ಬಸ್ಸಿನಿಂದ ಇಳಿಯುವಾಗ ಅವಘಡ | ಸಾವಲ್ಲೂ ಸಾರ್ಥಕತೆ ಮೆರೆದ ಯುವತಿ !!!

Share the Article

ಬಸ್ ನಿಂದ ಬಿದ್ದು ಮೃತಪಟ್ಟಂತಹ ಯುವತಿಯ ಸಾವನ್ನಪ್ಪಿದ್ದು, ಆಕೆಯ ಅಂಗಾಂಗ ದಾನ ಮಾಡಲು ಪೋಷಕರು ಒಪ್ಪಿಗೆ ಸೂಚಿಸಿದ್ದಾರೆ. ಈ ಮೂಲಕ ಯುವತಿ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.
ಈ ಸಾವು ಸಾರಿಗೆ ಬಸ್ ನಿರ್ವಾಹಕನ ಬೇಜವಾಬ್ದಾರಿತನದಿಂದ ನಡೆದಿದೆ ಎಂಬ ಆರೋಪ ಕೂಡಾ ಇದೆ.

ಮೃತ ಯುವತಿಯನ್ನು ತಾಲೂಕಿನ ಸೋಮನಹಳ್ಳಿ ತಾಂಡ್ಯದ ರಕ್ಷಿತಾ ಎಂದು ಗುರುತಿಸಲಾಗಿದೆ. ಚಿಕ್ಕಮಗಳೂರಿನ ಬಸವನಹಳ್ಳಿ ಸರ್ಕಾರಿ ಪಿಯು ಕಾಲೇಜಿನಲ್ಲಿ ರಕ್ಷಿತಾ ವ್ಯಾಸಂಗ ಮಾಡುತ್ತಿದ್ದಳು. ರಕ್ಷಿತಾ ಬಸ್ಸಿನಲ್ಲಿ ಇಳಿಯುವ ಸಂದರ್ಭದಲ್ಲಿ ಬಸ್​ನಿಂದ ಕೆಳಗೆ ಬಿದ್ದಿದ್ದು ತಲೆಗೆ ಏಟಾಗಿತ್ತು. ಆಕೆಯನ್ನು ಆಸ್ಪತ್ರೆಗೆ ದಾಖಲು ಮಾಡಲಾಯಿತಾದರೂ, ಮೆದುಳು ಸಂಪೂರ್ಣ ನಿಷ್ಕ್ರಿಯಗೊಂಡಿತ್ತು. ಅಷ್ಟು ಮಾತ್ರವಲ್ಲದೇ, ಬಸ್ ಕಂಡಕ್ಟರ್ ನಿರ್ಲಕ್ಷ್ಯಕ್ಕೆ ಯುವತಿ ಬಲಿಯಾಗಿದ್ದಾಳೆ ಎಂಬ ಗಂಭೀರ ಆರೋಪ ಕೂಡ ಕೇಳಿಬಂದಿದೆ.

ಇದೀಗ ಆಕೆಯ ಪೋಷಕರಾದ ಲಕ್ಷ್ಮೀ ಬಾಯಿ, ತಂದೆ ಸುರೇಶ್ ನಾಯಕ್ ತಮ್ಮ ಮಗಳ ಅಂಗಾಂಗ ದಾನ ಮಾಡಲು ಒಪ್ಪಿಗೆ ಸೂಚಿಸಿದ್ದಾರೆ. ಸದ್ಯ, ರಕ್ಷಿತಾ ಮೃತದೇಹವನ್ನು ಚಿಕ್ಕಮಗಳೂರು ಜಿಲ್ಲಾಸ್ಪತ್ರೆಯಲ್ಲಿ ಇಡಲಾಗಿದ್ದು, ನಾಳೆ ಸಂಜೆ ಚಿಕ್ಕಮಗಳೂರಿಗೆ ತಜ್ಞರ ತಂಡ ಧಾವಿಸಲಿದ್ದು, ನಾಳೆ ಮಧ್ಯಾಹ್ನದ ವೇಳೆಗೆ ಯುವತಿಯ ಅಂಗಾಂಗ ರವಾನೆಯಾಗಲಿದೆ ಎಂಬ ಮಾಹಿತಿ ಲಭ್ಯವಾಗಿದೆ.

Leave A Reply