ಗಮನಿಸಿ ವಿದ್ಯಾರ್ಥಿಗಳೇ | ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಿದರೆ,  ನಿಮಗೆ ದೊರೆಯುತ್ತೆ 1 ಲಕ್ಷದಿಂದ 4.5 ಲಕ್ಷ ರೂ.

ನೂರಾರು ಕನಸು ಹೊತ್ತು ಓದಬೇಕೆಂಬ ಅಭಿಲಾಷೆ ಹೊಂದಿರುವ ಅನೇಕ ವಿದ್ಯಾರ್ಥಿಗಳು ಆರ್ಥಿಕ ಸಂಕಷ್ಟದಿಂದ ವಿದ್ಯೆ ಮೊಟಕುಗೊಳಿಸಿ ಶಾಲೆಗೆ ವಿದಾಯ ಹೇಳುವ ಪ್ರಸಂಗಗಳು ನಡೆಯುತ್ತಲೇ ಇದೆ. ಪುಸ್ತಕ ಹಿಡಿಯಬೇಕಾದ ಕೈಗಳು ಕೆಲಸದಲ್ಲಿ ತೊಡಗಿಕೊಂಡು ಮನೆಯ ಜವಾಬ್ದಾರಿಯಲ್ಲಿ ಪಾಲುದಾರರಾಗಿ ದುಡಿಯುವುದನ್ನು ನೋಡಿರಬಹುದು.

ಸರ್ಕಾರ ಮಕ್ಕಳ ಉಜ್ವಲ ಭವಿಷ್ಯಕ್ಕೆ ಸಹಕಾರಿಯಾಗುವ ಅನೇಕ ಯೋಜನೆಗಳನ್ನು ರೂಪಿಸಿ ಯಾವ ಮಕ್ಕಳು ಆರ್ಥಿಕ ಸಂಕಷ್ಟದಿಂದ ವಿದ್ಯೆಯಿಂದ ವಂಚಿತರಾಗದಂತೆ ಸ್ಕಾಲರ್ ಶಿಪ್ ನೀಡಿ ಓದುವುದನ್ನು ಪ್ರೋತ್ಸಾಹಿಸುತ್ತಿದೆ.
ಅಷ್ಟೇ ಅಲ್ಲದೆ ಮೆಡಿಕಲ್ ವ್ಯಾಸಂಗ ಮಾಡುವವರಿಗೂ
ಜಿಎಸ್‌ಕೆ ಸ್ಕಾಲರ್ಶಿಪ್ ನೀಡಿ ಆರ್ಥಿಕವಾಗಿ ನೆರವಾಗುತ್ತಿದೆ.

ಎಂಬಿಬಿಎಸ್‌ ಮೊದಲ ವರ್ಷದಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಜಿಎಸ್‌ಕೆ ಸ್ಕಾಲರ್ ಪ್ರೋಗ್ರಾಂ 2022-23 ಮೂಲಕ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ. ಈ ವಿದ್ಯಾರ್ಥಿ ವೇತನಕ್ಕೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು, ಅರ್ಜಿ ಸಲ್ಲಿಸಲು ಅಕ್ಟೋಬರ್ 15 ಕೊನೆಯ ದಿನವಾಗಿದೆ.

ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಮತ್ತು ಇನ್ನಿತರ ಖಾಸಗಿ ಸಂಸ್ಥೆಗಳು ಕೂಡಾ ವಿದ್ಯಾರ್ಥಿಗಳ ಶೈಕ್ಷಣಿಕ ಅನುಕೂಲಕ್ಕೆ ಅನೇಕ ಸ್ಕಾಲರ್ ಶಿಪ್‌ಗಳನ್ನು ನೀಡುತ್ತವೆ. ಈ ವಿದ್ಯಾರ್ಥಿ ವೇತನವನ್ನು ಪಡೆದು ಅನೇಕ ವಿದ್ಯಾರ್ಥಿಗಳು ತಮ್ಮ ಶಿಕ್ಷಣವನ್ನು ಪಡೆದು ಅದರ ಸದುಪಯೋಗ ಪಡಿಸಿಕೊಂಡಿದ್ದಾರೆ.

