Home Interesting Baba vang prediction : ಎಚ್ಚರ ಜನರೇ | ಮುಂದಿನ 3 ತಿಂಗಳಲ್ಲಿ ನಿಜವಾಗಲಿದೆ ಈ...

Baba vang prediction : ಎಚ್ಚರ ಜನರೇ | ಮುಂದಿನ 3 ತಿಂಗಳಲ್ಲಿ ನಿಜವಾಗಲಿದೆ ಈ 4 ಭವಿಷ್ಯಗಳು!!!

Hindu neighbor gifts plot of land

Hindu neighbour gifts land to Muslim journalist

ದಿನವೂ ಒಂದಲ್ಲ ಒಂದು ಸಮಸ್ಯೆ ನಮ್ಮನ್ನು ಕಾಡುತ್ತದೆ. ಸಮಸ್ಯೆಗಳಿಗೆ ಪರಿಹಾರ ಪಡೆಯಲು ಹೆಚ್ಚಿನವರು ಜ್ಯೋತಿಷಿಗಳ ಇಲ್ಲವೇ ಗುರುಗಳನ್ನೂ ಬೇಟಿಯಾಗಿ ಪರಿಹಾರ ಕಂಡುಕೊಳ್ಳುತ್ತಾರೆ.

ಭವಿಷ್ಯವನ್ನು ತಿಳಿದುಕೊಳ್ಳುವ ತವಕ, ಮುಂದೇನು ನಡೆಯುತ್ತದೆ ಎಂಬುದನ್ನೂ ಅರಿಯುವ ಕೌತುಕ ಹೆಚ್ಚಿನವರಿಗೆ ಇರುವುದು ಸಹಜ. ಭವಿಷ್ಯವಾಣಿ ಹೇಳಿದ್ದದೆಲ್ಲವು ನಿಜವಾಗುತ್ತದೆ ಎಂದು ನಂಬಿ ಪೂಜೆಗಳ ಜೊತೆಗೆ ಹೋಮ ಹವನ ಮಾಡುವ ಕ್ರಮವೂ ಹೆಚ್ಚಾಗಿ ನಡೆಯುತ್ತವೆ. ಐಶ್ವರ್ಯ ವೃದ್ಧಿಗಾಗಿ ಮನೆಯವರಲ್ಲಿ ಶಾಂತಿ ನೆಲೆಸಲು ನಾನಾ ರೀತಿಯ ತಂತ್ರಗಳನ್ನು ಮಾಡುವುದು ವಾಡಿಕೆ.

ಬಲ್ಗೇರಿಯಾದ ಖ್ಯಾತ ಭವಿಷ್ಯಕರ್ತೆಯಾಗಿದ್ದ ಬಾಬಾ ವಂಗಾ ಭವಿಷ್ಯವಾಣಿಗಳು ಯಾವಾಗಲೂ ಸಾಕಷ್ಟು ದೊಡ್ದ ಮಟ್ಟದಲ್ಲಿ ಚರ್ಚಾ ವಿಷಯವಾಗಿ ಬಿಟ್ಟಿದೆ. ಅವರು ನುಡಿದಿರುವ ಅನೇಕ ಭವಿಷ್ಯವಾಣಿಗಳು 2022 ರಲ್ಲಿ ಹೇಳಿರುವ 2 ಭವಿಷ್ಯವಾಣಿಗಳು ನಿಜವಾಗಿದ್ದು, ಈ ವರ್ಷಕ್ಕೆ ಒಟ್ಟು 6 ಭವಿಷ್ಯವಾಣಿಗಳನ್ನು ಹೇಳಿದ್ದಾರೆ.

ಮುಂಬರುವ ದಿನಗಳಲ್ಲಿ ಇತರ ನಾಲ್ಕು ಭವಿಷ್ಯವಾಣಿಗಳು ಸಹ ನಿಜವಾಗಬಹುದು ಎಂಬ ಆತಂಕ ಜನರಲ್ಲಿ ಮನೆ ಮಾಡಿದೆ.
ಬಾಬಾ ವೆಂಗಾ ಅವರು 2022 ಕ್ಕೆ ಏಷ್ಯಾದ ಕೆಲವು ದೇಶಗಳು ಮತ್ತು ಆಸ್ಟ್ರೇಲಿಯಾದಲ್ಲಿ ಪ್ರವಾಹದ ಮುನ್ಸೂಚನೆ ನೀಡಿದ್ದು, ಅದು ನೈಜವಾಗಿ ನಡೆದು ಅಚ್ಚರಿ ಮೂಡಿಸಿತ್ತು.

