Crime News: ಹೊಲದಲ್ಲಿ ಒಬ್ಬಳೇ ಕೆಲಸ ಮಾಡುತ್ತಿದ್ದ ರೈತ ವಿವಾಹಿತ ಮಹಿಳೆ ಮೇಲೆ ಇಬ್ಬರಿಂದ ಅತ್ಯಾಚಾರ |

Share the Article

ದೇಶದಲ್ಲಿ ಮಹಿಳೆಯರ ಮೇಲೆ ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಾ ಹೋಗುತ್ತಿದೆ. ಅದರಲ್ಲೂ ಅತ್ಯಾಚಾರದ ವಿಕೃತಿ ಹೆಚ್ಚಿದೆ ಎಂದೇ ಹೇಳಬಹುದು.

28 ವರ್ಷದ ವಿವಾಹಿತ ಮಹಿಳೆಯ ಮೇಲೆ ಇಬ್ಬರು ಯುವಕರು ಅತ್ಯಾಚಾರವೆಸಗಿರುವ ಘಟನೆ ರಾಜಸ್ಥಾನದ ಚುರು ಜಿಲ್ಲೆಯ ಸರ್ದಾರ್‌ಶಹರ್ ತಹಸಿಲ್‌ನಲ್ಲಿ ನಡೆದಿದೆ. ಆರೋಪಿಗಳು ಸಂತ್ರಸ್ಥೆ ಖಾಸಗಿ ಅಂಗಗಳನ್ನು ಹಲ್ಲುಗಳಿಂದ ಕಚ್ಚಿದ್ದಾರೆ. ಹೊಲದಲ್ಲಿ ಒಬ್ಬಳೇ ಕೆಲಸ ಮಾಡುತ್ತಿದ್ದ ರೈತ ಮಹಿಳೆಗೆ ಅಲ್ಲಿಗೆ ಬಂದ ಇಬ್ಬರು ಯುವಕರು ಅತ್ಯಾಚಾರ ಮಾಡಿ, ಆಕೆಯ ಖಾಸಗಿ ಅಂಗವನ್ನು ಕಚ್ಚಿದ್ದಾರೆ.

ನೊಂದ ಮಹಿಳೆ ಶುಕ್ರವಾರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಿಸಿದ್ದಾರೆ. ಜಮೀನಿನಲ್ಲಿ ಒಬ್ಬಂಟಿಯಾಗಿದ್ದಾಗ ಈ ಘಟನೆ ನಡೆದಿರುವುದಾಗಿ ಮಹಿಳೆ ತಿಳಿಸಿದ್ದಾರೆ.

ಗುರುವಾರ ಸಂಜೆ ಗ್ರಾಮದ ಯುವಕ ಹಾಗೂ ಆತನ ಮತ್ತೊಬ್ಬ ಸ್ನೇಹಿತ ಕೂಡ ಬಂದಿದ್ದ. ಸಂಜೆ ಹೊಲದಲ್ಲಿ ಒಬ್ಬಳೇ ಇದ್ದೆ. ನನ್ನ ಗಂಡ ಯಾವುದೋ ಹಳ್ಳಿಗೆ ಹೋಗಿದ್ದರು. ಎಂಟು ಗಂಟೆ ಸುಮಾರಿಗೆ ಗದ್ದೆಯಲ್ಲಿ ಕಟ್ಟಿದ ಕೊಳವೆಬಾವಿಯ ಕಡೆಗೆ ಹೋಗುತ್ತಿದ್ದೆ. ಅದೇ ಸಮಯದಲ್ಲಿ ಜೀತು ಸಿಂಗ್ ಮತ್ತು ಆತನ ಸ್ನೇಹಿತ ಬಂದು ನನ್ನನ್ನು ಒಬ್ಬಂಟಿಯಾಗಿ ನೋಡಿ ಅತ್ಯಾಚಾರವೆಸಗಿದ್ದಾರೆ. ಆರೋಪಿಗಳು ನನ್ನ ದೇಹದ ಖಾಸಗಿ ಭಾಗವನ್ನು ಹಲ್ಲುಗಳಿಂದ ಕಚ್ಚಿ ಕಿರುಕುಳ ನೀಡಿದ್ದಾರೆ ಎಂದು ಸಂತ್ರಸ್ತ ಮಹಿಳೆ ತಿಳಿಸಿದ್ದಾರೆ.

ಹಿಂಸ ತಡೆಯದೆ ಮಹಿಳೆ ಕೂಗಾಡಿದಾಗ ಆರೋಪಿಗಳು ಜಾತಿ ಹೆಸರಲ್ಲಿ ನಿಂದಿಸಿದ್ದು, ನನ್ನ ಕೂಗು ಕೇಳಿ ಅಕ್ಕಪಕ್ಕದವರು ನಮ್ಮ ಜಮೀನಿಗೆ ಧಾವಿಸಿದ್ದಾರೆ. ಜನರು ಬರುವುದನ್ನು ಕಂಡು ಆರೋಪಿಗಳಿಬ್ಬರೂ ದ್ವಿಚಕ್ರವಾಹನ ಸಮೇತ ಪರಾರಿಯಾಗಿದ್ದಾರೆ ಎಂದು ಮಹಿಳೆ ತಿಳಿಸಿದ್ದಾರೆ. ವಿವಾಹಿತ ಮಹಿಳೆ ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

Leave A Reply