ಬೆಂಗಳೂರು ಜನರಿಗೆ ಶಾಕ್ ನೀಡಿದ ರೆಡ್ ಸಿಗ್ನಲ್

ಬೆಂಗಳೂರಿನ ಜನರಿಗೆ ಟ್ರಾಫಿಕ್ ಅನ್ನೋದು ಸಾಮಾನ್ಯವಾಗಿದೆ ಬಿಡಿ. ಎಮರ್ಜೆನ್ಸಿ ಯಲ್ಲಿ ಹೊರಟಾಗ ರೆಡ್ ಲೈಟ್ ಬಿಟ್ಟು ಅಂದ್ರೆ ಸಿಟ್ಟು ನೆತ್ತಿಗೆ ಏರುತ್ತೆ. ಅತೀ ಹೆಚ್ಚು ಟ್ರಾಫಿಕ್ ಇರುವ ಪ್ರದೇಶ ಬೆಂಗಳೂರು ಎಂಬುದು ಸಮೀಕ್ಷೆಯ ಪ್ರಕಾರ ತಿಳಿದು ಬಂದಿದೆ. ಇದೀಗ ಟ್ರಾಫಿಕ್ ನಲ್ಲಿ ಕೆಂಪು ಬಟನ್ ಅನ್ನೆ ನೋಡುತ್ತಿರುವಂತಹ ಚಾಲಕರಿಗೆ ಆಶ್ಚರ್ಯವಾಗುವಂತೆ ಮಾಡಿದೆ.

ಕೆಂಪು ಸಿಗಲ್ಲಲ್ಲಿ ದುಂಡಗಿದ ಆಕಾರದಲ್ಲಿ ಇಷ್ಟು ದಿವಸ ಬರುತ್ತಿದ್ದಂತಹ ಲೈಟ್ ಕೆಲವೊಂದು ಮುಖ್ಯ ಪ್ರದೇಶಗಳಲ್ಲಿ ಹಾರ್ಟ್ ಸಿಂಬಲ್ ನಲ್ಲಿ ರೆಡ್ ಕಲರ್ ತೋರಿಸುತ್ತದೆ. ಇದನ್ನು ನೋಡಿ ಚಾಲಕರಿಗೆ ಹುಬ್ಬೇರಿಸುವಂತೆ ಮಾಡಿದೆ.

ಯಾಕಾಗಿ ಈ ಹಾರ್ಟ್?ಬೆಂಗಳೂರು ಮಣಿಪಾಲ ಆಸ್ಪತ್ರೆ, ಬೆಂಗಳೂರು ಸಂಚಾರಿ ಪೊಲೀಸರು ಹಾಗೂ ಬೆಂಗಳೂರು ಮಹಾ ನಗರ ಪಾಲಿಕೆ ಜಂಟಿಯಾಗಿ ಹೊಸ ಕಾರ್ಯಕ್ರಮ ಆರಂಭಿಸಿದ್ದು, ತುರ್ತು ಪರಿಸ್ಥಿತಿಯಲ್ಲಿ ಜನರಿಗೆ ವೈದ್ಯಕೀಯ ಸೌಲಭ್ಯ ಸಿಗುವುದು ಅತ್ಯಗತ್ಯವಾಗಿದೆ. ಹೀಗಾಗಿ ಜನರು ಆಂಬುಲೆನ್ಸ್ ಗೆ ಕರೆ ಮಾಡುವ ಬದಲು ತಕ್ಷಣವೇ ಒದಗಿಸುವ ಹಾಗೆ ಕ್ಯೂಆರ್ ಕೋಡ್ ಹಾಕಲಾಗಿದೆ.

ಬೆಂಗಳೂರಿನ ಜನರು ಹಾರ್ಟ್ ಸಿಟಿ ಮತ್ತು ಸ್ಮಾರ್ಟ್ ಜನರಾಗಿ ಬದಲಾಗುವಂತೆ ಈ ಕಾರ್ಯಕ್ರಮದ ಆಶಯವಾಗಿದೆ. ವಿಶ್ವ ಹೃದಯದ ದಿನ(ಸೆ.29)ದ ಅಂಗವಾಗಿ ನಗರದ 15 ಟ್ರಾಫಿಕ್‌ ಸಿಗ್ನಲ್‌ ಲೈಟ್‌ಗಳಲ್ಲಿ ಹೃದಯಾಕಾರದ ಚಿಹ್ನೆಗಳನ್ನು ಅಳವಡಿಸಲಾಗಿದೆ. ಇನ್ನು ಹೃದಯದ ಆರೋಗ್ಯದ ಬಗ್ಗೆಯ ಜಾಗೃತಿ ಮೂಡಿಸುವ ಆಡಿಯೋ ಸಂದೇಶಗಳನ್ನು ಸಹ ಬೆಂಗಳೂರಿನ ಕೆಲವು ಪ್ರಮುಖ ಪ್ರದೇಶಗಳಲ್ಲಿ ಪ್ಲೇ ಮಾಡಲಾಗುತ್ತದೆ ಎಂದು ಮಣಿಪಾಲ ಆಸ್ಪತ್ರೆ ತಿಳಿಸಿದೆ.

ಈ ಬಗ್ಗೆ ಮಣಿಪಾಲ ಆಸ್ಪತ್ರೆ ನೀಡಿರುವ ಮಾಹಿತಿ ಪ್ರಕಾರ, ಜನರಿಗೆ ವೈದ್ಯಕೀಯ ತುರ್ತು ಸಂದರ್ಭಗಳಲ್ಲಿ ಈ ಕ್ಯೂ ನೂ ಆರ್ ಕೋಡ್ ಬಳಕೆಯಾಗಲೆಂದು ಬೆಂಗಳೂರು ನಗರದ ಎಲ್ಲಾ ಟ್ರಾಫಿಕ್‌ ಸಿಗ್ನಲ್‌ಗಳಲ್ಲಿ ಅಂಟಿಸಲಾಗಿದೆ.

ಒಟ್ಟಿನಲ್ಲಿ ಬೆಂಗಳೂರು ನಗರ ಜನರ ಆರೋಗ್ಯದ ವಿಷಯದಲ್ಲಿ ಅಪ್ಡೇಟ್ ಆಗ್ತಾ ಇದೆ ಅನ್ನೋದು ಖುಷಿಯ ವಿಚಾರ.

Leave A Reply

Your email address will not be published.