ಭಾರತೀಯ ಮಜ್ದೂರ್ ಸಂಘದ(BMS) ಜಿಲ್ಲಾಧ್ಯಕ್ಷರಾಗಿ ಯುವ ಸಂಘಟಕ ಅನಿಲ್ ಕುಮಾರ್ ಯು ಆಯ್ಕೆ

ಬೆಳ್ತಂಗಡಿ: ಭಾರತೀಯ ಮಜ್ಧೂರ್ ಸಂಘದ (B M S) ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷರಾಗಿ ಯುವ ನ್ಯಾಯವಾದಿ, ಯುವ ಸಂಘಟಕ, ಸಾಮಾಜಿಕ, ಧಾರ್ಮಿಕ ಕ್ಷೇತ್ರದ ಯುವ ಮುಂದಾಳು ಅನಿಲ್ ಕುಮಾರ್ ಯು ಆಯ್ಕೆಯಾಗಿದ್ದಾರೆ.

 

ಮಂಗಳೂರಿನಲ್ಲಿ ನಡೆದ ಭಾರತೀಯ ಮಜ್ಧೂರು ಸಂಘದ ಸಭೆಯಲ್ಲಿ ಸಂಘದ ಪ್ರಮುಖರ ಉಪಸ್ಥಿತಿಯಲ್ಲಿ ಇವರನ್ನು ಆಯ್ಕೆ ಮಾಡಲಾಯಿತು.ಅನಿಲ್ ಕು‌ಮಾರ್ ಯು ಅವರು ಅಖಿಲಾ ಭಾರತ ವಿಧ್ಯಾರ್ಥಿ ಪರಿಷತ್ ಮೂಲಕ ಬೆಳೆದು, ರಾಷ್ಟ್ರೀಯ ಸ್ವಯಂ ಸೇವಕ ಸಂಘದಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡು, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ABVP) ಯ ಮೂಲಕ ಬೆಳೆದು, b ಸಮಾಜದಲ್ಲಿ ಗುರುತಿಸಿಕೊಂಡವರು.

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನ ಕರ್ನಾಟಕ ರಾಜ್ಯ ಸಹ ಕಾರ್ಯದರ್ಶಿಯಾಗಿ, ABVP ಯ ಪೂರ್ಣಾವಧಿ ಕಾರ್ಯಕರ್ತರಾಗಿ, ಹಾಸನ ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾಗಿ, ಧರ್ಮ ಜಾಗರಣ ಕರ್ನಾಟಕ ದಕ್ಷಿಣ ಪ್ರಾಂತದ ಪ್ರಾಂತ ವಿಧಿ ಪ್ರಮುಖರಾಗಿ ಜವಾಬ್ದಾರಿಯನ್ನು ನಿರ್ವಹಿಸಿರುತ್ತಾರೆ.

ಪ್ರಸ್ತುತ ಬೆಳ್ತಂಗಡಿಯಲ್ಲಿ ವಕೀಲ ಕಚೇರಿಯನ್ನು ಹೊಂದಿ ವಕೀಲರಾಗಿ ಕಾರ್ಯನರ್ಹಿಸುತ್ತಿದ್ದಾರೆ.

Leave A Reply

Your email address will not be published.