ಚೀನಾದಲ್ಲಿ ಹೆಚ್ಚಿದ ಕೊರೊನಾ ರೂಪಾಂತರಿ ಹಾವಳಿ | ಮತ್ತೆ ಲಾಕ್ ಡೌನ್ !!!

ಮತ್ತೆ ಕೋವಿಡ್ ಹಾವಳಿ ಹೆಚ್ಚಾಗಿದೆ. ಈ ಸೋಂಕು ಈಗ ಅನೇಕ ಮಂದಿಯಲ್ಲಿ ಕಾಡುತ್ತಿದ್ದು ಕೋವಿಡ್ ಪರೀಕ್ಷೆ ದಿನದಿಂದ ದಿನಕ್ಕೆ‌ ಹೆಚ್ಚುತ್ತಲೇ ಇದೆ. ಹೌದು. ಈ ಪ್ರಕರಣ ಮತ್ತೆ ಚೀನಾದಲ್ಲಿ ಕಾಣಿಸಿಕೊಂಡಿದೆ. ಚೀನಾದ ಶಾಂಘೈ ಮತ್ತು ಶೆನ್‌ಜೆನ್ ಸೇರಿದಂತೆ ಚೀನಾದ ಪ್ರಮುಖ ನಗರಗಳಲ್ಲಿ ಕೋವಿಡ್‌ ಸೋಂಕುಗಳು ಹೆಚ್ಚಾಗಿದೆ.

ಮಾಧ್ಯಮ ವರದಿಗಳ ಪ್ರಕಾರ, ಕೆಲವು ಸ್ಥಳೀಯ ಅಧಿಕಾರಿಗಳು ತರಾತುರಿಯಲ್ಲಿ ಶಾಲೆಗಳನ್ನು ಮನರಂಜನಾ ಸ್ಥಳಗಳು ಮತ್ತು ಪ್ರವಾಸಿ ಸ್ಥಳಗಳನ್ನು ಮುಚ್ಚಿದ್ದಾರೆ.

ಇಷ್ಟು ಮಾತ್ರವಲ್ಲದೇ, ಕೋವಿಡ್ -19 ಹೆಚ್ಚುತ್ತಿರುವ ಏಕಾಏಕಿ ಮಧ್ಯೆ ಚೀನಾ ಮತ್ತೊಮ್ಮೆ ಲಾಕ್‌ಡೌನ್ ಮತ್ತು ಪ್ರಯಾಣ ನಿರ್ಬಂಧಗಳನ್ನು ವಿಧಿಸಿದೆ. ಹೊಸ ಒಮಿಕ್ರಾನ್(Omicron) ಉಪ-ವ್ಯತ್ಯಯಗಳಾದ bf.7 ಮತ್ತು ba.5.1.7 ಚೀನಾದಲ್ಲಿ ಪತ್ತೆಯಾಗಿವೆ ಎಂದು ಈಗಾಗಲೇ ವರದಿಯಾಗಿದೆ. ಪತ್ತೆಯಾಗಿರುವ ಈ ರೂಪಾಂತರಗಳು ಹೆಚ್ಚು ಸಾಂಕ್ರಾಮಿಕವಾಗಿವೆ ಎಂದು ವರದಿ ತಿಳಿಸಿದೆ.

ಹಾಗಾಗಿ ಕೋವಿಡ್ -19 ಪ್ರಕರಣ ಹೆಚ್ಚುತ್ತಿರುವ ಕಾರಣ ಚೀನಾದಲ್ಲಿ ಮತ್ತೊಮ್ಮೆ ಲಾಕ್‌ಡೌನ್ ಮತ್ತು ಪ್ರಯಾಣ ನಿರ್ಬಂಧಗಳನ್ನು ವಿಧಿಸಲಾಗಿದೆ. ಅಧಿಕೃತ ಪ್ರಕಟಣೆಗಳ ಪ್ರಕಾರ, ಶಾಂಘೈನ ಮೂರು ಡೌನ್‌ಟೌನ್ ಜಿಲ್ಲೆಗಳು ಸೋಮವಾರ ಇಂಟರ್ನೆಟ್ ಹಬ್‌, ಕೆಫೆಗಳಂತಹ ಮನರಂಜನಾ ಸ್ಥಳಗಳನ್ನು ತಾತ್ಕಾಲಿಕವಾಗಿ ಮುಚ್ಚಲು ಆದೇಶ ನೀಡಿದೆ ಎನ್ನಲಾಗಿದೆ.

ಚೀನಾದಲ್ಲಿ ಹೊಸ Omicron ಉಪ-ವ್ಯತ್ಯಯಗಳಾದ bf.7 ಮತ್ತು ba.5.1.7 ಪತ್ತೆಯಾಗಿವೆ. ಈ ಹೊಸ ಸೋಂಕು ಹೆಚ್ಚಿನ ಪ್ರಸರಣದೊಂದಿಗೆ ಹೆಚ್ಚು ಅಪಾಯಕಾರಿ ಸಾಂಕ್ರಾಮಿಕವಾಗಿದೆ ಎಂದು ವರದಿಯಾಗಿದೆ. ಹೊಸದಾಗಿ ಪತ್ತೆಯಾದ BF.7, BA.2.75.2 ಎಂದು ಕರೆಯಲಾಗುತ್ತದೆ. ಕೋವಿಡ್‌ನ Omicron ರೂಪಾಂತರ BA.5.2ರ ರೂಪಾಂತರವಾಗಿದೆ.

ಸ್ಥಳೀಯ ವರದಿಗಳ ಪ್ರಕಾರ, ಅಕ್ಟೋಬರ್ 4ರಂದು ಯಾಂಟೈ ಮತ್ತು ಶೋಗುವಾನ್ ನಗರದಲ್ಲಿ BF.7 ಪತ್ತೆಯಾಗಿದೆ. ಗ್ಲೋಬಲ್ ಉಪ-ರೂಪಾಂತರ BA.5.1.7ನ್ನು ಮೊದಲು ಚೀನಾದಲ್ಲಿ ಕಂಡು ಹಿಡಿಯಲಾಯಿತು.

ವಿಶ್ವ ಆರೋಗ್ಯ ಸಂಸ್ಥೆಯು (WHO) ಸಹ ಚೀನಾದಲ್ಲಿ ಕಂಡುಬರುವ ಹೆಚ್ಚು ಸಾಂಕ್ರಾಮಿಕ Bf.7 ಸಬ್‌ವೇರಿಯಂಟ್ ವಿರುದ್ಧ ಎಚ್ಚರಿಕೆ ನೀಡಿದೆ.

Leave A Reply

Your email address will not be published.