Home latest ರಿವರ್ಸ್ ಬಂದ ನೆರೆಮನೆಯ ಕಾರಿನಡಿಗೆ ಸಿಲುಕಿದ 2 ವರ್ಷದ ಕಂದಮ್ಮ‌ | ಚಕ್ರದಡಿ ಸಿಲುಕಿ ದಾರುಣ...

ರಿವರ್ಸ್ ಬಂದ ನೆರೆಮನೆಯ ಕಾರಿನಡಿಗೆ ಸಿಲುಕಿದ 2 ವರ್ಷದ ಕಂದಮ್ಮ‌ | ಚಕ್ರದಡಿ ಸಿಲುಕಿ ದಾರುಣ ಸಾವು

Hindu neighbor gifts plot of land

Hindu neighbour gifts land to Muslim journalist

ಕಾರನ್ನು ರಿವರ್ಸ್ ತೆಗೆಯುವ ಸಂದರ್ಭದಲ್ಲಿ, ಎರಡು ವರ್ಷದ ಕಂದಮ್ಮವೊಂದು ಚಕ್ರಕ್ಕೆ ಸಿಲುಕಿ ಸಾವೀಗೀಡಾದ ಘಟನೆ ರಾಷ್ಟ್ರ ರಾಜಧಾನಿಯಲ್ಲಿ ನಡೆದಿದೆ. ವಾಹನ ಚಾಲಾಯಿಸುವಾಗ ಮೈಯೆಲ್ಲ ಕಣ್ಣಾಗಿರಬೇಕು ಎಂದು ಹೇಳುತ್ತಾರೆ. ಏಕೆಂದರೆ ಸ್ವಲ್ಪ ಯಾಮಾರಿದ್ರು ಏನೆಲ್ಲಾ ಅನಾಹುತಗಳು ಆಗುತ್ತವೆ ಎನ್ನುವುದಕ್ಕೆ ಈ ಘಟನೆ ಸಾಕ್ಷಿ.

ಕಾರು ರಿವರ್ಸ್ ತೆಗೆಯುವ ಸಂದರ್ಭದಲ್ಲಿ ಪುಟ್ಟ ಕಂದ ಸಾವಿಗೀಡಾಗಿದೆ.

ಘಟನೆಗೆ ಸಂಬಂಧಿಸಿದಂತೆ ಕಾರು ಚಾಲಕನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಈ ದುರ್ಘಟನೆ ಅಕ್ಟೋಬರ್ 09 ರಂದು ದೆಹಲಿಯ ರೋಹಿಣಿ ಪ್ರದೇಶದಲ್ಲಿ ಈ ನಡೆದಿದೆ.

ಎರಡು ವರ್ಷದ ಮಗು ತನ್ನ ಮನೆಯ ಮುಂದೆ ಗೇಟ್‌ನ ಹೊರಭಾಗದ ರಸ್ತೆಯಲ್ಲಿ ಆಟವಾಡುತ್ತಿದ್ದಾಗ ಈ ಘಟನೆ ನಡೆದಿದೆ‌. ಈ ವೇಳೆ ನೆರೆ ಮನೆಯವರು ಮಗು ಆಟವಾಡುವುದನ್ನು ನೋಡದೇ ಏಕಾಏಕಿ ಕಾರನ್ನು ರಿವರ್ಸ್‌ ತೆಗೆದುಕೊಂಡಿದ್ದಾರೆ. ಪರಿಣಾಮ ಮಗು ಕಾರಿನ ಚಕ್ರಕ್ಕೆ ಸಿಲುಕಿ ಸ್ಥಳದಲ್ಲೇ ಸಾವನ್ನಪ್ಪಿದೆ.

ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಘಟನೆಯ ಬಳಿಕ ಪೊಲೀಸರು ಕಾರು ಚಾಲಕನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.