BIG NEWS : ಕಡಿಮೆ ವೇಗದ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಹೊಂದಿರುವವರೇ ಇಲ್ಲಿದೆ ನಿಮಗೊಂದು ಮುಖ್ಯವಾದ ಮಾಹಿತಿ!!!

ಸರ್ಕಾರವು ದ್ವಿಚಕ್ರ ವಾಹನದ ಯಾವುದೇ ದಾಖಲೆ ಮತ್ತು ಅನುಮತಿ ಇಲ್ಲದ ವಾಹನ ವಿತರಣೆ ಬಗ್ಗೆ ಗಮನ ಹರಿಸಿ ಕೆಲವು ದ್ವಿಚಕ್ರ ವಾಹನ ತಯಾರಕ ಕಂಪನಿಗಳು ಮತ್ತು ಡೀಲರ್ ಗಳು ಹೆಚ್ಚಿನ ಬ್ಯಾಟರಿ ಕೆಪ್ಯಾಸಿಟಿ ಹೊಂದಿರುವ ಹಾಗೂ ಪ್ರತಿ ಗಂಟೆಗೆ 40 ರಿಂದ 55 ಕಿ.ಮೀ.ವೇಗದಲ್ಲಿ ಚಲಿಸುವ ವಾಹನಗಳನ್ನು ಅನುಮತಿ ಇಲ್ಲದೆ ವಿಮೆ ಹಾಗೂ ವಾಹನ ದೃಢೀಕರಣ ಇಲ್ಲದೆ ವಿತರಿಸುತ್ತಿದ್ದಾರೆ ಎಂದು ಖಾತ್ರಿ ಪಡಿಸಿಕೊಂಡಿದೆ.

ಅಂದರೆ ಕಡಿಮೆ ವೇಗದ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಕುರಿತಂತೆ ಖಾತ್ರಿ ಪಡಿಸಿಕೊಂಡು ಕೇಂದ್ರ ರಸ್ತೆ ಸಾರಿಗೆ ಸಚಿವಾಲಯ, ರಾಜ್ಯಗಳಿಗೆ ಶುಕ್ರವಾರದಂದು ಮಹತ್ವದ ಮಾಹಿತಿಯನ್ನು ರವಾನೆ ಮಾಡಿದೆ.

ಯಾವುದೇ ಎಲೆಕ್ಟ್ರಿಕ್ ದ್ವಿಚಕ್ರ ವಾಹನ 0.25 kW ಸಾಮರ್ಥ್ಯದ 30 ನಿಮಿಷಗಳ ಪವರ್ ಹೊಂದಿದ್ದರೆ, ಇವುಗಳ ವೇಗ ಪ್ರತಿ ಗಂಟೆಗೆ 25 ಕಿ.ಮೀ ಒಳಗಿದ್ದರೆ ಹಾಗೂ ಬ್ಯಾಟರಿ ರಹಿತವಾಗಿ 60 ಕೆಜಿ ಒಳಗಿದ್ದರೆ ಮಾತ್ರ ಮೋಟಾರ್ ವೆಹಿಕಲ್ ಎಂದು ಪರಿಗಣಿಸಲಾಗುವುದಿಲ್ಲ.

ಒಟ್ಟಾರೆಯಾಗಿ ಸರ್ಕಾರದ ನಿಯಮಗಳ ಪಾಲನೆ ಆಗದೆ ಇರುವುದರಿಂದ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು, ಮೋಟಾರ್ ವೆಹಿಕಲ್ ಎಂದು ಪರಿಗಣಿಸದಿರಲು ಈ ಕಾರಣವಾಗಿ ಕೇಂದ್ರ ರಸ್ತೆ ಸಾರಿಗೆ ಸಚಿವಾಲಯ ಕೆಲವೊಂದು ನಿಯಮಗಳನ್ನು ರೂಪಿಸಿಕೊಂಡಿದೆ.

Leave A Reply

Your email address will not be published.