PFI ನಿಂದ ಬಿಜೆಪಿ ಶಾಸಕನಿಗೆ ಸೇಡಿನ ಪತ್ರ | ಮೋದಿಗೆ ಸರ್ ತನ್ ಸೆ ಜುದಾ ಶಿಕ್ಷೆ, ಅಯೋಧ್ಯೆ, ಕೃಷ್ಣಮಂದಿರದ ಮೇಲೆ ಆತ್ಮಾಹುತಿ ದಾಳಿ ಎಚ್ಚರಿಕೆ

Share the Article

ಕೇಂದ್ರ ಸರಕಾರ ಪಿಎಫ್ ಐ (ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ) ಹಾಗೂ ಅಂದರ ಅಂಗ ಸಂಸ್ಥೆಗಳ, ಸಂಘಟನೆಗಳನ್ನು ನಿಷೇಧಿಸಿದೆ. ಭಯೋತ್ಪದನಾ ಕೃತ್ಯಕ್ಕೆ ನೆರವು, ಆರ್ಥಿಕ ಸಹಾಯ ಮಾಡಿದ ಪಿಎಫ್ಐ ಸಂಘಟನೆಯನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ.

ಇದೀಗ ಪಿಎಫ್ಐ ಸಂಘಟನೆ ಪ್ರತೀಕಾರದ ಪತ್ರವೊಂದನ್ನು ಬರೆದಿದೆ. ಈ ಪತ್ರದಲ್ಲಿ ಆಯೋಧ್ಯೆ ರಾಮ ಮಂದಿರ, ಮಥುರಾ ಕೃಷ್ಣ ಮಂದಿರದ ಮೇಲೆ ಆತ್ಮಾಹುತಿ ದಾಳಿ ನಡೆಸುವುದಾಗಿ ಎಚ್ಚರಿಕೆ ನೀಡಲಾಗಿದೆ. ಇನ್ನು ಪ್ರಧಾನಿ ನರೇಂದ್ರ ಮೋದಿಗೆ ಸರ್ ತನ್ ಸೆ ಜುದಾ ಶಿಕ್ಷೆ ನೀಡುವುದಾಗಿ ಎಚ್ಚರಿಸಲಾಗಿದೆ. ಇಷ್ಟೇ ಅಲ್ಲ ನಿಷೇಧಕ್ಕೆ ದೊಡ್ಡ ಮಟ್ಟದಲ್ಲಿ ಪ್ರತೀಕಾರಾ ತೀರಿಸುವುದಾಗಿ ಕೂಡಾ ಹೇಳಿದೆ.

ಈ ಪತ್ರ ಮಹಾರಾಷ್ಟ್ರ ಬಿಜೆಪಿ ಶಾಸಕ ವಿಜಯ್ ಕುಮಾರ್ ದೇಶ್‌ಮುಖ್ ಅವರಿಗೆ ಕಳುಹಿಸಲಾಗಿದೆ. ಪಿಎಫ್ಐ ನಾಯಕ ಮೊಹಮ್ಮದ್ ಶಫಿ ಬಿರಾಜ್‌ದಾರ್ ಹೆಸರಿನಲ್ಲಿ ಈ ಪತ್ರ ಬಂದಿದೆ. ಈ ಕುರಿತು ವಿಜಯ್ ಕುಮಾರ್ ದೇಶ್‌ಮುಖ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಪಿಎಫ್ಐ ಸಂಘಟನೆ ನಿಷೇಧಕ್ಕೆ(PFI Ban) ಸೇಡು ತೀರಿಸಿಕೊಳ್ಳುವುದು ಖಂಡಿತಾ ಎಂದು ಪತ್ರದಲ್ಲಿ ಬರೆಯಲಾಗಿದ್ದು, ಈ ಪತ್ರವನ್ನು ಹಿಂದಿಯಲ್ಲಿ ಬರೆಯಲಾಗಿದೆ. ಹಿಂದೂಗಳ(Hindu) ಪವಿತ್ರ ಕ್ಷೇತ್ರ ಆಯೋಧ್ಯೆ(Ayodhya) ಹಾಗೂ ಮಥುರಾದ (Mathura) ಮೇಲೆ ಆತ್ಮಾಹುತಿ ದಾಳಿ ಮಾಡಿ ಸ್ಫೋಟಿಸಲಾಗುವುದು ಎಂದು ಪತ್ರದಲ್ಲಿ ಬರೆಯಲಾಗಿದೆ.

Leave A Reply

Your email address will not be published.