Good News : ಯಾವ ರೈಲು ಎಲ್ಲಿದೆ ಇನ್ಮುಂದೆ 100% ಖಡಾಖಂಡಿತವಾಗಿ ಹೀಗೆ ತಿಳಿಯಿರಿ!

ದೂರದ ಪ್ರಯಾಣ ಅದರಲ್ಲೂ ಮುಖ್ಯವಾಗಿ ರೈಲಿನಲ್ಲಿ ಪ್ರಯಾಣಿಸುವಾಗ ಸಿಗುವ ಖುಷಿ, ಅನುಭವವೇ ವಿಭಿನ್ನ. ರೈಲು ಪ್ರಯಾಣ ಹೊಸ ಅನುಭವದ ಮೂಟೆಯನ್ನು ಕಟ್ಟಿ ಕೊಡುವುದರಲ್ಲಿ ಸಂಶಯವಿಲ್ಲ. ಭಾರತೀಯರು ದೂರದ ಊರುಗಳಿಗೆ ಕಡಿಮೆ ವೆಚ್ಚದಲ್ಲಿ ಪ್ರಯಾಣಿಸಲು ರೈಲ್ವೆ ಪ್ರಯಾಣವು ಹೆಚ್ಚು ಅನುಕೂಲಕರವಾಗಿದೆ. ಆದರೆ, ಕೆಲವೊಮ್ಮೆ ರೈಲುಗಳು ತಡವಾಗಿ ಬರುವುದರ ಜೊತೆಗೆ ಪ್ರಯಾಣಿಕರಿಗೆ ಈ ಬಗ್ಗೆ ನಿಖರವಾಗಿ ಮಾಹಿತಿ ಸಿಗದಿರುವ ಸಂದರ್ಭದಲ್ಲಿ ಕೆಲ ಜನರು ರೈಲ್ವೇ ಪ್ರಯಾಣ ಬೇಸರ ತರಿಸಬಹುದು. ಹೀಗಾಗಿ, ಎಚ್ಚೆತ್ತುಕೊಂಡಿರುವ ಭಾರತೀಯ ರೈಲ್ವೆ ಇಲಾಖೆ ರಿಯಲ್-ಟೈಮ್ ರೈಲು ಮಾಹಿತಿ ವ್ಯವಸ್ಥೆಯನ್ನು (RTIS) ಜಾರಿಗೆ ತಂದು ಪ್ರಯಾಣಿಕರಿಗೆ ನೆರವಾಗಲಿದೆ.

 

ರಿಯಲ್-ಟೈಮ್ ರೈಲು ಮಾಹಿತಿ ವ್ಯವಸ್ಥೆಯು(RTIS )ರೈಲುಗಳ ಆಗಮನ ಮತ್ತು ನಿರ್ಗಮನದ ಸಮಯವನ್ನು ಸ್ವಯಂಚಾಲಿತವಾಗಿ ಅಪ್‌ಡೇಟ್ ಮಾಡಲು ಇದೀಗ ಸಜ್ಜುಗೊಂಡಿದೆ. ಪ್ರತಿ 30 ಸೆಕೆಂಡ್‌ಗಳಿಗೊಮ್ಮೆ ರೈಲು ಚಲನೆಯ ಮಾಹಿತಿಯನ್ನು ಒದಗಿಸಲಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಸಹಯೋಗದೊಂದಿಗೆ, ರೈಲುಗಳ ಚಲನೆಯ ಸಮಯವನ್ನು ನಿಖರವಾಗಿ ತಿಳಿಸುವ ಈ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲಾಗಿದೆ. ಹಾಗಾಗಿ, ರೈಲ್ವೆ ಪ್ರಯಾಣಿಕರು ಇನ್ಮುಂದೆ ವಿಳಂಬದ ಮಾಹಿತಿ ತೊಂದರೆಯಿಂದ ಪಾರಾಗಬಹುದು.

