Nayanata – Vignesh Shivan : ನಯನ್ ವಿಘ್ನೇಶ್ ಮನೆಯಲ್ಲಿ ಟ್ವಿನ್ ಟ್ವಿನ್ ಸದ್ದು!

ಮೊನ್ನೆ ಮೊನ್ನೆಯಷ್ಟೇ ಮದುವೆಯಾದ ನಯನತಾರಾ ಹಾಗೂ ವಿಘ್ನೇಶ್ ಶಿವನ್ ಅವಳಿ ಮಕ್ಕಳಿಗೆ ಪೋಷಕರಾಗಿದ್ದಾರೆ. ಹೌದು ಇದೇನು ಆಶ್ಚರ್ಯ ಅಂತೀರಾ? ಆದರೆ ಇದು ಸತ್ಯ. ಅಂದಹಾಗೇ, ಈ ವರ್ಷದ ಆರಂಭದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಯನತಾರಾ ಮತ್ತು ವಿಘ್ನೇಶ್ ಶಿವನ್ (Nayantara – Vignesh Shivan) ಅವಳಿ ಮಕ್ಕಳನ್ನು ಪಡೆದಿದ್ದಾರೆ. ಈ ಬಗ್ಗೆ ಅವರು ಭಾನುವಾರ, ಅಂದರೆ ಇಂದು ( ಅಕ್ಟೋಬರ್ 9) ಈ ಮಾಹಿತಿಯನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

ಈ ದಂಪತಿಗಳು ಬಾಡಿಗೆ ತಾಯ್ತನ (Surrogacy) ಅಥವಾ ದತ್ತು ಪಡೆಯುವ ಮೂಲಕ ಮಕ್ಕಳನ್ನು ಪಡೆದಿದ್ದಾರೆ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ನಿಖರವಾದ ವಿವರಗಳು ಇನ್ನೂ ಇಲ್ಲ. ಆದರೆ ನಯನ ತಾರಾ ಹಾಗೂ ವಿಘ್ನೇಶ್ ದಂಪತಿಗಳ ಫೋಟೋಗಳನ್ನು ನೋಡಿದ ಅಭಿಮಾನಿಗಳಿಗೆ ಸಖತ್ ಖುಷಿಯಾಗಿದೆ.

“ನಯನ ಮತ್ತು ನಾನು ಅಮ್ಮ ಮತ್ತು ಅಪ್ಪ ಆಗಿದ್ದೇವೆ. ನಮಗೆ ಅವಳಿ ಗಂಡು ಮಕ್ಕಳಾಗಿವೆ. ನಮ್ಮ ಎಲ್ಲಾ ಪ್ರಾರ್ಥನೆ, ನಮ್ಮ ಪೂರ್ವಜರ ಆಶೀರ್ವಾದ ಎಲ್ಲಾ ಒಳ್ಳೆಯ ಅಭಿವ್ಯಕ್ತಿಗಳ ಹಾರೈಕೆಯ ಫಲವಾಗಿ ನಮಗೆ ಈ ಮಕ್ಕಳಾಗಿವೆ. ನಿಮ್ಮೆಲ್ಲರ ಆಶೀರ್ವಾದ ನಮಗೆ ಬೇಕು” ಎಂದು ವಿಘ್ನೇಶ್ ಬರೆದಿದ್ದಾರೆ.

https://twitter.com/VigneshShivN/status/1579094363095052288?ref_src=twsrc%5Etfw%7Ctwcamp%5Etweetembed%7Ctwterm%5E1579094363095052288%7Ctwgr%5Ef5702ee967a6ffa9e56d9c1b53987418dbb375ca%7Ctwcon%5Es1_c10&ref_url=http%3A%2F%2Fapi-news.dailyhunt.in%2F

ಇದಕ್ಕೂ ಮುನ್ನ ಈ ದಂಪತಿಗಳು ಮಕ್ಕಳೊಂದಿಗೆ ಇರುವ ಫೋಟೋಗಳನ್ನು ಹಂಚಿಕೊಂಡಿದ್ದರು. ಆವಾಗ ಕೂಡಾ ವಿಘ್ನೇಶ್ ತಾವು ಭವಿಷ್ಯಕ್ಕಾಗಿ ಅಭ್ಯಾಸ ಮಾಡುತ್ತಿದ್ದೇವೆ ಎಂಬರ್ಥದಲ್ಲಿ ಬರೆದಿದ್ದರು. ಆವಾಗಲೇ ನಯನ್ ಅಭಿಮಾನಿಗಳು ನಯನತಾರಾ ಗರ್ಭಿಣಿಯಾ ಎಂಬ ಸಂಶಯ ಹೊರಹಾಕಿದ್ದರು. ಆದರೀಗ ಈಗ ಈ ದಂಪತಿ ಬಾಡಿಗೆ ತಾಯ್ತನದ ಸಹಾಯದಿಂದ ಮುದ್ದು ಮಕ್ಕಳನ್ನು ಸ್ವಾಗತಿಸಿದ್ದಾರೆ ಎಂಬಂತೆ ಅರ್ಥ ಕೊಡುತ್ತಿದೆ ಈ ಫೋಟೋಗಳು.

Leave A Reply

Your email address will not be published.