ಇದಲ್ಲದೆ, ಇತ್ತೀಚೆಗಷ್ಟೇ ಆಸ್ಟ್ರೇಲಿಯಾದಲ್ಲಿ ಮಳೆಯ ನಂತರ ಪ್ರವಾಹದಂತಹ ಪರಿಸ್ಥಿತಿ ಉದ್ಭವಿಸಿದ ಘಟನೆ ನಡೆದಿದೆ. ಪಾಕಿಸ್ತಾನದಲ್ಲೂ ಕೂಡ ಪ್ರವಾಹ ಉಂಟಾಗಿ ಪರಿಸ್ಥಿತಿ ಹದಗೆಟ್ಟಿದ್ದಲ್ಲದೆ ಈ ಸಂದರ್ಭದಲ್ಲಿ 1000 ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡ ಶೋಚನೀಯ ಪರಿಸ್ಥಿತಿ ಕೂಡ ಎದುರಾಗಿತ್ತು.


ಮತ್ತೊಂದು ಭವಿಷ್ಯ ನುಡಿದಿದ್ದ ಬಾಬಾ ವೆಂಗಾ ಅವರು ಕೆಲವು ನಗರಗಳಲ್ಲಿ ನೀರಿನ ಕೊರತೆ ಮತ್ತು ಬರಗಾಲದ ಮುನ್ಸೂಚನೆಯನ್ನೂ ನೀಡಿದ್ದರು. ಅವರು ನುಡಿದ ಭವಿಷ್ಯ ನಿಜವೆಂಬತೆ ಪೋರ್ಚುಗಲ್ ನೀರಿನ ಕೊರತೆಯ ಎದುರಿಸುತ್ತಿದ್ದು, ಇಟಲಿಯಲ್ಲಿ ಬರಗಾಲದ ಸಮಸ್ಯೆ ಮುನ್ನೆಲೆಗೆ ಬಂದಿದೆ.

ಇದೀಗ ಎರಡು ಭವಿಷ್ಯ ನಿಜವಾದ ಬೆನ್ನಲ್ಲೇ, ನಾಲ್ಕು ಭವಿಷ್ಯವಾಣಿಗಳ ಮೇಲೆ ಜನರ ದೃಷ್ಟಿ ನೆಟ್ಟಿದೆ ಎಂದರೂ ತಪ್ಪಾಗಲಾರದು.
2022 ರಲ್ಲಿ ಬಾಬಾ ವಂಗಾ ಅವರು ಕರೋನಾ ವೈರಸ್ ನಂತರ ಹೊಸ ಮಾರಣಾಂತಿಕ ವೈರಸ್ ಅನ್ನು ಊಹಿಸಿದ್ದಾರೆ.

ಇದು ಸೈಬೀರಿಯಾದಿಂದ ಪ್ರಾರಂಭವಾಗಬಹುದಾಗಿದ್ದು, ಕ್ಷಾಮದಂತಹ ಪರಿಸ್ಥಿತಿ ಮತ್ತು ವರ್ಚುವಲ್ ರಿಯಾಲಿಟಿ ಹೆಚ್ಚಳದ ಕುರಿತು ಕೂಡ ಅವರು ಭವಿಷ್ಯ ನುಡಿದಿದ್ದಾರೆ.

ಬಾಬಾ ವಂಗಾ ಅವರ ಭವಿಷ್ಯವಾಣಿಯ ಪ್ರಕಾರ, 2022 ರಲ್ಲಿ ಭಾರತದಲ್ಲಿ ಬರಗಾಲದಂತಹ ಪರಿಸ್ಥಿತಿಯನ್ನು ಊಹಿಸಲಾಗಿದೆ.

ಈ ವರ್ಷದಲ್ಲಿ ವಿಶ್ವದ ಹಲವು ದೇಶಗಳಲ್ಲಿ ತಾಪಮಾನದಲ್ಲಿ ಕುಸಿಯಲಿದ್ದು ಮತ್ತು ಮಿಡತೆಗಳ ದಾಳಿ ಹೆಚ್ಚುವ ಭೀತಿ ಇದ್ದು ಇದರಿಂದ ಬೆಳೆ ನಾಶಕ್ಕೆ ಕಾರಣವಾಗಲಿದೆ ಎಂದು ಬಾಬಾ ವೆಂಗಾ ಹೇಳಿದ್ದಾರೆ.


ಇದು ಭಾರತದ ಮೇಲೆ ಆಳವಾದ ಪರಿಣಾಮ ಬೀರಲಿದ್ದು, ಹಸಿವಿನಿಂದ ಸಾವುಗಳು ಸಂಭವಿಸುವ ಪರಿಸ್ಥಿತಿ ಎದುರಾಗಲಿದೆ ಎಂದು ಮುಂದಾಗುವ ದುರಂತಗಳ ಬಗ್ಗೆ ಬಾಬಾ ವೆಂಗಾ ಮಾಹಿತಿ ನೀಡಿದ್ದಾರೆ.


ಬಾಬಾ ವಂಗಾ ಭವಿಷ್ಯ ನಿಜವಾಗುವ ಆತಂಕದ ಜೊತೆಗೆ ಮುಂದೇನು ಕಾದಿದೆಯೋ ಎಂದು ಭಯವನ್ನು ಜನರಲ್ಲಿ ಹುಟ್ಟು ಹಾಕಿದೆ.