ಕೊರೊನಾ ಎಂಬ ಮಹಾಮಾರಿ ತಾಂಡವವಾಡಿ ಅನೇಕ ಜನ ಬಲಿಯಾದದ್ದು ಎಲ್ಲರಿಗೂ ತಿಳಿದಿದೆ. ಈ ಸಮಯದಲ್ಲಿ ಅನೇಕ ವಿದ್ಯಾರ್ಥಿಗಳು ತಮ್ಮ ಪೋಷಕರನ್ನು ಕಳೆದುಕೊಂಡಿದ್ದು, ಹಣಕಾಸಿನ ಮುಗ್ಗಟ್ಟಿನಿಂದ  ವಿದ್ಯಾಭ್ಯಾಸವನ್ನು ಮುಂದುವರಿಸಲಾಗದೆ ವ್ಯಾಸಂಗ ಮಾಡಲಾಗದೆ ಇರುವ ವಿದ್ಯಾರ್ಥಿಗಳಿಗೆ ನೆರವಾಗುವ ದೃಷ್ಟಿಯಿಂದ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಅನುಕೂಲಕ್ಕೆ ಈ ಕೆಳಗಿನ ಸ್ಕಾಲರ್‌ಶಿಪ್‌ ನೀಡಲಾಗುತ್ತಿದೆ.

ಈ ವಿದ್ಯಾರ್ಥಿವೇತನಕ್ಕೆ ಆಯ್ಕೆಯಾಗುವ ಎಂಬಿಬಿಎಸ್‌ ಓದುತ್ತಿರುವ ವಿದ್ಯಾರ್ಥಿಗಳಿಗೆ ವರ್ಷಕ್ಕೆ 1 ಲಕ್ಷದ ವರೆಗೆ ವಿದ್ಯಾರ್ಥಿವೇತನ ನೀಡಲಾಗುತ್ತದೆ. ಹಾಗೂ ಎಂಬಿಬಿಎಸ್‌ ಕೋರ್ಸ್‌ ಮುಗಿಯುವವರೆಗೆ ಒಟ್ಟು 4.5 ಲಕ್ಷ ವಿದ್ಯಾರ್ಥಿವೇತನವನ್ನು ನೀಡಲಾಗುತ್ತದೆ.

ಜಿಎಸ್‌ಕೆ ಸ್ಕಾಲರ್ ಪ್ರೋಗ್ರಾಂ 2022-23 (GSK SCHOLARS PROGRAMME 2022-23)

ಈ ವಿದ್ಯಾರ್ಥಿ ವೇತನವನ್ನು ಆರ್ಥಿಕವಾಗಿ ಹಿಂದುಳಿದ ಮತ್ತು ಪ್ರತಿಭಾನ್ವಿತ ವೈದ್ಯಕೀಯ ವಿದ್ಯಾರ್ಥಿಗಳಿಗೆ ನೀಡಲಾಗುತ್ತದೆ. ದೇಶದ ಕೌಶಲ್ಯ ನಿರ್ಮಾಣ ಉಪಕ್ರಮವನ್ನು ಬೆಂಬಲಿಸಲು ಪ್ರತಿ ವರ್ಷ ಈ ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತದೆ.

ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಅರ್ಹತೆ:
ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್‌ ಮೊದಲ ವರ್ಷದಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ದ್ವಿತೀಯ ಪಿಯುಸಿ ಅಥವಾ ಕ್ಲಾಸ್‌ 12 ರಲ್ಲಿ ಶೇಕಡಾ.65 ಅಂಕಗಳಿಂದ ಉತ್ತೀರ್ಣರಾಗಿರಬೇಕು. ವಿದ್ಯಾರ್ಥಿಯ ಕುಟುಂಬದ ಒಟ್ಟು ಆದಾಯ ಮೂಲ 6 ಲಕ್ಷಗಳಿಗಿಂತ ಕಡಿಮೆ ಇರಬೇಕು. ಮತ್ತು ಭಾರತೀಯ ಪ್ರಜೆಯಾಗಿರಬೇಕು.

ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು:
ದ್ವಿತೀಯ ಪಿಯುಸಿ ಅಥವಾ ಕ್ಲಾಸ್‌ 12 ರ ಅಂಕಪಟ್ಟಿ.
ಸರ್ಕಾರದಿಂದ ನೀಡಿದ ಗುರುತಿನ ಪತ್ರ.( ಆಧಾರ್ ಕಾರ್ಡ್, ಪಾನ್ ಕಾರ್ಡ್, ವೋಟರ್ ಐಡಿ, ಡ್ರೈವಿಂಗ್ ಲೈಸೆನ್ಸ್) ಅಡ್ರೆಸ್ ಮತ್ತು ವಿಧ್ಯಾರ್ಥಿಯ ಪೂರ್ಣ ಮಾಹಿತಿ ನೀಡುವ ಯಾವುದಾದರು ಒಂದು ದಾಖಲೆ ನೀಡಬೇಕು.

ಈ ವರ್ಷಕ್ಕೆ ಪ್ರವೇಶ ಪಡೆದ ರಶೀದಿ. ( ಫೀ ರಶೀದಿ, ದಾಖಲಾತಿ ಪತ್ರ, ಸಂಸ್ಥೆಯ ಐಡಿ ಕಾರ್ಡ್‌), ಆದಾಯ ಪ್ರಮಾಣ ಪತ್ರ, ಬ್ಯಾಂಕ್‌ ಅಕೌಂಟ್‌ ಡಿಟೆಲ್ಸ್ , ಅರ್ಜಿ ಸಲ್ಲಿಸುವ ಅಭ್ಯರ್ಥಿಯ ಫೋಟೋ.

ಅರ್ಜಿ ಸಲ್ಲಿಸುವ ವಿಧಾನ
ವಿದ್ಯಾರ್ಥಿಗಳು ಅಧಿಕೃತ ವೆಬ್‌ಸೈಟ್‌ https://india-pharma.gsk.com/en-in ಗೆ ಭೇಟಿ ನೀಡಿ.
ಮುಖಪುಟದಲ್ಲಿ ಜಿಎಸ್‌ಕೆ ಸ್ಕಾಲರ್ ಪ್ರೊಗ್ರಾಂ 2022-23 ಲಿಂಕ್ ಮೇಲೆ ಕ್ಲಿಕ್ ಮಾಡಿ.
ಮೊಬೈಲ್ ನಂಬರ್ ಹಾಗು ಇ-ಮೇಲ್ ವಿಳಾಸ ನಮೂದಿಸಿ ಲಾಗಿನ್ ಆದ ನಂತರ  ಜಿಎಸ್‌ಕೆ ಸ್ಕಾಲರ್ ಪ್ರೊಗ್ರಾಂ 2022-23 ಪೇಜ್ ಓಪನ್‌ ಆಗುತ್ತದೆ.ಆ ಪುಟದಲ್ಲಿ ಅಲ್ಲಿ ಕೇಳಲಾಗಿರುವ ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಿ ನಂತರ ಎಲ್ಲಾ ದಾಖಲೆಗಳನ್ನು ಅಪ್‌ಲೋಡ್‌ ಮಾಡಬೇಕು ನಂತರ ‘Submit’ ಬಟನ್‌ ಮೇಲೆ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಬೇಕು.

ಆರ್ಥಿಕವಾಗಿ ಹಿಂದುಳಿದ ಮತ್ತು ಮೆಡಿಕಲ್ ವ್ಯಾಸಂಗ ಮಾಡುತ್ತಿರುವ ಮೊದಲ ವರ್ಷದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

Leave A Reply

Your email address will not be published.