Home Interesting ಪ್ರಯಾಣಿಕರಿಗೆ ಮತ್ತೊಂದು ಗುಡ್ ನ್ಯೂಸ್ ನೀಡಿದ ರೈಲ್ವೆ ಇಲಾಖೆ!

ಪ್ರಯಾಣಿಕರಿಗೆ ಮತ್ತೊಂದು ಗುಡ್ ನ್ಯೂಸ್ ನೀಡಿದ ರೈಲ್ವೆ ಇಲಾಖೆ!

Hindu neighbor gifts plot of land

Hindu neighbour gifts land to Muslim journalist

ರೈಲ್ವೆ ಇಲಾಖೆ ಪ್ರಯಾಣಿಕರಿಗೆ ಹೊಸ ಸೌಲಭ್ಯಗಳನ್ನು ಒದಗಿಸುವುದರ ಮೂಲಕ ಸಿಹಿ ಸುದ್ದಿ ನೀಡುತ್ತಲೇ ಬಂದಿದ್ದು, ಇದೀಗ ಮತ್ತೆ ಹೊಸ ಯೋಜನೆಯೊಂದಿಗೆ ಗುಡ್ ನ್ಯೂಸ್ ನೀಡಿದೆ.

ಹೌದು. ವಾರದ ಹಿಂದಷ್ಟೇ ರೈಲು ಪ್ರಯಾಣಿಕರಿಗೆ ಗುಣಮಟ್ಟದ ಆಹಾರ ನೀಡಲು ಹಾಗೂ ರೈಲು 2 ಗಂಟೆ ವಿಳಂಬವಾದರೆ ಪ್ರಯಾಣಿಕರಿಗೆ ಅಲ್ಲಿಯೇ ಉಚಿತ ಆಹಾರ ನೀಡಲು ರೈಲ್ವೆ ಇಲಾಖೆ ಕ್ರಮ ಕೈಗೊಂಡಿತ್ತು. ಇದೀಗ ಊಟದ ಜೊತೆಗೆ ಹಾಸಿಗೆಯೂ ನೀಡಲು ಮುಂದಾಗಿದೆ.

ಎಸಿ ಎಕಾನಮಿ ಕ್ಲಾಸ್ ಕೋಚ್ ಗಳಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಹಾಸಿಗೆ ಸೌಲಭ್ಯವನ್ನು ನೀಡಲು ಕ್ರಮ ಕೈಗೊಳ್ಳಲಾಗಿದ್ದು,ಕೋವಿಡ್ ಸಂದರ್ಭದಲ್ಲಿ ಹಾಸಿಗೆ ಸೌಲಭ್ಯಗಳನ್ನು ರೈಲ್ವೆ ಇಲಾಖೆ ನಿಲ್ಲಿಸಿದ್ದು, ಇದೀಗ ಮತ್ತೆ ಆರಂಭಿಸಿದೆ. ಸೆಪ್ಟೆಂಬರ್ 20 ರಿಂದಲೇ ಜಾರಿಗೆ ಬರಲಿದೆ ಎಂದು ಇಲಾಖೆ ತಿಳಿಸಿದೆ.