Viral Love Story : 78ರ ಅಜ್ಜನ ಪ್ರೀತಿಯಲ್ಲಿ ಬಿದ್ದ 18 ರ ಬಾಲೆ | ಮೂರು ವರ್ಷದ ಡೀಪ್ ಲವ್, ಈಗ ಮದುವೆ
ಈ ಪ್ರೀತಿಗೆ ಕಣ್ಣಿಲ್ಲವೋ ಅಥವಾ ಪ್ರೀತಿ ಮಾಡುವಾಗ ಪ್ರೀತಿಸಿದವರಿಗೆ ಕಣ್ಣು ಕಾಣಿಸುದಿಲ್ಲವೋ ಗೊತ್ತಿಲ್ಲ. ಇದಕ್ಕೆಲ್ಲ ಪ್ರೀತಿಯ ನಶೆಯಲ್ಲಿ ಬಿದ್ದವರೇ ಉತ್ತರ ನೀಡಬೇಕು. ಈ ಮಾತು ಈಗ ಯಾಕೆ ಹೇಳ್ತಾ ಇದ್ದೀವಿ ಎಂದರೆ, ಸಾಮಾಜಿಕ ಮಾಧ್ಯಮದಲ್ಲಿ ಬೆರಗಾಗುವ ವಿಡಿಯೋವೊಂದು ವೈರಲ್ ಆಗಿದೆ. ಇಲ್ಲಿ 78 ವರ್ಷದ ಹಣ್ಣು ಹಣ್ಣು ಮುದುಕನನ್ನು 18 ರ ಬಾಲೆಯೋರ್ವಳು ಪ್ರೀತಿಸಿ ಮದುವೆಯಾಗಿದ್ದಾಳೆ. ನಂಬೋಕೆ ಕಷ್ಟ ಆಗ್ತಿದೆ ಅಲ್ವಾ…ಆದರೆ ಇದು ಸತ್ಯ.
ಇದು ನೆಟ್ಟಿಗರ ಆಶ್ಚರ್ಯಕ್ಕೆ ಕಾರಣವಾಗಿದೆ. 78 ವರ್ಷದ ಅಜ್ಜನನ್ನು 3 ವರ್ಷ ಪ್ರೀತಿಸಿ 18 ರ ಬಾಲೆ ಮದುವೆಯಾದ ವಿಡಿಯೋ ವೈರಲ್ ಆಗಿದೆ. ಈ ವಧು-ವರರಿಬ್ಬರೂ ಫಿಲಿಪೈನ್ಸ್ ನಿವಾಸಿಗಳು. ಇಬ್ಬರೂ 3 ವರ್ಷಗಳ ಕಾಲ ಸಂಬಂಧದಲ್ಲಿದ್ದರು. ಬಳಿಕ ಒಬ್ಬರನ್ನೊಬ್ಬರು ಮದುವೆಯಾಗಲು ನಿರ್ಧಾರ ಮಾಡಿದ್ದಾರೆ. ಎರಡೂ ಕುಟುಂಬಗಳು ವಧು – ವರರ ನಿರ್ಧಾರವನ್ನು ಮನಃಸ್ಪೂರ್ತಿಯಾಗಿ ಬೆಂಬಲಿಸಿದ್ದಾರೆ.
ಮದುಮಗಳು 18 ವರ್ಷದ ಹಲೀಮಾ ಅಬ್ದುಲ್ಲಾ ಮತ್ತು ವರ 78 ವರ್ಷದ ರೈತ ರಶಾದ್ ಮಂಗಾಕೋಪ್ . ಇವರಿಬ್ಬರು ಪರಸ್ಪರ ಇಷ್ಟಪಟ್ಟು ಮದುವೆಯಾಗಿದ್ದಾರೆ. ವಧು ಮತ್ತು ವರನ ವಯಸ್ಸಿನ ನಡುವೆ 60 ವರ್ಷಗಳ ವ್ಯತ್ಯಾಸವಿದ್ದರೂ ಪ್ರೀತಿ ಮಾತ್ರ ಅಗಾಧವಿದೆ. ಅಂದ ಹಾಗೇ ಈಗ ದಂಪತಿಗಳಾಗಿರುವ ಇವರು ಮೊದಲು ಭೇಟಿಯಾದದ್ದು ಡಿನ್ನರ್ ಪಾರ್ಟಿಯಲ್ಲಿ. ಪಾರ್ಟಿಯಲ್ಲಿ ಅದೇನಾಯ್ತೋ ಅಂತು ಮನಸ್ಸು ಒಂದಾಯಿತು.
ಈ ಜೋಡಿಯ ಲವ್ ಸ್ಟೋರಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಮದುವೆಯ ನಂತರ, ದಂಪತಿಗಳು ಸಾಧ್ಯವಾದಷ್ಟು ಬೇಗ ತಮ್ಮ ಕುಟುಂಬವನ್ನು ಪ್ರಾರಂಭಿಸಲು ಬಯಸುವುದಾಗಿ ಹೇಳಿದ್ದು, ಇಬ್ಬರೂ ಇಸ್ಲಾಮಿಕ್ ಸಂಪ್ರದಾಯದಂತೆ ವಿವಾಹವಾಗಿದ್ದಾರೆ.