ರೈಲಿನ ವಿಳಂಬ ಧೋರಣೆಯಿಂದ ಬೇಸತ್ತಿರುವ ರೈಲ್ವೆ ಪ್ರಯಾಣಿಕರಿಗೆ ಗುಡ್ ನ್ಯೂಸ್ ಇದಾಗಿದ್ದು, ರೈಲುಗಳ ಆಗಮನ ಮತ್ತು ನಿರ್ಗಮನ ಹಾಗೂ ಚಲನೆಯ ಸಮಯವನ್ನು ಸ್ವಯಂಚಾಲಿತವಾಗಿ ಅಪ್‌ಡೇಟ್ ಮಾಡಲು ರಿಯಲ್-ಟೈಮ್ ರೈಲು ಮಾಹಿತಿ ವ್ಯವಸ್ಥೆಯು (RTIS) ಸಜ್ಜುಗೊಂಡಿದೆ. ಪ್ರತಿ 30 ಸೆಕೆಂಡ್‌ಗಳಿಗೆ ಒಮ್ಮೆ ರೈಲು ಚಲನೆಯ ಮಾಹಿತಿಯನ್ನು ಒದಗಿಸಲಿದೆ.
ರೈಲಿನ ಇಂಜಿನ್‌ಗಳಲ್ಲಿ ನೈಜ ಸಮಯದ ರೈಲು ಮಾಹಿತಿ ವ್ಯವಸ್ಥೆ (RTIS)ಯನ್ನು ಅಳವಡಿಸಲಾಗುತ್ತಿದ್ದು, ಇದು ಯಾವುದೇ ಹಸ್ತಚಾಲಿತ ಹಸ್ತಕ್ಷೇಪವಿಲ್ಲದೆ ರೈಲುಗಳ ಸ್ಥಳ ಮತ್ತು ವೇಗವನ್ನು ಹೆಚ್ಚು ನಿಕಟವಾಗಿ ಟ್ರ್ಯಾಕ್ ಮಾಡಲಿದ್ದು, ಹೀಗಾಗಿ, ಪ್ರಯಾಣಿಸುತ್ತಿರುವ ರೈಲು ಎಷ್ಟು ಸಮಯಕ್ಕೆ ರೈಲ್ವೆ ನಿಲ್ದಾಣವನ್ನು ತಲುಪಲಿದೆ ಅಲ್ಲದೆ ಈಗ ಯಾವ ಸ್ಥಳದಲ್ಲಿದೆ ಎಂಬ ಮಾಹಿತಿ ಪ್ರಯಾಣಿಕರಿಗೆ ದೊರೆಯಲಿದೆ. ಪ್ರಯಾಣಿಕರು ತಮ್ಮ ಪ್ರಯಾಣದ ಸಮಯವನ್ನು ಅಂದಾಜಿಸಲು ನೆರವಾಗುತ್ತದೆ.

ಇದೀಗ ISRO ಸ್ಯಾಟ್‌ಕಾಮ್ ಹಬ್ ಬಳಸಿಕೊಂಡು 21 ಎಲೆಕ್ಟ್ರಿಕ್ ಲೋಕೋ ಶೆಡ್‌ಗಳಲ್ಲಿ 2,700 ಇಂಜಿನ್‌ಗಳಿಗೆ ರೈಲು ಮಾಹಿತಿ ವ್ಯವಸ್ಥೆ (RTIS) ಸಾಧನಗಳನ್ನು ಅಳವಡಿಸಿದೆ. ಎರಡನೇ ಹಂತದ ಸಮಯದಲ್ಲಿ 50 ಲೋಕೋ ಶೆಡ್‌ಗಳಲ್ಲಿ 6,000 ಕ್ಕೂ ಹೆಚ್ಚು ಇಂಜಿನ್‌ಗಳಲ್ಲಿ ಈ ವ್ಯವಸ್ಥೆಯನ್ನು ಸ್ಥಾಪಿಸಲಾಗುತ್ತದೆ. ಸುಮಾರು 6,500 ಲೊಕೊಮೊಟಿವ್‌ಗಳಿಂದ (RTIS ಮತ್ತು REMMLOT) GPS ಫೀಡ್ ಅನ್ನು ನೇರವಾಗಿ ಕಂಟ್ರೋಲ್ ಆಫೀಸ್ ಅಪ್ಲಿಕೇಶನ್‌ಗೆ (COA) ನೀಡಲಾಗುತ್ತದೆ.
ಪ್ರತಿ 30 ಸೆಕೆಂಡ್‌ಗಳಿಗೆ ಅಪ್‌ಡೇಟ್‌ ಆಗುವ ಈ ಮಾಹಿತಿಯನ್ನು IRCTC ಅಪ್ಲಿಕೇಷನ್ ಮತ್ತು ಇನ್ನಿತರ ಫ್ಲಾಟ್‌ಫಾರ್ಮ್‌ಗಳಲ್ಲಿ ಪ್ರಕಟಿಸುವುದರಿಂದ ರೈಲ್ವೆ ಪ್ರಯಾಣಿಕರು ಮೊಬೈಲ್‌ನಲ್ಲೇ ಕ್ಷಣ ಕ್ಷಣದ ಅಪ್‌ಡೇಟ್‌ಗಳನ್ನು ಪಡೆಯಬಹುದು.

