೂರನೇ ಶನಿವಾರ ಬಾಕ್ಸಾಫೀಸ್‌ನಲ್ಲಿ ಉತ್ತಮ ಕಲೆಕ್ಷನ್ ಪಡೆದಿದೆ. ಮೂರನೇ ವೀಕೆಂಡ್ ಆರಂಭದಲ್ಲಿ ಬಿಡುಗಡೆಯಾದ ಎಲ್ಲಾ ಭಾಷೆಯಿಂದಲೂ ಬಾಕ್ಸಾಫೀಸ್ ಕಲೆಕ್ಷನ್ ಸುಮಾರು 12.50 ಕೋಟಿ ರೂಪಾಯಿ ದಾಟಿದೆ ಎಂದು ವರದಿಯಾಗಿದೆ.

‘ಕೆಜಿಎಫ್ 2’ನಷ್ಟೇ ಸದ್ದು ಮಾಡುತ್ತಿರುವ ‘ಕಾಂತಾರ’ ಈ ವೀಕೆಂಡ್‌ನಲ್ಲಿ ಸುಮಾರು 32 ರಿಂದ 33 ಕೋಟಿ ರೂ.ಯನ್ನು ಗಳಿಕೆ ಮಾಡಬಹುದು ಎಂಬ ಊಹೆ ಇದೆ. ಇನ್ನೊಂದು ಕಡೆ ನಿನ್ನೆವೆರೆಗೆ ( ಅಕ್ಟೋಬರ್ 15) ಈ ಸಿನಿಮಾದ ಗಳಿಕೆ ಸುಮಾರು 81 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಹೀಗಾಗಿ ಭಾನುವಾರದ (ಅಕ್ಟೋಬರ್ 16) ಗಳಿಕೆಯನ್ನೂ ಸೇರಿಸಿ ಸಿನಿಮಾದ ಕಲೆಕ್ಷನ್ 95 ರಿಂದ 96 ಕೋಟಿ ರೂ.ದಾಟಬಹುದು. ಇಲ್ಲಾ 100 ಕೋಟಿ ಕ್ಲಬ್ ಸೇರಬಹುದು ಅನ್ನೋದು ಟ್ರೇಡ್ ಅನಲಿಸ್ಟ್‌ಗಳ ಲೆಕ್ಕಾಚಾರ.

ಕೇವಲ ಆಂಧ್ರ, ತೆಲಂಗಾಣದಲ್ಲಿ ಎರಡು ದಿನಕ್ಕೆ ಸಿನಿಮಾ ಕಲೆಕ್ಷನ್ 4 ಕೋಟಿ ರೂಪಾಯಿ ದಾಟಿದೆ ಅನ್ನೋದು ಸದ್ಯಕ್ಕೆ ಸಿಕ್ಕಿರೋ ಲೆಕ್ಕ.

‘ಕಾಂತಾರ’ ಬಾಕ್ಸಾಫೀಸ್ ಕಲೆಕ್ಷನ್ (ತೆಲುಗು)
ಮೊದಲ ದಿನ 1.25 ಕೋಟಿ ರೂ.
ಎರಡನೇ ದಿನ 2.75 ಕೋಟಿ ರೂ.
ಒಟ್ಟು 4.00 ಕೋಟಿ ರೂ.

ತಮಿಳು ವರ್ಷನ್ ‘ಕಾಂತಾರ’ ನಿನ್ನೆಯಷ್ಟೇ (ಅಕ್ಟೋಬರ್ 15) ರಿಲೀಸ್ ಆಗಿದೆ. ಮೊದಲ ದಿನ ಇಲ್ಲೂ ಪಾಸಿಟಿವ್ ರೆಸ್ಪಾನ್ಸ್ ದೊರಕಿದೆ. ಅಂದ ಹಾಗೇ, ಮೊದಲ ದಿನ ತಮಿಳಿನಲ್ಲಿ 35 ಲಕ್ಷ ರೂಪಾಯಿ ಗಳಿಸಿದೆ ಎನ್ನಲಾಗಿದೆ. ಅದೇ ಹಿಂದಿಯಲ್ಲಿ ಕಳೆದ ಎರಡು ದಿನಗಳ ಕಲೆಕ್ಷನ್ ಸುಮಾರು 3.80 ಕೋಟಿ ರೂಪಾಯಿ ಎನ್ನಲಾಗಿದೆ. ಭಾನುವಾರದ ಶೋ ಕಲೆಕ್ಷನ್ ನೋಡಿ ನಾಲ್ಕು ಭಾಷೆಗಳಲ್ಲಿ ಸಿನಿಮಾ ಎಷ್ಟು ಕಲೆ ಹಾಕುತ್ತೆ ಎಂಬುದನ್ನು ಗಮನಿಸಿ ಅನಂತರ ಎಲ್ಲ ನಿರ್ಧಾರವಾಗಲಿದೆ.

Leave A Reply

Your email address will not be published.