Home Entertainment Big Boss ನಲ್ಲಿ ನಡೆಯುತ್ತಾ ಮ್ಯಾಚ್ ಫಿಕ್ಸಿಂಗ್ ? | ಸುದೀಪ್ ಅನುಪಮಾರನ್ನು ಗೆಲ್ಲಿಸ್ತಾರಂತೆ –...

Big Boss ನಲ್ಲಿ ನಡೆಯುತ್ತಾ ಮ್ಯಾಚ್ ಫಿಕ್ಸಿಂಗ್ ? | ಸುದೀಪ್ ಅನುಪಮಾರನ್ನು ಗೆಲ್ಲಿಸ್ತಾರಂತೆ – ಬಿಗ್ ಬಾಸ್ ಮನೆಯೊಳಗಿಂದಲೇ ಎದ್ದಿದೆ ದಟ್ಟ ಹೊಗೆ !

Hindu neighbor gifts plot of land

Hindu neighbour gifts land to Muslim journalist

ಬಿಗ್ ಬಾಸ್ ಕನ್ನಡದಲ್ಲಿ ಮ್ಯಾಚ್ ಫಿಕ್ಸಿಂಗ್ ನಡೆಯುತ್ತಾ ? ಮನೆಯೊಳಗೆ ಬರುವ ಮೊದಲೇ ಇಂತವರನ್ನೇ ಗೆಲ್ಲಿಸಬೇಕು ಎಂಬ ನಿರ್ಧಾರ ಆಗಿರುತ್ತಾ ? ಈ ಬಗ್ಗೆ ದೊಡ್ಡ ಚರ್ಚೆ ಈಗ ಶುರುವಾಗಿದೆ. ಈ ಹಿಂದೆನೂ, ಹಳೆಯ ಬಿಗ್ ಬಾಸ್ ಸೀಸನ್ ಗಳಲ್ಲಿ ಕೂಡ ಮ್ಯಾಚ್ ಫಿಕ್ಸಿಂಗ್ ಬಗ್ಗೆ ಸುದ್ದಿ ಎಬ್ಬಿತ್ತು. ಇಲ್ಲಿ ತಮಗೆ ಬೇಕಾದವರನ್ನು ಆಯ್ಕೆ ಮಾಡುತ್ತಾರೆ ಎನ್ನುವ ಅನುಮಾನ ಇತ್ತು. ಈಗ ಬಿಗ್ ಬಾಸ್ ಮನೆಯೊಳಗಿಂದಲೇ ಸ್ಪರ್ಧಿಯೊಬ್ಬರು ಮ್ಯಾಚ್ ಫಿಕ್ಸಿಂಗ್ ಬಗ್ಗೆ ಮಾತಾಡಿದ್ದಾರೆ. ಬಿಗ್ ಬಾಸ್ ನೊಳಗಿನ ಬಗ್ಗೆ.ಯಾಕೆ ಬಂದು ಈ ಮ್ಯಾಚ್ ಫಿಕ್ಸಿಂಗ್ ಎಂಬ ಮೋಸದಾಟದ ಮ್ಯಾಟರ್ ಎಂದು ತಿಳಿಯಬೇಕಾದರೆ ಈ ಪೋಸ್ಟ್ ಓದಿ.

ಸೂಪರ್ ಸಂಡೇ ವಿತ್ ಸುದೀಪ್ ಕಾರ್ಯಕ್ರಮದಲ್ಲಿ ಕಿಚ್ಚ ಸುದೀಪ್ ಅವರು ಈ ಬಾರಿ ಟಾಪ್ -2 ನಲ್ಲಿ ಯಾರು ಇರ್ತಾರೆ ಎಂದು ಪ್ರಶ್ನೆ ಮಾಡಿದ್ರು. ಅದಕ್ಕೆ ಗುರೂಜಿ ಅನುಪಮಾ ಗೆಲ್ತಾರೆ. ಇದು ಮ್ಯಾಚ್ ಫಿಕ್ಸಿಂಗ್ ಅಂದ್ರು. ಅದಕ್ಕೆ ಸುದೀಪ್ ಕ್ಲಾಸ್ ಕೆಂಡಾಮಂಡಲರಾಗಿದ್ದಾರೆ.

ಕಿಚ್ಚ ಸುದೀಪ್ ನಿನ್ನೆಯ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಈ ಬಾರಿ ಟಾಪ್ 2 ನಲ್ಲಿ ಯಾರು ಇರ್ತಾರೆ ಎಂದು ಮೊದಲು ರಾಕೇಶ್ ಗೆ ಕೇಳಿದ್ರು. ಅದಕ್ಕೆ ಅವರು ಅರುಣ್ ಸಾಗರ್ ಎಂದು ಉತ್ತರಿಸಿದ್ದಾರೆ.

