ಮಂಗಳೂರಿನಲ್ಲಿ ಪಿಎಫ್‌ಐ ಕಚೇರಿಗೆ ಬೀಗ ಜಡಿದ ಪೊಲೀಸರು

ಮಂಗಳೂರು : ಯುಎಪಿಎ ಕಾಯ್ದೆಯಡಿ ಕೇಂದ್ರ ಸರ್ಕಾರ ನಿಷೇಧಿಸಿರುವ ಪಿಎಫ್ಐ ಸೇರಿದಂತೆ 8 ಸಂಘಟನೆಗಳ ಪೈಕಿ ಮಂಗಳೂರು ನಗರದಲ್ಲಿರುವ ಪಿಎಫ್ಐ ಮತ್ತು ಸಿಎಫ್ಐ ಸಂಘಟನೆಗಳ ಕಚೇರಿಗಳನ್ನು ಪೊಲೀಸರು ಬೀಗ ಜಡಿದು ಸೀಲ್ ಮಾಡಿದ್ದಾರೆ.

 

ಮಂಗಳೂರು ನಗರ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ಸ್ಟೇಟ್ ಬ್ಯಾಂಕ್ ಬಳಿಯ ನೆಲ್ಲಿಕಾಯಿ ರಸ್ತೆಯಲ್ಲಿರುವ ಪಿಎಫ್ಐ ಕಚೇರಿ ಮತ್ತು ಬಂದರು ಪ್ರದೇಶದ ಅಝೀಝುದ್ದೀನ್ ರಸ್ತೆಯಲ್ಲಿರುವ ಸಿಎಫ್ಐ ಕಚೇರಿಗಳಲ್ಲಿ ಪರಿಶೀಲನೆ ಮಾಡಿ ಕಚೇರಿಗೆ ಬೀಗ ಹಾಕಿ ಸೀಲ್ ಹಾಕಿದ್ದಾರೆ.

ಈ ಕುರಿತು ಮಾತನಾಡಿರುವ ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಅವರು, ಕೇಂದ್ರ ಸರ್ಕಾರ 8 ಸಂಘಟನೆಗಳನ್ನು ನಿಷೇಧಿಸಿ ಅಧಿಸೂಚನೆ ಹೊರಡಿಸಿರುವ ಹಿನ್ನೆಲೆಯಲ್ಲಿ ಮಂಗಳೂರು ನಗರ ಕಮಿಷನರೇಟ್ ವ್ಯಾಪ್ತಿಯಲ್ಲಿರುವ ನಿಷೇಧಿತ ಸಂಘಟನೆಗಳಿಗೆ ಸೇರಿರುವ ಎಲ್ಲಾ ಸ್ಥಳಗಳಲ್ಲಿ ಪರಿಶೀಲನೆ ಮಾಡಿ ಸೀಜ್ ಮಾಡಿ ಸ್ಥಳಗಳನ್ನು ಸೀಲ್ ಮಾಡಲಾಗುತ್ತದೆ ಎಂದರು.

Leave A Reply

Your email address will not be published.