Home ದಕ್ಷಿಣ ಕನ್ನಡ ವಿಟ್ಲ: ಗುಡ್ಡದಲ್ಲಿ ಹಿಂದೂ ಯುವತಿಯರೊಂದಿಗೆ ಮುಸ್ಲಿಂ ಯುವಕನ ವಹಿವಾಟು!?? ಜೋಡಿಗಳನ್ನು ಬರಹೇಳಿದ ಆ ಇಬ್ಬರು ಯಾರು!??

ವಿಟ್ಲ: ಗುಡ್ಡದಲ್ಲಿ ಹಿಂದೂ ಯುವತಿಯರೊಂದಿಗೆ ಮುಸ್ಲಿಂ ಯುವಕನ ವಹಿವಾಟು!?? ಜೋಡಿಗಳನ್ನು ಬರಹೇಳಿದ ಆ ಇಬ್ಬರು ಯಾರು!??

Hindu neighbor gifts plot of land

Hindu neighbour gifts land to Muslim journalist

ವಿಟ್ಲ: ಇಲ್ಲಿನ ಕೊಳ್ನಾಡು ಗ್ರಾಮದ ಗ್ರಾಮದ ಕುಳಾಲು ಬೊಲ್ಪಾದೆ ಎಂಬಲ್ಲಿನ ಗುಡ್ಡದಲ್ಲಿ ಹಿಂದೂ ಯುವತಿ ಹಾಗೂ ಕ್ರಿಶ್ಚಿಯನ್ ಯುವತಿಯೊಂದಿಗೆ ಕೇರಳದ ಅನ್ಯಕೋಮಿನ ಯುವಕನೊಬ್ಬ ಪತ್ತೆಯಾಗಿದ್ದು, ಹಿಂದೂ ಕಾರ್ಯಕರ್ತರ ಹಾಗೂ ಸ್ಥಳೀಯರ ಖಚಿತ ಮಾಹಿತಿ ಮೇರೆಗೆ ಪೊಲೀಸರು ಸ್ಥಳಕ್ಕಾಗಮಿಸಿ ಜೋಡಿಯನ್ನು ವಶಕ್ಕೆ ಪಡೆದ ಘಟನೆಯೊಂದು ನಡೆದಿದೆ.

ಸ್ಥಳೀಯರ ಕೈಗೆ ಸಿಕ್ಕಿಬಿದ್ದ ಜೋಡಿಯು, ಅಲ್ಲಿನ ಸ್ಥಳೀಯ ನಿವಾಸಿಗಳಾದ ಸಿದ್ದಿಕ್ ಹಾಗೂ ಆಯಿಷಾ ಎಂಬವರು ನಮ್ಮನ್ನು ಕರೆದಿದ್ದಾಗಿ ಹೇಳಿದ್ದು, ಇದರಿಂದ ಕೆರಳಿದ ಸ್ಥಳೀಯರು ಪೊಲೀಸರನ್ನು ಕರೆಸಿ ಜೋಡಿಯನ್ನು ವಶಕ್ಕೆ ಒಪ್ಪಿಸಿದ್ದಾರೆ ಎಂದು ತಿಳಿದುಬಂದಿದೆ.

ಕಳೆದ ಕೆಲ ತಿಂಗಳುಗಳಿಂದ ಈ ಕಾಲೋನಿಯಲ್ಲಿ ಅನೈತಿಕ ಚಟುವಟಿಕೆ ನಡೆಯುತ್ತಿರುವ ಬಗ್ಗೆ ಗುಮಾನಿಯೊಂದು ಎದ್ದಿದ್ದು, ಆಯಿಷಾ ಹಾಗೂ ಸಿದ್ದಿಕ್ ಎಂಬಿಬ್ಬರು ಈ ವಹಿವಾಟಿನ ರುವಾರಿಗಳಾಗಿದ್ದಾರೆ ಎನ್ನುವ ಮಾತುಗಳು ಕೇಳಿಬಂದಿವೆ.ಬೇರೆ ಬೇರೆ ಕಡೆಗಳಿಂದ ಯುವತಿಯರನ್ನು ಕರೆಸಿ, ಯುವಕರಿಗೆ ನೀಡುವ ದಂಧೆ ನಡೆಯುತ್ತಿದೆ ಎನ್ನುವ ಗಂಭೀರ ಆರೋಪವೂ ಕೇಳಿಬಂದಿದೆ.

ಇಂದು ಸಿಕ್ಕಿಬಿದ್ದ ಯುವತಿಯರ ಬಾಯಲ್ಲೂ ಅದೇ ಮಾತುಗಳು ಬಂದಿದ್ದು, ಆ ಇಬ್ಬರು ವ್ಯಕ್ತಿಗಳ ಹೆಸರು ಕೇಳಿಬರುತ್ತಿದ್ದಂತೆ ಹಸಿ ಮಾಂಸ ದಂಧೆಯ ಬಗ್ಗೆ ಇದ್ದ ಅನುಮಾನಕ್ಕೆ ಪುಷ್ಠಿ ಸಿಕ್ಕಿದ್ದು, ಕೂಡಲೇ ಈ ಬಗ್ಗೆ ಪೊಲೀಸರು ಕ್ರಮ ಕೈಗೊಂಡು ಸಮಾಜಘಾತುಕ ಶಕ್ತಿಗಳ ಹುಟ್ಟಡಗಿಸಬೇಕು ಎನ್ನುವ ಆಗ್ರಹ ಕೇಳಿಬಂದಿದೆ.