Home latest PAY CM ನಂತರ ಈಗ ರೈತರಿಂದ ಶುರುವಾಯ್ತು ಪೇ ಫಾರ್ಮರ್ ಅಭಿಯಾನ | ಚುಕ್ಕಿಗಳ...

PAY CM ನಂತರ ಈಗ ರೈತರಿಂದ ಶುರುವಾಯ್ತು ಪೇ ಫಾರ್ಮರ್ ಅಭಿಯಾನ | ಚುಕ್ಕಿಗಳ ಮಧ್ಯೆ ಇಣುಕು ಹಾಕಿದ ರೈತನ ಫೋಟೋ !!

Hindu neighbor gifts plot of land

Hindu neighbour gifts land to Muslim journalist

ರಾಜ್ಯದಲ್ಲಿ ಪೇ ಸಿಎಂ ಪೋಸ್ಟರ್ ಅಭಿಯಾನ ಕಳೆದ ನಾಲ್ಕೈದು ದಿನಗಳಿಂದ ಭಾರೀ ಸದ್ದು ಮಾಡುತ್ತಿದೆ. ಇದು ಕಾಂಗ್ರೆಸ್ ಹಾಗೂ ಬಿಜೆಪಿ ನಡುವಿನ ಮುಸುಕಿನ ಗುದ್ದಾಟಕ್ಕೆ ಕಾರಣವಾಗಿದೆ. ಒಂದು ಹಂತದಲ್ಲಿ ಇದು ಗದ್ದಲ ಸೃಷ್ಟಿಸಿದೆ ಎನ್ನಬಹುದು. ಪೇ ಸಿಎಂ, ಪೇ ಎಂಎಲ್ ಎ ಆದ ನಂತರ ಈಗ ಪೇ ಫಾರ್ಮರ್ ಅಭಿಯಾನ ಪ್ರಾರಂಭವಾಗಿದೆ. ಹೌದು ಈ ಚುಕ್ಕಿ ಆಟದಲ್ಲಿ ಈಗ ರೈತನ ಮುಖ ಕಾಣಲಾರಂಭಿಸಿದೆ.

ಮಂಡ್ಯದಲ್ಲಿ ಪೇ ಫಾರ್ಮಾರ್ ಅಭಿಯಾನ ಆರಂಭವಾಗಿದ್ದು, ಈಗ ಎರಡೂ ಪಕ್ಷಗಳ ನಡುವೆ ಭಾರೀ ಜಟಾಪಟಿಗೆ ಕಾರಣ ತಂದೊಡ್ಡಿದೆ ಎಂದೇ ಹೇಳಬಹುದು.

ಹೌದು, ರಾಜ್ಯದ ರೈತ ಸಂಘದವರು ಪೇಟಿಎಂ ಕ್ಯೂಆರ್ ಕೋಡ್‍ನಂತೆ ಪೇ ಫಾರ್ಮರ್ ಕ್ಯೂಆರ್ ಕೋಡ್ ಪೋಸ್ಟರ್ ರಿಲೀಸ್ ಮಾಡಿದ್ದು, ತಾವು ಬೆಳೆದ ಬೆಳೆಗಳಿಗೆ ತಕ್ಕ ಬೆಲೆ ನೀಡುವಂತೆ ಆಗ್ರಹಿದ್ದಾರೆ. ರಾಜಕೀಯ ನಾಯಕರೇ ನೀವೆಲ್ಲ ಒಂದೇ ನಾಣ್ಯದ ಎರಡು ಮುಖಗಳೇ. ನೀವು ಯಾರೇ ಅಧಿಕಾರಕ್ಕೆ ಬಂದರೂ, ರೈತರ ಕಷ್ಟಕಾರ್ಪಣ್ಯ ಬಗೆಹರಿಸುವ ಮನಸ್ಸಿಲ್ಲ. ಕೆಲವರು ಅಧಿಕಾರಕ್ಕೆರಲು ಸರ್ಕಸ್ ಮಾಡುತ್ತಿದ್ದೀರಾ. ಇನ್ನೂ ಕೆಲವರು ಅಧಿಕಾರ ಉಳಿಸಿಕೊಳ್ಳಲು ಸರ್ಕಸ್ ಮಾಡುತ್ತಿದ್ದೀರಾ. ಇವರಿಗೆ ಮತ ಹಾಕಿದ ರೈತರು ಮಾತ್ರ ಸಂಕಷ್ಟ ಜೀವನ ನಡೆಸುತ್ತಿದ್ದಾರೆ. ಮೊದಲು ರೈತರು ಬೆಳೆದ ಬೆಳೆಗೆ ನ್ಯಾಯಯುತ ಬೆಲೆ ಕೊಡಿ ಎಂದು ಕಿಡಿಕಾರಿದ್ದಾರೆ.

ತಾವು ಬೆಳೆದ ಒಂದು ಟನ್ ಕಬ್ಬಿಗೆ 4,500 ರೂ. ನಿಗದಿ ಮಾಡುವಂತೆ ಮಂಡ್ಯದ ರೈತರು ಪೇ ಫಾರ್ಮರ್ ಕ್ಯೂಆರ್ ಕೋಡ್ ಪೋಸ್ಟರ್ ರಿಲೀಸ್ ಮಾಡಿ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ಕರ್ನಾಟಕ ರಾಜ್ಯ ರೈತ ಸಂಘದ ಫೇಸ್‍ಬುಕ್ ಪೇಜ್‍ನಲ್ಲೂ ಪೋಸ್ಟರ್ ಹಾಕಲಾಗಿದೆ. ಜೊತೆಗೆ ಆಗ್ರ್ಯಾನಿಕ್ ಮಂಡ್ಯ ಸಂಸ್ಥೆಯ ಸಂಸ್ಥಾಪಕ, ಮಂಡ್ಯ ಜಿಲ್ಲಾ ಹಾಲು ಉತ್ಪಾದಕರ ಹೋರಾಟ ಸಮಿತಿ ಅಧ್ಯಕ್ಷ ಎಸ್.ಸಿ. ಮಂಧುಚಂದನ್ ಕೂಡ ತಮ್ಮ ಫೇಸ್‍ಬುಕ್ ಖಾತೆಯಲ್ಲಿ ಈ ಪೋಸ್ಟರ್ ಅನ್ನು ಶೇರ್ ಮಾಡಿಕೊಳ್ಳುವ ಮೂಲಕ ಸರ್ಕಾರ ಹಾಗೂ ಕಾಂಗ್ರೆಸ್‍ಗೆ ತಿರುಗೇಟು ನೀಡಿದ್ದಾರೆ.