Home latest Viral video : ಜಿಮ್ ನಲ್ಲೇ ಕಾದಾಟ ಮಾಡಿದ ಮಹಿಳಾಮಣಿಗಳು | ಯಾಕೆ ಗೊತ್ತೇ?

Viral video : ಜಿಮ್ ನಲ್ಲೇ ಕಾದಾಟ ಮಾಡಿದ ಮಹಿಳಾಮಣಿಗಳು | ಯಾಕೆ ಗೊತ್ತೇ?

Hindu neighbor gifts plot of land

Hindu neighbour gifts land to Muslim journalist

ಹೆಣ್ಣು ಒಲಿದರೆ ನಾರಿ.. ಮುನಿದರೆ ಮಾರಿ ಎಂಬ ರೀತಿಯ ಜಟಾಪಟಿ ನಡೆದಿರುವ ಪ್ರಕರಣ ವೊಂದು ವರದಿಯಾಗಿದೆ. ಮಾತಿನಲ್ಲಿ ಕಾಲೆಳೆದುಕೊಂಡು ಕಿತ್ತಾಡುವ ಜನರ ನಡುವೆ ಕೈ ಮಿಲಾಯಿಸಿ ಕಿತ್ತಾಡುವ ವಿಡಿಯೋ ತುಣುಕುಗಳು ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡಿ ಸಂಚಲನ ಮೂಡಿಸಿದೆ.

ದಿನಂಪ್ರತಿ ಒಂದಲ್ಲ ಒಂದು ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿ, ಕೆಲವು ನೋಡುಗರಿಗೆ ನಗಲು ಪ್ರೇರಣೆಯಾದರೆ, ಮತ್ತೆ ಕೆಲವು ನಡುಕ ಹುಟ್ಟಿಸುತ್ತಿದೆ. ಸದ್ಯ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿರುವ ಅಂತಹ ಒಂದು ವೀಡಿಯೊ ನೋಡುಗರನ್ನು ನಕ್ಕು ನಕ್ಕು ಹೊಟ್ಟೆ ಹುಣ್ಣಾಗುವಂತೆ ಮಾಡಿದೆ.

ಜಿಮ್ ಗೆ ಬಂದಿರುವ ಮಹಿಳೆಯರು ಜುಟ್ಟು ಹಿಡಿದುಕೊಂಡು ಗಲಾಟೆ ಮಾಡುತ್ತಿರುವ ದೃಶ್ಯವು , ಸಿಸಿಟಿವಿ ಕ್ಯಾಮಾರಾದಲ್ಲಿ ಸೆರೆಯಾಗಿದ್ದು, ಈ ವಿಡಿಯೋ ಸಖತ್ ವೈರಲ್ ಆಗಿ ಸಿಕ್ಕಾಪಟ್ಟೆ ಟ್ರೆಂಡ್ ಆಗುತ್ತಿದೆ.ಈ ವೀಡಿಯೊದಲ್ಲಿ, ಗುಲಾಬಿ ಬಣ್ಣದ ಬಿಗಿಯುಡುಪು ಧರಿಸಿದ ಮಹಿಳೆ ತೂಕದ ಯಂತ್ರವನ್ನು ಬಳಸಲು ತನ್ನ ಸರದಿಗಾಗಿ ಕಾಯುತ್ತಿದ್ದು, ಅಷ್ಟರಲ್ಲಿ ಹಸಿರು ಟೀ ಶರ್ಟ್ ತೊಟ್ಟ ಮತ್ತೊಬ್ಬ ಮಹಿಳೆ ಆ ಯಂತ್ರದತ್ತ ಧಾವಿಸಿ ಅವಳನ್ನು ತಳ್ಳುವ ಪ್ರಸಂಗ ಜರುಗಿದೆ.

https://twitter.com/Baharkekalesh/status/1579022442219311104?ref_src=twsrc%5Etfw%7Ctwcamp%5Etweetembed%7Ctwterm%5E1579022442219311104%7Ctwgr%5Ea23f86a077a652aa2766f7fbf09dc2f8f1f90c58%7Ctwcon%5Es1_c10&ref_url=http%3A%2F%2Fapi-news.dailyhunt.in%2F

ಇದರಿಂದ ಇಬ್ಬರ ನಡುವೆ ಜಗಳವಾಗಿ, ಜಗಳ ತಾರಕಕ್ಕೇರಿ, ಒಬ್ಬರಿಗೊಬ್ಬರು ಕಪಾಳಮೋಕ್ಷ ಮಾಡಿಕೊಂಡು,ಕೂದಲನ್ನು ಎಳೆದಾಡಿಕೊಳ್ಳುತ್ತಾರೆ. ಈ ಪ್ರಹಸನ ವನ್ನು ನೋಡಿದ ಉಳಿದ ಮಹಿಳೆಯರು ಅವರನ್ನು ತಡೆಯಲು ಮುಂದಾಗಿ, ವಿಫಲರಾಗಿದ್ದಾರೆ.

ಆದರೆ ಈ ಘಟನೆ ಎಲ್ಲಿ ನಡೆದಿದೆ ಎಂಬ ಬಗ್ಗೆ ನಿಖರ ಮಾಹಿತಿ ಲಭ್ಯವಾಗಿಲ್ಲ. ಆದರೆ, ಈ ಕಾದಾಟದ ಹಿಂದಿನ ಕಾರಣವನ್ನು ತಿಳಿಯಲು ಜನರು ಉತ್ಸುಕರಾಗಿದ್ದಾರೆ. ನೆಟ್ಟಿಗರು, ಮಹಿಳೆಯರ ಈ ಕಿತ್ತಾಟದ ಬಗ್ಗೆ ತಮಾಷೆ ಮಾಡುತ್ತಿದ್ದು, ಒಬ್ಬ ಬಳಕೆದಾರರು ತಮಾಷೆಯಾಗಿ ಬರೆದಿದ್ದಾರೆ.

ಇಬ್ಬರ ಜಗಳ ಮೂರನೇಯವರಿಗೆ ಲಾಭ ಎಂಬಂತೆ ನೋಡುಗರಿಗೆ ಈ ವಿಡಿಯೋ ನಗು ತರಿಸಿರುವುದಂತು ಸ್ಪಷ್ಟ.