ಅದೇ ಪ್ರಶ್ನೆಯನ್ನು ಗುರೂಜಿಗೆ ಸುದೀಪ್ ಅವರು ಕೇಳಿದಾಗ. ಆಗ ಗುರೂಜಿ ಶಾಕಿಂಗ್ ಉತ್ತರ ನೀಡಿದ್ದಾರೆ. ಅವರು ಕೊಟ್ಟ ಅನುಪಮಾ ! ಅಷ್ಟೇ ಹೇಳಿ ಸುಮ್ಮನಿದ್ದಿದ್ದರೆ ಚೆನ್ನಾಗಿತ್ತು. ಆದರೆ ಮುಂದುವರಿದು ಹೇಳಿದ ಗುರೂಜಿಯವರು, ” ಅನುಪಮಾ ಒಳಗೆ ಬರ್ಲಿ ಅನ್ನೋದು ಬಿಗ್ ಬಾಸ್‍ಗೆ ಆಸೆ ಇತ್ತು. ಎಷ್ಟು ಬಂಗಾರ ಇದೆ ಎಂದು ಗೊತ್ತಾದ ಮೇಲೆ ಒಳಗಡೆ ಕರೆಸುತ್ತಾರೆ ಎಂದ್ರೆ ಏನ್ ಅರ್ಥ ? ” ಎಂದು ಗುರೂಜಿ ಓಪನ್ ಆಗಿ ಮಾತಾಡಿದ್ದಾರೆ. ಗುರೂಜಿ ಮಾತು ಕೇಳಿದ ಅನುಪಮಾ ಗೌಡ ಸಹ ಶಾಕ್ ಆಗ್ತಾರೆ. ” ಅನುಪಮಾ ಗೆಲ್ಲಿಸಲು ಇದು ಮ್ಯಾಚ್ ಫಿಕ್ಸಿಂಗ್ ರೀತಿ ಇದೆ ” ಎಂದು ಆರ್ಯವರ್ಧನ್ ಗುರೂಜಿ ನೇರ ಆರೋಪ ಹೊರಿಸ್ತಾರೆ.

ಮ್ಯಾಚ್ ಫಿಕ್ಸಿಂಗ್ ಎಂದಿದ್ದಕ್ಕೆ ಸುದೀಪ್ ಕೆಂಡಮಂಡಲರಾಗಿದ್ದಾರೆ. ” ಮಾತು ಮೇಲೆ ನಿಗಾ ಇರಲಿ. ಹಾಗೆಲ್ಲಾ ಮಾತನಾಡಬೇಡಿ, ವಾಟ್ ಈಸ್ ದಟ್ ಮ್ಯಾಚ್ ಫಿಕ್ಸಿಂಗ್. ಅಲ್ಲಿ ಕೂತು ಆಡುವವರು ಏನ್ರಿ ಹಾಗಾದ್ರೆ ? “
ಬಿಗ್ ಬಾಸ್ ಮನೆಗೆ ಬಂದ ಇತರರಿಗೆ ಯೋಗ್ಯತೆ ಇಲ್ವಾ? ಎಲ್ಲ ಮೋಸ ಮಾಡಿ ಆಡ್ತಾ ಇದ್ದಾರಾ? ” ಎಂದು ಸುದೀಪ್ ಪ್ರಶ್ನೆ ಮಾಡ್ತಾರೆ. ಆಗ ಗುರೂಜಿ ವಿಷಯ ವನ್ನು ತೇಲಿಸಿ ” ನಾನ್ ಜನರಲ್ ಆಗಿ ಹೇಳಿದೆ ” ಎಂದು ಹೇಳ್ತಾರೆ.

” ಬೇರೆಯವರು ನಿಮ್ಮ ವ್ಯಕ್ತಿತ್ವದ ಬಗ್ಗೆ ಮಾತನಾಡಿದ್ರೆ ಇಷ್ಟು ಉದ್ದ ಹೇಳ್ತೀರಿ. ಈ ವೇದಿಕೆ ಮರ್ಯಾದೆ ತೆಗೆದ್ರೆ, ಸತ್ಯವಾಗಲೂ ಹೇಳ್ತಿನಿ, ನಮಗೂ, ನಿಮಗೂ ಬೀಳುತ್ತೆ ” ಎಂದು ಸುದೀಪ್, ಆರ್ಯವರ್ಧನ್ ಗುರೂಜಿಗೆ ವಾರ್ನಿಂಗ್ ಕೊಡ್ತಾರೆ. ಅಂತೂ ಬಿಗ್ ಬಾಸ್ ನಲ್ಲಿ ಮ್ಯಾಚ್ ಫಿಕ್ಸಿಂಗ್ ತರಹದ ಏನಾದರೂ ನಡಿತಾ ನಡೆಯುತ್ತಾ ಎನ್ನುವ ಬಗ್ಗೆ ನೋಡುಗರಲ್ಲಿ ಪ್ರಶ್ನೆ ಎದ್ದಿದೆ.