‘ಪೇ ಸಿಎಂ’ ಪೋಸ್ಟರ್ ಬೆನ್ನಲ್ಲೇ ಮಹತ್ವದ ತೀರ್ಮಾನ ಕೈಗೊಂಡ ರಾಜ್ಯ ಸರ್ಕಾರ | ಪರವಾನಗಿ ಇಲ್ಲದ ಪೋಸ್ಟರ್ ಅಂಟಿಸಿದ್ರೆ ಬೀಳುತ್ತೆ ದಂಡ
ಬೆಂಗಳೂರು : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಫೋಟೋ ಸಮೇತ ‘ಪೇ ಸಿಎಂ’ ಪೋಸ್ಟರನ್ನು ನಗರದ ಹಲವು ಪ್ರದೇಶಗಳ ಬಸ್ ನಿಲ್ದಾಣದಲ್ಲಿ ಅಂಟಿಸಲಾಗಿತ್ತು. ಇದು ಕೆಲವು ದಿನಗಳಿಂದ ಭಾರೀ ಸದ್ದು ಮಾಡಿತ್ತು.ಇದರ ಬೆನ್ನಲ್ಲೇ ರಾಜ್ಯ ಸರ್ಕಾರ ಮಹತ್ವದ ತೀರ್ಮಾನ ವೊಂದನ್ನು ಕೈಗೊಂಡಿದೆ.
ಹೌದು. ಇನ್ನು ಮುಂದೆ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಪರವಾನಗಿ ಇಲ್ಲದೇ ಪೋಸ್ಟರ್ ಅಂಟಿಸಿದವರ ವಿರುದ್ಧ ಪ್ರಕರಣ ದಾಖಲಿಸಿ ದಂಡ ವಿಧಿಸಲು ಸರ್ಕಾರ ನಿರ್ಧರಿಸಿದೆ ಎನ್ನಲಾಗಿದೆ. ಪ್ರಕರಣ ದಾಖಲಿಸಿಕೊಂಡು ಒಂದು ಸಾವಿರ ರೂ.ನಿಂದ 10 ಸಾವಿರ ರೂ.ವರೆಗೆ ದಂಡ ವಿಧಿಸಲು ನಿರ್ಧರಿಸಿದೆ ಎಂದು ಹೇಳಲಾಗುತ್ತಿದೆ.
ಈಗಾಗಲೇ ಪೇ ಸಿಎಂ ಅಭಿಯಾನದ ಕಿಚ್ಚು ಹೆಚ್ಚುತ್ತಲೇ ಹೋಗಿದ್ದು, ಈ ಹೊಸ ನಿರ್ಧಾರದ ಮೂಲಕ ಮೂಲಕ ರಾಜ್ಯ ಬಿಜೆಪಿ ಪೋಸ್ಟರ್ ವಿವಾದವನ್ನು ನಿಲ್ಲಿಸಲು ಮಹತ್ವದ ಹೆಜ್ಜೆ ಹಿಟ್ಟಿದೆ. ಪೋಸ್ಟರ್ ಅಂಟಿಸಿದ ಕಾಂಗ್ರೆಸ್ ನ ಪ್ರಮುಖ ನಾಯಕರ ಮೇಲೆ ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸರು ಎನ್ ಸಿ ಆರ್ ದಾಖಲಿಸಲಾಗಿದೆ. ಇದರ ಮಧ್ಯೆಯೂ ಕಾಂಗ್ರೆಸ್ ಪೋಸ್ಟರ್ ಅಭಿಯಾನವನ್ನು ಮುಂದುವರೆಸಿದೆ.