ಗಂಧದ ಗುಡಿಗೆ ಹಾಗೆ ಹೋಯಿತು ಒಂದು ಕೋಟಿ!

Share the Article

ಅಪ್ಪು ತೀರಿ ಹೋಗಿ ಒಂದು ವರ್ಷಗಳೇ ಆಗುತ್ತಾ ಬಂತು. ಆದ್ರೆ ಅವರ ನೆನಪುಗಳು ಮಾತ್ರ ಅಮರ,ಮಧುರ. ಅವ್ರು ನಟಿಸಿರುವ ಅದೆಷ್ಟೋ ಸಿನಿಮಾ, ಅದೆಷ್ಟು ಸಿನಿಮಾಗಳಿಗೆ ಹಾಡಿದ್ದನ್ನು ಈಗಲೂ ಕೂಡ ಬಿಡುಗಡೆ ಆಗುತ್ತಲೇ ಇದೆ. ಅಪ್ಪು ಇದ್ದಾರೆ ಹೋಗೋಣ ಎಂಬ ಮನೋಭಾವ ಎಂತವರಿಗಾದರೂ ಬರುತ್ತಾ ಇದೆ. ಇದೀಗ ಗಂಧದ ಗುಡಿ ಕೂಡ ಅಷ್ಟೇ ಸದ್ದನ್ನು ಮಾಡ್ತಾ ಇದೆ.

ಹೌದು.9 ಅಕ್ಟೋಬರ್ ರಂದು PRK ಪ್ರೊಡಕ್ಷನ್ ಅಡಿಯಲ್ಲಿ ಯೂಟ್ಯೂಬ್ ನಲ್ಲಿ ಬಿಡುಗಡೆಗೊಂಡಿತು. ಹಲವಾರು ಡ್ರೋನ್ ಶಾಟ್ಸ್, ಅಡ್ವೆಂಚರ್ ನೊಂದಿಗೆ ಡಾ. ಪುನೀತ್ ರಾಜಕುಮಾರ್ ಮತ್ತು ಅಮೋಘವರ್ಷ ಸಖತ್ತಾಗಿ ಕಂಡಿದ್ದಾರೆ. ಇದನ್ನು ನೋಡ್ತಾ ಇದ್ರೆ ಅಪ್ಪು ಇನ್ನು ನಮ್ಮೊಂದಿಗೆ ಇದ್ದಾರೇನೋ ಅಂತ ಅನ್ಸುತ್ತೆ.

ಇದು ಪುನೀತ್​ ರಾಜ್​ಕುಮಾರ್​ ಅವರ ಕನಸಿನ ಪ್ರಾಜೆಕ್ಟ್ ಅಂತಾನೆ ಹೇಳಬಹುದು. ಅ.28ರಂದು ಥಿಯೇಟರ್​ನಲ್ಲಿ ಈ ಸಾಕ್ಷ್ಯಚಿತ್ರ ಬಿಡುಗಡೆ ಆಗಲಿದೆ. ಸದ್ಯ ಟ್ರೇಲರ್​ ಅಂತೂ ಸಕ್ಕತ್ತಾಗಿ ಓಡ್ತಾ ಇದೆ. ಒಂದೇ ದಿನದಲ್ಲಿ ಇಷ್ಟೊಂದು ವೀವ್ಸ್ ಆಯ್ತಾ ಅಂತ ನೀವು ಶಾಕ್ ಆಗಬೇಡಿ.

ಯೂಟ್ಯೂಬ್​ನಲ್ಲಿ ‘ಗಂಧದ ಗುಡಿ’ ಟ್ರೇಲರ್​ ಸಖತ್ ಫೇಮಸ್ ಆಗಿದೆ. ಒಂದೇ ದಿನದಲ್ಲಿ ಬರೋಬ್ಬರಿ 1 ಕೋಟಿ ಬಾರಿ ವೀಕ್ಷಣೆ ಕಂಡಿದೆ. ಆ ಮೂಲಕ ಹೊಸ ಸೆನ್ಸೇಷನ್​ ಸೃಷ್ಟಿ ಮಾಡಿದೆ ಅಂತ ಹೇಳಿದ್ರು ತಪ್ಪಾಗಲಾರದು.

ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಅನೇಕರು ಗಂಧದ ಗುಡಿ ಟ್ರೈಲರ್ ಬಗ್ಗೆ ಟ್ವೀಟ್​ ಮಾಡಿದ್ದಾರೆ.

ಅದರಿಂದ ಇನ್ನಷ್ಟು ಸಿನಿಮಾದ ಬಗ್ಗೆ ಕುತೂಹಲ ಹೆಚ್ಚಾಗಿದೆ.ಒಟ್ಟಿನಲ್ಲಿ ಅಕ್ಟೋಬರ್ 28 ಎಲ್ಲಾ ಚಿತ್ರಮಂದಿರಗಳು ತುಂಬಿ ತುಳುಕುತ್ತೆ ಅಂತ ಹೇಳಿದ್ರು ತಪ್ಪಾಗಲಾರದು.

Leave A Reply