Home latest 50 ಅಡಿ ಆಳದ ಬಾವಿಗೆ ಎಸೆದರೂ, ಹಾವಿನ ಪಕ್ಕ ಮಲಗಿದ್ದರೂ ಮೃತ್ಯು ಗೆದ್ದು ಬಂದ ಹಸುಳೆ...

50 ಅಡಿ ಆಳದ ಬಾವಿಗೆ ಎಸೆದರೂ, ಹಾವಿನ ಪಕ್ಕ ಮಲಗಿದ್ದರೂ ಮೃತ್ಯು ಗೆದ್ದು ಬಂದ ಹಸುಳೆ | ಮಗುವಿಗೆ ಎದೆಹಾಲು ಉಣಿಸಿ ವಾತ್ಸಲ್ಯ ತೋರಿದ ಮಹಿಳೆ

Hindu neighbor gifts plot of land

Hindu neighbour gifts land to Muslim journalist

ಆಗ ತಾನೇ ಜನಿಸಿದ ಹಸುಗೂಸನ್ನು ಕ್ರೂರಿ ತಾಯಿಯೊಬ್ಬಳು ಪಾಳು ಬಾವಿಗೆ ಎಸೆದು ಹೋದರೂ, ಮಗು ಹಾವಿನ ಪಕ್ಕದಲ್ಲೇ ಮಲಗಿದ್ದರೂ ಸಾವು ಗೆದ್ದು ಬಂದ ವಿಸ್ಮಯಕಾರಿ ಘಟನೆ ನಡೆದಿದೆ.

ಪಾಳು ಬಾವಿಗೆ ಗಂಡು ಮಗವನ್ನು ಹೆತ್ತ ತಾಯಿಯೇ ಕರುಣೆ ಇಲ್ಲದೆ ಎಸೆದಿದ್ದಾಳೆ. ಅದು ಸುಮಾರು 50ಕ್ಕೂ ಹೆಚ್ಚು ಅಡಿ ಆಳ ಇರುವ ಬಾವಿ. ತನ್ನ ತೋಟಕ್ಕೆ ಕೃಷಿ ಕೆಲಸಕ್ಕೆ ಹೋಗುತ್ತಿದ್ದ ರೈತ ಮಹಿಳೆಯೊಬ್ಬರು ಬಾವಿಯಲ್ಲಿ ಮಗು ಅಳುತ್ತಿರುವ ಶಬ್ಧ ಕೇಳಿ ಇಣುಕಿ ನೋಡಿದಾಗ ಅಲ್ಲಿ ಮಗು ಕಂಡಿದೆ. ಅವರು ಕೂಡಲೇ ಓಡಿ ಹೋಗಿ ಈ ವಿಚಾರವನ್ನು ಗ್ರಾಮಸ್ಥರಿಗೆ ತಿಳಿಸಿದ್ದಾರೆ. ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಚಂದ್ರೆ ಗ್ರಾಮದಲ್ಲಿ ಓರ್ವ ಮಹಾತಾಯಿ ಈ ಕ್ರೂರ ಕೃತ್ಯ ನಡೆಸಿದ್ದಾರೆ.

ಹಗ್ಗ ಬುಟ್ಟಿ ಸಮೇತ ಓಡಿ ಬಂದ ಊರಿನ ಜನರು ಮಗುವನ್ನು ರಕ್ಷಿಸಲು ಬಾವಿಗೆ ಓರ್ವನನ್ನು ಇಳಿಸಿದ್ದಾರೆ. ಆಗ ಆ ಮಗು ಹಾವಿನ ಪಕ್ಕದಲ್ಲೇ ಮಲಗಿತ್ತು.
ಹಾವಿನ ಪಕ್ಕ ಮಗು ಮಲಗಿದ್ದರೂ ಹಾವು ಮಗುವಿಗೆ ಏನೂ ಮಾಡಿಲ್ಲ. ಹಾವಿನ ಜತೆ ಇದ್ದು ಮೃತ್ಯು ಗೆದ್ದ ಮಗುವನ್ನು ಕಂಡು ಜನ ಬೆರಗಾಗಿದ್ದಾರೆ.

ಈ ಸಂದರ್ಭ ಸುದ್ದಿ ತಿಳಿದ ಗ್ರಾಮದ ಮಹಿಳೆಯೊಬ್ಬರು ಮುಂದೆ ಬಂದು ತನ್ನ ಎದೆ ಹಾಲುಣಿಸಿ ಮಾನವೀಯತೆ ಮೆರೆದದ್ದು ಕಂಡುಬಂದಿದೆ. ಊರಿನ ಇತರ ಮಹಿಳೆಯರು ಸೇರಿಕೊಂಡು ಮಗುವಿಗೆ ಆರೈಕೆಗೆ ಇಳಿದಿದ್ದಾರೆ. ನಂತರ ಈ ಬಗ್ಗೆ ಸ್ಥಳೀಯ ಸರ್ಕಾರಿ ಆಸ್ಪತ್ರೆಯ ವೈದ್ಯರಿಗೆ ಮಾಹಿತಿ ನೀಡಿದ್ದು ನಂತರ ಮಂಡ್ಯ ಮಿಮ್ಸ್ ಆಸ್ಪತ್ರೆಗೆ ಮಗುವನ್ನು ರವಾನಿಸಲಾಗಿದೆ. ಇದೀಗ ಸ್ತಳೀಯ ಪೊಲೀಸರಿಗೆ ವಿಷಯ ತಲುಪಿಸಲಾಗಿದೆ ಎಂದು ತಿಳಿದು ಬಂದಿದೆ.