BREAKING NEWS : ಕರಾವಳಿಗೂ ಎಂಟ್ರಿ ಕೊಟ್ಟ `PAY MLA’ ಪೋಸ್ಟರ್ ಅಭಿಯಾನ !

ಬೆಳ್ತಂಗಡಿ : ರಾಜ್ಯದಲ್ಲಿ ಈಗ ಎಲ್ಲೆಡೆ ಭಾರೀ ಚರ್ಚೆಯಲ್ಲಿರುವ ಕಾಂಗ್ರೆಸ್ ಪೇ ಸಿಎಂ ಪೋಸ್ಟರ್ ಅಭಿಯಾನದ ಬೆನ್ನಲ್ಲೆ, ಕರಾವಳಿಗೂ ಇದು ಕಾಲಿಟ್ಟಿದೆ. ಪೇ ಎಂಎಲ್ ಎ ಪೋಸ್ಟರ್ ಅಭಿಯಾನ ಎಂಟ್ರಿ ನೀಡಿದ್ದು, ಕರಾವಳಿಯ ಕಲರ್ ಫುಲ್ ಶಾಸಕರೊಬ್ಬರ ‘ಕಲರ್ ಲೆಸ್ ‘ ಫೋಟೋ ಹಾಕಿ ಕಾಂಗ್ರೆಸ್ ಕಾರ್ಯಕರ್ತರು ಕ್ಯಾಂಪೇನ್ ಶುರು ಮಾಡಿದ್ದಾರೆ.

ಈ ಕ್ಯಾಂಪೇನ್ ಗೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರ ಬ್ಲಾಕ್ ಅಂಡ್ ವೈಟ್ ನ ‘ ಪೇ ಟಿಎಂ ‘ ಮಾದರಿಯ ಫೋಟೋ ಹಾಕಲಾಗಿದ್ದು, ಈಗಾಗಲೇ ಯುವ ಕಾಂಗ್ರೆಸ್ ಕಾರ್ಯಕರ್ತರು ಉತ್ಸಾಹದಿಂದ ಕ್ಯಾಂಪೇನ್ ಶುರು ಮಾಡಿದ್ದಾರೆ. ಬೆಳ್ತಂಗಡಿಯ ಬಸ್ ನಿಲ್ದಾಣ, ಸಾರ್ವಜನಿಕ ಶೌಚಾಲಯ ಹಾಗೂ ಬಸ್ ಗಳಲ್ಲಿ ಇವತ್ತು ಶಾಸಕ ಹರೀಶ್ ಪೂಂಜಾ ರ ಫೋಟೋ ಪ್ರತ್ಯಕ್ಷ. ಬೆಳ್ತಂಗಡಿಯ ಜನ ಸಂದಣಿಸೇರುವ ಬಸ್ ನಿಲ್ದಾಣ, ಸಾರ್ವಜನಿಕ ಶೌಚಾಲಯ ಹಾಗೂ ಬಸ್ ಗಳಲ್ಲಿ ‘ಪೇ ಎಂಎಲ್ ಎ ‘ ಪೋಸ್ಟರ್ ಅಂಟಿಸಿ ಅಭಿಯಾನ ಆರಂಭಿಸಿದ್ದಾರೆ. ರಾಜ್ಯ ರಾಜಧಾನಿಯಿಂದ ಕರಾವಳಿಗೆ ಇಳಿದಿದೆ ಪೇ ಸಿಎಂ ಅಭಿಯಾನ ಕಮ್ ಹೋರಾಟ.

PAYMLA 40% ACCEPTED ಎಂದು ಬರೆಯಲಾಗಿದೆ. ಬೆಳ್ತಂಗಡಿಯಲ್ಲಿ ಭ್ರಷ್ಟಾಚಾರಕ್ಕಾಗಿ ಶಾಸಕರಿಗೆ ಹಣ ಪಾವತಿ ಮಾಡಲು ಈ QR ಕೋಡ್ ಅನ್ನು ಸ್ಕ್ಯಾನ್ ಮಾಡಿ ಎಂದು ಫೋಟೋದಲ್ಲಿ ಬರೆಯಲಾಗಿದೆ. 
ಬಿಜೆಪಿಯದ್ದು 40 % ಕಮಿಷನ್ ಸರ್ಕಾರ. ಅದರ ವಿರುದ್ಧ  ಹೋರಾಟ ಎಂದು ಹೇಳಿದೆ ಕಾಂಗ್ರೆಸ್. 
Leave A Reply

Your email address will not be published.