KSRTC ಗೆ 5 ಕೋಟಿ ಕಟ್ಟಲು PFI ಗೆ ಹೈಕೋರ್ಟ್ ಆದೇಶ | ಗಾಯದ ಮೇಲೆ ಬರೆ, ಬರೆಯ ಮೇಲೆ ಫೈನಿನ ಗೆರೆ !
ಕಳೆದ ಕೆಲವು ವರ್ಷಗಳಿಂದ ನಡೆಯುತ್ತಿರುವ ಗಲಭೆ, ದೊಂಬಿ, ಹತ್ಯೆ ಪ್ರಕರಣಗಳಲ್ಲಿ ನೇರ ಭಾಗಿಯಾದ ಹಾಗೂ ಸಹಕಾರ ನೀಡಿದ ಹಿನ್ನೆಲೆಯಲ್ಲಿ ಯುಎಪಿಎ ಕಾಯ್ದೆ ಅಡಿಯಲ್ಲಿ ಮುಂದಿನ ಐದು ವರ್ಷಗಳ ಕಾಲ ಮತೀಯ ಸಂಘಟನೆ ಪಿ.ಎಫ್.ಐ ನ್ನು ಕೇಂದ್ರ ಸರ್ಕಾರ ಬ್ಯಾನ್ ಮಾಡಿದ್ದು, ಈ ನಡುವೆ ಪಿ.ಎಫ್.ಐ ಬ್ಯಾಂಕ್ ಖಾತೆಗಳನ್ನು ಕೂಡಾ ಎನ್.ಐ.ಎ ವಶಕ್ಕೆ ಪಡೆದು ಪರಿಶೀಲಿಸಿದ್ದು ಕೋಟ್ಯಾಂತರ ಹಣ ಇತ್ತು ಎಂದು ವರದಿ ನೀಡಿದ ಬೆನ್ನಲ್ಲೇ ಕೇರಳ ಕೆ.ಎಸ್.ಆರ್.ಟಿ.ಸಿ ಪಿ.ಎಫ್.ಐ ವಿರುದ್ಧ ನೀಡಿದ್ದ ದೂರಿನ ತೀರ್ಪು ಹೊರಬಿದ್ದಿದ್ದು, ಪಿ.ಎಫ್.ಐ ಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಕಳೆದ ಒಂದು ವಾರಗಳಿಂದ ದೇಶಾದ್ಯಂತ ರಾಷ್ಟೀಯ ತನಿಖಾ ಸಂಸ್ಥೆ ಎನ್.ಐ.ಎ ಪಿ.ಎಫ್.ಐ ನಾಯಕರ ಮನೆ ಮನೆಗೆ ದಾಳಿ ನಡೆಸಿದ್ದ ಘಟನೆಯನ್ನು ವಿರೋಧಿಸಿ ಎಲ್ಲಾ ಕಡೆಗಳಲ್ಲಿ ಪ್ರತಿಭಟನೆ ನಡೆದಿದ್ದು, ಕೇರಳದಲ್ಲಿ ಪ್ರತಿಭಟನೆಯು ಗಲಭೆಯತ್ತ ಸಾಗಿತ್ತು. ಸರ್ಕಾರದ ಸ್ವತ್ತುಗಳಿಗೆ ಹಾನಿಮಾಡಿದ ಉದ್ರಿಕ್ತರ ಗುಂಪು, ಸರ್ಕಾರಿ ಬಸ್ಸುಗಳ ಗಾಜು ಒಡೆದು ಕುಕೃತ್ಯ ಎಸಗಿದ ಹಿನ್ನೆಲೆಯಲ್ಲಿ ಕೆ.ಎಸ್.ಆರ್.ಟಿ.ಸಿ ಹೈಕೋರ್ಟ್ ಮೊರೆ ಹೋಗಿತ್ತು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಹೈಕೋರ್ಟ್ ತೀರ್ಪು ನೀಡಿದ್ದು, ಹಾನಿ ಎಸಗಿದ ಪಿ.ಎಫ್.ಐ ಸಂಘಟನೆಗೆ ಬರೋಬ್ಬರಿ 5.20 ಕೋಟಿ ದಂಡ ವಿಧಿಸಿದ್ದು, ಕೂಡಲೇ ಪಾವತಿಸುವಂತೆ ಆದೇಶ ಹೊರಡಿಸಿದೆ. ಅಲ್ಲದೇ ರಾಜ್ಯದ ಎಲ್ಲೆಲ್ಲಿ ಪ್ರತಿಭಟನೆ ನಡೆದು ಹಾನಿಯಾಗಿದೆ ಎನ್ನುವ ಬಗ್ಗೆ ಕೋರ್ಟ್ ಸುಮೋಟೋ ಕೇಸ್ ದಾಖಲಿಸಿ, ಪರಿಹಾರದ ಮೊತ್ತ ಪಾವತಿಯಾಗುವ ವರೆಗೆ ಜಾಮೀನು ನೀಡದಂತೆ ತಾಕೀತು ಮಾಡಿದೆ.
ಈ ಎಲ್ಲಾ ಬೆಳವಣಿಗೆಗಳಿಂದ ಸಂಘಟನೆಗೆ ಗಾಯದ ಮೇಲೆ ಬರೆ ಎಳೆದಂತಾಗಿದ್ದು, ನಿಷೇಧಿತ ಸಂಘಟನೆಯ ಸದಸ್ಯತ್ವ ಪಡೆಯುವವರ ಮೇಲೂ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ. ಸದ್ಯ ಪಿ.ಎಫ್.ಐ ಒಂದು ಬ್ಯಾನ್ ಆದ ಸಂಸ್ಥೆಯಾಗಿದ್ದು, ಈ ಹಿಂದೆ ನಡೆಸಿದ ಕುಕೃತ್ಯಗಳಿಗೆ, ಹಲವಾರು ಕೊಲೆಗಳ ಹಿಂದೆ ಸಹಕಾರ ನೀಡಿದ ಪಾಪದ ಕೃತ್ಯಗಳ ಶಾಪ ಬಿಡದೇ ತಟ್ಟಿದೆ ಎನ್ನುತ್ತಿದೆ ಪ್ರಜ್ಞಾವಂತ ನಾಗರಿಕ ಸಮಾಜ.