ಹಾಡಹಗಲೇ ದಾರಿ ಮಧ್ಯೆ ಗುಂಡು ಹಾರಿಸಿ ಪ್ರೇಯಸಿಯ ಜೀವ ತೆಗೆದ | ಮರುಘಳಿಗೆಯಲ್ಲೇ ಅಪಘಾತದಲ್ಲಿ ಹಾರಿತು ಯುವಕನ ಪ್ರಾಣ | ಭೀಕರ ದೃಶ್ಯ ಸಿಸಿ ಟಿವಿಯಲ್ಲಿ ಸೆರೆ

Share the Article

ಯುವಕನೋರ್ವ ಕ್ಷುಲ್ಲಕ ಕಾರಣಕ್ಕೆ ತನ್ನ ಪ್ರೇಯಸಿಯನ್ನು ದಾರಿಮಧ್ಯೆಯೇ ಗುಂಡಿಕ್ಕಿ ಕೊಂದ ಘಟನೆಯೊಂದು ನಡೆದಿದೆ. ಈ ಭೀಕರ ಘಟನೆ ಮುಂಬೈನಲ್ಲಿ ನಡೆದಿದೆ.

ಮುಂಬೈನ ಬೊಯ್ಸರ್ ಎಂಬಲ್ಲಿ ಯುವಕನೊಬ್ಬ ತನ್ನ ಪ್ರೇಯಸಿಯನ್ನು ಹಾಡಹಗಲೇ ಗುಂಡಿಕ್ಕಿ ಕೊಂದಿದ್ದಾನೆ. ಈ ಘಟನೆ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಟೀಮಾ ಆಸ್ಪತ್ರೆಯ ಬಳಿ ಶ್ರೀಕೃಷ್ಣ ಯಾದವ್ ಮತ್ತವನ ಪ್ರೇಯಸಿ ನೇಹಾ ಮಹತೋ ಮಧ್ಯೆ ವಾಗ್ವಾದ ನಡಿದಿದೆ. ಈ ವೇಳೆ
ಈ ವೇಳೆ ಸಿಟ್ಟಿಗೆದ್ದ ಯಾದವ್ ತನ್ನ ಜೇಬಿನಿಂದ ಪಿಸ್ತೂಲ್ ತೆಗೆದು ನೇಹಾಗೆ ಗುಂಡು ಹಾರಿಸಿದ್ದಾನೆ.

ಯುವತಿ ಅಲ್ಲೇ ಸ್ಥಳದಲ್ಲೇ ಕುಸಿದು ಬಿದ್ದಿದ್ದಾಳೆ. ಈತ ಕೂಡಾ ತನ್ನ ತಲೆಗೆ ಶೂಟ್ ಮಾಡಲು ಪ್ರಯತ್ನ ಪಟ್ಟಿದ್ದಾನೆ ಎಂದು ವೀಡಿಯೋದಲ್ಲಿ ಕಂಡು ಬರುತ್ತಿದೆ. ಆಮೇಲೆ ನಿಧಾನಕ್ಕೆ ನಡೆದುಕೊಂಡು ಹೋದವ ಕೊನೆಗೆ ಹೋದ ದಾರಿಯಲ್ಲೇ ವಾಪಾಸ್ ಓಡಿದ್ದಾನೆ. ಸಾರ್ವಜನಿಕರ ಕೈಗೆ ಸಿಕ್ಕಿಬೀಳಬಹುದು ಅನ್ನೋ ಭಯದಲ್ಲಿ ಆರೋಪಿ ಶ್ರೀಕೃಷ್ಣ ಯಾದವ್ ಅಲ್ಲಿಂದ ಓಡಿದ್ದಾನೆ ಎಂದು ಶಂಕಿಸಲಾಗಿದೆ.

ಆದರೆ ಈ ವೇಳೆ ವೇಗವಾಗಿ ಬರ್ತಾ ಇದ್ದ ಯುದ್ಧ ವಾಹನವೊಂದಕ್ಕೆ ಡಿಕ್ಕಿ ಹೊಡೆದಿದ್ದಾನೆ. ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದ ಆತನನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಯ್ತು. ಆದರೆ ಆತ ಅಷ್ಟರಲ್ಲಿ ಮೃತಪಟ್ಟಿದ್ದ. ಮಾಡಿದ್ದುಣೋ ಮಹರಾಯ ಎಂಬಂತೆ ಕ್ಷುಲ್ಲಕ ಕಾರಣಕ್ಕೆ ಗೆಳತಿಯ ಪ್ರಾಣತೆಗೆದ ಯುವಕನಿಗೆ ವಿಧಿಯೇ ತಕ್ಕ ಶಿಕ್ಷೆ ಕೊಟ್ಟಿದೆ ಎಂದರೆ ತಪ್ಪೇನಿಲ್ಲ.

Leave A Reply