ಮೈಸೂರಿನ ಇಂಜಿನಿಯರಿಂಗ್ ವಿದ್ಯಾರ್ಥಿಗಳ ಮಹತ್ತರ ಸಾಧನೆ ! ದೃಷ್ಟಿದೋಷದವರಿಗೆ ಸ್ವಯಂ ಚಾಲಿತ ವಾಕಿಂಗ್ ಸ್ಟಿಕ್ ಆವಿಷ್ಕಾರ-ಶೀಘ್ರ ಮಾರುಕಟ್ಟೆಗೆ !

ಮೈಸೂರು: ದೃಷ್ಟಿ ದೋಷದಿಂದ ಬಳಳುತ್ತಿರುವವರು ಇನ್ನು ಯಾವುದೇ ಅಂಜಿಕೆ-ಭಯವಿಲ್ಲದೆ ನಡೆದಾಡಲು ಸಹಕಾರಿಯಾಗುವಂತಹ ಆಧುನಿಕ ತಂತ್ರಜ್ಞಾನದ ಸ್ವಯಂ ಚಾಲಿತ ವಾಕಿಂಗ್ ಸ್ಟಿಕ್ ನ್ನು ಮೈಸೂರಿನ ಇಂಜಿನಿಯರಿಂಗ್ ವಿದ್ಯಾರ್ಥಿಗಳ ಸಂಶೋಧನ ತಂಡವು ಪರಿಚಯಿಸಿದ್ದು, ಆರೋಗ್ಯ ಸುಧಾರಣೆಯೊಂದಿಗೆ ಆತ್ಮವಿಶ್ವಾಸದಿಂದ ಅಡ್ಡಾಡಲು ಸಹಕಾರಿಯಾಗುವಂತಹ ಈ ಸಾಧನ ಶೀಘ್ರವೇ ಅತೀ ಕಡಿಮೆ ಬೆಲೆಯಲ್ಲಿ ಮಾರುಕಟ್ಟೆಗೆ ಕಾಲಿಡಲಿದೆ.

ವಿದ್ಯಾರ್ಥಿನಿ ಸ್ಮೃತಿ ಬಾಳಿಗ ಹಾಗೂ ಸಹಪಾಠಿಗಳಾದ ಸಪ್ನಾ ಹೆಚ್ಎಂ, ಶ್ರೇಯಸ್ ಎನ್, ಯೋಗೇಶ್ ಗೌಡ ಈ ಸ್ವಯಂ ಚಾಲಿತ ಸ್ಟಿಕ್ ಗಳನ್ನು ಅಭಿವೃಧ್ದಿಪಡಿಸಿದ್ದು,ದೃಷ್ಟಿ ದೋಷ ಹೊಂದಿದ್ದ ವಿದ್ಯಾರ್ಥಿಯೊಬ್ಬರಿಗೆ ಪರೀಕ್ಷೆ ಬರೆಯಲು 3 ನೇ ವರ್ಷದ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿರುವ ಸ್ಮೃತಿ ಬಾಳಿಗ ಸಹಾಯ ಮಾಡಿದ್ದರು.

ಈ ವೇಳೆ ಅವರ ಸಮಸ್ಯೆಗಳನ್ನು, ಪ್ರಮುಖವಾಗಿ ರಸ್ತೆ ದಾಟುವಾಗ ಅವರ ಪರಿಸ್ಥಿತಿಯನ್ನು ಕಂಡು ಹೊಸ ಮಾದರಿಯ ಸ್ವಯಂಚಾಲಿತ ಸ್ಟಿಕ್ ಗಳನ್ನು ರೂಪಿಸಲು ಚಿಂತನೆ ನಡೆಸಿದ್ದರು ಎನ್ನಲಾಗಿದೆ. ಬಳಿಕ ಈ ಪ್ರಯತ್ನ ನಡೆಸಿದ್ದು, ಉಪನ್ಯಾಸಕರ ಸಹಕಾರ ಹಾಗೂ ಮಾರ್ಗದರ್ಶನ ಫಲ ನೀಡಿದೆ ಎನ್ನುತ್ತಾರೆ ವಿದ್ಯಾರ್ಥಿಗಳು.

ಎಲೆಕ್ಟ್ರಾನಿಕ್ಸ್& ಕಮ್ಯುನಿಕೇಷನ್ ವಿಭಾಗದ ಮುಖ್ಯಸ್ಥ, ಪ್ರೊಫೆಸರ್ ಡಾ. ಚಂದ್ರಶೇಖರ್ ಎಂ ಪಾಟೀಲ್, ಹಾಗೂ ಗಿರಿಜಾಂಬ ಡಿಎಲ್, ಸಹಾಯಕ ಪ್ರಾಧ್ಯಾಕಪರು, ಇ&ಸಿ ಅವರ ಮಾರ್ಗದರ್ಶನದಲ್ಲಿ ಈ ಅತ್ಯಾಧುನಿಕ ಸ್ಟಿಕ್ ಗಳನ್ನು ಅಭಿವೃದ್ಧಿಪಡಿಸಲಾಗಿದ್ದು, ಶೀಘ್ರ ಮಾರುಕಟ್ಟೆಗೆ ಪರಿಚಯಿಸುವ ಪ್ರಯತ್ನ ನಡೆಯುತ್ತಿದೆ ಎಂದು ತಿಳಿದುಬಂದಿದೆ.

Leave A Reply

Your email address will not be published.