Home latest Ration Card : ಪಡಿತರ ಚೀಟಿದಾರರೇ ಈ ಕೆಲಸ ಈ ಕೂಡಲೇ ಮಾಡಿ

Ration Card : ಪಡಿತರ ಚೀಟಿದಾರರೇ ಈ ಕೆಲಸ ಈ ಕೂಡಲೇ ಮಾಡಿ

Hindu neighbor gifts plot of land

Hindu neighbour gifts land to Muslim journalist

ಬಡತನ ರೇಖೆಗಿಂತ ಕೆಳಗಿರುವ ದೇಶದ ಜನರಿಗಾಗಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಹಲವು ಯೋಜನೆಗಳನ್ನು ಜಾರಿಗೊಳಿಸುತ್ತಾ ಇರುತ್ತದೆ. ಈ ಯೋಜನೆಗಳಲ್ಲಿ ಪ್ರಮುಖವಾದದ್ದು ಪಡಿತರ ಚೀಟಿ. ಸರ್ಕಾರ ದೇಶದ ಸುಮಾರು 80 ಕೋಟಿ ಜನರಿಗೆ ಪಡಿತರ ಚೀಟಿ ಮೂಲಕ ಉಚಿತ ಪಡಿತರವನ್ನು ನೀಡುತ್ತಿದೆ. ಆಧಾರ್ ಕಾರ್ಡ್‌ನಂತೆ ಪಡಿತರ ಚೀಟಿ ಕೂಡ ಹಲವು ಕೆಲಸಗಳಿಗೆ ಬಹಳ ಮುಖ್ಯವಾಗಿದೆ.

ಪಡಿತರ ಚೀಟಿಯಲ್ಲಿ ಕುಟುಂಬದ ಪ್ರತಿಯೊಬ್ಬರ ಹೆಸರು ನೋಂದಣಿಯಾಗಿರುತ್ತದೆ. ಆದರೆ, ಪಡಿತರ ಚೀಟಿ ಬಳಕೆ ಹೆಚ್ಚಾಗುತ್ತಿರುವುದರಿಂದ ಕಾಲಕಾಲಕ್ಕೆ ನವೀಕರಿಸಲು ಸರಕಾರ ಸೂಚಿಸುತ್ತಿದೆ. ಇತ್ತೀಚೆಗೆ, ಪಡಿತರ ಚೀಟಿಯಲ್ಲಿ ಅಗತ್ಯ ನವೀಕರಣಗಳಿಗಾಗಿ ಸರ್ಕಾರ ಹಲವಾರು  ಸೂಚನೆಗಳನ್ನು ನೀಡಿದೆ. ಆ ನವೀಕರಣಗಳನ್ನು ಮಾಡದಿದ್ದರೆ, ತೊಂದರೆಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದೆ. ಹಾಗಾಗಿ ಪಡಿತರ ಚೀಟಿ ಫಲಾನುಭವಿಗಳು ತಮ್ಮ ಮೊಬೈಲ್ ಸಂಖ್ಯೆಯನ್ನು ತಮ್ಮ ಕಾರ್ಡ್‌ಗೆ ಲಿಂಕ್ ಮಾಡಲು ಸೂಚಿಸಲಾಗಿದೆ.

ಪಡಿತರ ಚೀಟಿಯಲ್ಲಿ ನಮೂದಿಸಿರುವ ಮೊಬೈಲ್ ಸಂಖ್ಯೆಯನ್ನು ನವೀಕರಿಸಲು ಸರ್ಕಾರ ಸೂಚನೆ ನೀಡಿದೆ. ಏಕೆಂದರೆ ಪಡಿತರ ಚೀಟಿ ಫಲಾನುಭವಿಗಳು ಆಗಾಗ ತಮ್ಮ ದೂರವಾಣಿ ಸಂಖ್ಯೆ ಬದಲಿಸಿಕೊಳ್ಳುವುದರಿಂ ಪಡಿತರ ಚೀಟಿಗೆ ತೊಂದರೆಯಾಗುತ್ತದೆ. ಇದರಿಂದಾಗಿ ಪಡಿತರ ಚೀಟಿಗೆ ಸಂಬಂಧಿಸಿದ ನವೀಕರಣಗಳ ವಿವರಗಳನ್ನು ಅವರಿಗೆ ಪಡೆಯಲು ಸಾಧ್ಯವಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ಪಡಿತರ ಚೀಟಿಯಲ್ಲಿನ ಮೊಬೈಲ್ ನಂಬರ್ ಅಪ್ ಡೇಟ್ ಮಾಡುವುದು ಅತೀ ಅಗತ್ಯವಾಗಿದೆ. ನಿಮ್ಮ ಪಡಿತರ ಚೀಟಿ ಹಳೆಯ ನಂಬರ್ ಹೊಂದಿದ್ದರೆ ಆತಂಕ ಪಡುವ ಅಗತ್ಯವಿಲ್ಲ.