ಇತ್ತೀಚಿನ ದಿನಗಳಲ್ಲಿ, ಭಾರತೀಯ ರೈಲ್ವೇ ಕ್ಯಾಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್ ಲಿಮಿಟೆಡ್ (IRCTC) ಹೊಸದಾಗಿ ಪ್ರಾರಂಭಿಸಲಾದ ಚಾಟ್‌ಬಾಟ್ ಉತ್ತಮ ಪ್ರತಿಕ್ರಿಯೆ ಹೊಂದಿದ್ದು, ಸುಧಾರಿತ ವರ್ಚುವಲ್ ಅಸಿಸ್ಟೆಂಟ್ ಆಗಿರುವ AskDISHA 2.0 ಚಾಟ್‌ಬಾಟ್ ಮೂಲಕ ಟಿಕೆಟ್‌ಗಳನ್ನು ಕಾಯ್ದಿರಿಸುವುದು, PNR ಸ್ಥಿತಿಯನ್ನು ಪರಿಶೀಲಿಸುವುದು, ಟಿಕೆಟ್‌ಗಳನ್ನು ರದ್ದುಗೊಳಿಸುವುದು, ಬೋರ್ಡಿಂಗ್ ನಿಲ್ದಾಣವನ್ನು ಬದಲಾಯಿಸುವುದು, ಮರುಪಾವತಿ ಸ್ಥಿತಿಯನ್ನು ಪರಿಶೀಲಿಸುವುದು ಮತ್ತು ತತ್ಕಾಲ್ ಸಮಯಗಳಂತಹ ಪ್ರಶ್ನೆಗಳಿಗೆ ಉತ್ತರಿಸುವಂತಹ ಹಲವು ವೈಶಿಷ್ಟ್ಯಗಳನ್ನು ತರಲಾಗಿದೆ
AskDISHA 2.0 ಸಹಾಯದಿಂದ, ಮೊದಲ ಬಾರಿಗೆ ಬಳಕೆದಾರರು ತಮ್ಮ IRCTC ಪಾಸ್‌ವರ್ಡ್ ನಮೂದಿಸದೆಯೇ ಟಿಕೆಟ್ ಬುಕ್ ಮಾಡಬಹುದು, ಇದು ಕೇವಲ OTP ಯೊಂದಿಗೆ ಕಾರ್ಯನಿರ್ವಹಿಸುತ್ತಿದೆ.
ರೈಲ್ವೆ ಇಲಾಖೆ ತನ್ನ ಯೋಜನೆಯ ಮೂಲಕ ರೈಲ್ವೆ ಪ್ರಯಾಣಿಕರನ್ನು ಸೆಳೆಯುವ ಪ್ರಯತ್ನ ನಡೆಸಿದ್ದು, ಏಷ್ಟು ಪ್ರಯೋಜನಕಾರಿಯಾಗಲಿದೆ ಎಂಬುದನ್ನು ಮುಂದಿನ ದಿನಗಳಲ್ಲಿ ಕಾಣಬಹುದಾಗಿದೆ.

6 Comments
  1. sklep online says

    Wow, amazing weblog format! How lengthy have you been running a
    blog for? you make running a blog glance easy.

    The full look of your site is excellent, as smartly
    as the content material! You can see similar here sklep online

  2. Scrapebox AA List says

    Hi there! Do you know if they make any plugins to
    help with SEO? I’m trying to get my site to rank for some targeted
    keywords but I’m not seeing very good results. If you know of any please share.

    Appreciate it! You can read similar text here: Link Building

  3. Snaptik says

    This is the perfect site for anybody who wants to find out about this topic. You understand a whole lot its almost hard to argue with you (not that I personally would want to…HaHa). You certainly put a fresh spin on a subject that has been written about for years. Excellent stuff, just wonderful.

  4. best youtube mp3 downloader says

    I really like reading through a post that will make men and women think. Also, many thanks for allowing me to comment.

  5. web says

    Spot on with this write-up, I really think this web site needs a lot more attention. I’ll probably be returning to read through more, thanks for the advice!

  6. Snaptik says

    Wonderful article! We are linking to this particularly great post on our website. Keep up the good writing.

Leave A Reply

Your email address will not be published.