ಹಾಲು ಉತ್ಪಾದಕರಿಗೆ ಪ್ರೋತ್ಸಾಹ ಧನ, ರೈತರ ಮಕ್ಕಳಿಗೆ ವಿದ್ಯಾರ್ಥಿ ವೇತನ – ಸಿಎಂ

Share the Article

ರಾಯಚೂರು ತಾಲೂಕಿನ ಗಿಲ್ಲೆಸುಗೂರಿನಲ್ಲಿ ನಡೆದೆ ಜನ ಸಂಕಲ್ಪ ಯಾತ್ರೆಯಲ್ಲಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ ಅವರು ಜನರಿಗೆ ಸಿಹಿ ಸುದ್ದಿಯ ಜೊತೆಗೆ 2023ಕ್ಕೆ ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಬರಲಿದೆ. ನಮ್ಮ ಸರ್ಕಾರ ಹಾಲು ಉತ್ಪಾದಕರಿಗೆ ಪ್ರೋತ್ಸಾಹ ಧನ ನೀಡಿದೆ. ಮತ್ತು ರೈತರ ಮಕ್ಕಳಿಗೆ ವಿದ್ಯಾರ್ಥಿ ವೇತನ​ ನೀಡಿದ್ದೇವೆ ಎಂದು ಹೆಮ್ಮೆಯಿಂದ ಹೇಳಿಕೊಂಡರು.

ಬೊಮ್ಮಾಯಿ ಆರ್​​ಎಸ್​​ಎಸ್ ಕೈಗೊಂಬೆ ಅಂತಾ ಸಿದ್ಧರಾಮಯ್ಯ ಆರೋಪ ಮಾಡಿರುವ ಹಿನ್ನೆಲೆಯಲ್ಲಿ ತಿರುಗೇಟು ನೀಡಿದ ಸಿಎಂ ಅವರು ಕಾಂಗ್ರೆಸ್​​ಗೆ ಆರ್​​ಎಸ್​​ಎಸ್ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ. ಮತ್ತು ‘ಆರ್​​ಎಸ್​ಎಸ್​​ ಇಡೀ ಭಾರತವನ್ನು ಒಗ್ಗೂಡಿಸುತ್ತಿದೆ. ಆರ್​​ಎಸ್​​ಎಸ್ ದೇಶದಲ್ಲಿ ದೀನದಲಿತರ ಸೇವೆ ಮಾಡುತ್ತಿದೆ. ಕಾಂಗ್ರೆಸ್​​ಗೆ ಆರ್​​ಎಸ್​​ಎಸ್ ಬಗ್ಗೆ ಮಾತನಾಡುವ ಹಕ್ಕಿಲ್ಲ. ಸಿದ್ದರಾಮಯ್ಯ ಸಮಾಜವಾದಿಯಿಂದ ಬಂದಿರುವವರು, ಕಾಂಗ್ರೆಸ್ ಸೇರಿದ ದಿನವೇ ಸಮಾಜವಾದಿ ಮನೆಯಲ್ಲಿ ಮುಳುಗಿದ್ದೀರಿ ಎಂದು ವಾಗ್ದಾಳಿ ನಡೆಸಿದರು.

ರಾಯಚೂರಿನಲ್ಲಿ ಜನರಿಗೆ ಹೆಚ್ಚಿನ ರೀತಿಯಲ್ಲಿ ಆರ್ಥಿಕವಾಗಿ ಮುನ್ನೇರುವ ಭರವಸೆ ನೀಡಿ, ಮತ್ತೊಮ್ಮೆ ತಮ್ಮ ಪಕ್ಷದ ಗುರುತನ್ನು ರಾಜಾರೋಷವಾಗಿ ಸಾಭಿತು ಪಡಿಸಿದರು.

Leave A Reply