ಆನ್‌ಲೈನ್‌ನಲ್ಲಿ ಸಂಖ್ಯೆ ನವೀಕರಿಸೋದು ಯಾವ ರೀತಿ ಇಲ್ಲಿದೆ!!!

ಪ್ರತಿ ರಾಜ್ಯಕ್ಕೂ ಪ್ರತ್ಯೇಕ ಪಡಿತರ ಚೀಟಿ ನೀಡಲಾಗುತ್ತದೆ.
ಪಡಿತರ ಚೀಟಿಯಲ್ಲಿ ಮೊಬೈಲ್ ಸಂಖ್ಯೆಯನ್ನು ನವೀಕರಿಸಲು ಬಯಸಿದರೆ, ನಿಮ್ಮ ರಾಜ್ಯದ ಪಡಿತರ ಕಾರ್ಡ್‌ ವೆಬ್‌ಸೈಟ್‌ಗೆ ಭೇಟಿ ನೀಡಬೇಕು
ಉದಾಹರಣೆಗೆ : ಪಡಿತರ ಕಾರ್ಡ್
ಅನ್ನು ನವೀಕರಿಸಲು ಮೊದಲು
https://nfs.karnatakagovt.nic.in/Citizen/UpdateMobile Number.aspx ವೆಬ್‌ಸೈಟ್ ಕ್ಲಿಕ್ ಮಾಡಿ. ಅದರ ನಂತರ ನೀವು ಪುಟದಲ್ಲಿ ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ನವೀಕರಿಸಿ ಆಯ್ಕೆ ಕಾಣುತ್ತದೆ.
ಅದರ ನಂತರ ಪಡಿತರ ಚೀಟಿದಾರರು ಆಧಾರ್ ಸಂಖ್ಯೆ, ಪಡಿತರ ಚೀಟಿ ಸಂಖ್ಯೆ, ಹೊಸ ಮೊಬೈಲ್ ಸಂಖ್ಯೆ ಸೇರಿದಂತೆ ಅಗತ್ಯ ಮಾಹಿತಿಯನ್ನು ಭರ್ತಿ ಮಾಡಬೇಕು.
ನಂತರ ಕ್ಯಾಪ್ಚಾ ಕೋಡ್ ಅನ್ನು ನಮೂದಿಸಿ ಮತ್ತು ಸೇವ್ ಆಯ್ಕೆಯನ್ನು ಕ್ಲಿಕ್ ಮಾಡಿ,
ಇದರ ನಂತರ ಹೊಸ ಮೊಬೈಲ್ ಸಂಖ್ಯೆಯನ್ನು ನಿಮ್ಮ ಪಡಿತರ ಚೀಟಿಯಲ್ಲಿ ನವೀಕರಿಸಲಾಗುತ್ತದೆ.

ಆಫ್‌ಲೈನ್‌ನಲ್ಲಿ ಮೊಬೈಲ್ ಸಂಖ್ಯೆ ನವೀಕರಿಸೋದು ಹೇಗೆ.?

ಅಲ್ಲ ಆಫ್‌ಲೈನ್ ಪ್ರಕ್ರಿಯೆಯ ಮೂಲಕವೂ
ಪಡಿತರ ಚೀಟಿಯಲ್ಲಿರುವ ಮೊಬೈಲ್ ಸಂಖ್ಯೆಯನ್ನು ಆನ್‌ಲೈನ್ ರೀತಿಯಲ್ಲೇ ನವೀಕರಿಸಬಹುದು. ಇದಕ್ಕಾಗಿ ಮೊದಲು ರಾಜ್ಯ ಆಹಾರ ಇಲಾಖೆಗೆ ಅರ್ಜಿ ಸಲ್ಲಿಸಬೇಕು. ಈ ಅರ್ಜಿಯನ್ನು ರಾಜ್ಯ ಆಹಾರ ಪ್ರಾಧಿಕಾರಕ್ಕೆ ನೀಡಬೇಕು. ಪಡಿತರ ಚೀಟಿಯ ನಕಲು, ನಿಮ್ಮ ಮೊಬೈಲ್ ಸಂಖ್ಯೆಯನ್ನು ಸಹ ನಮೂದಿಸಬೇಕಾಗುತ್ತದೆ. ಆದ್ದರಿಂದ ನಿಮ್ಮ ಎಲ್ಲಾ ವಿವರಗಳನ್ನ ಪರಿಶೀಲಿಸಿದ ನಂತ್ರ ಮೊಬೈಲ್ ಸಂಖ್ಯೆಯನ್ನು ನವೀಕರಿಸಲಾಗುತ್ತದೆ.