Home Entertainment Aryavardhan Guruji: ‘ ನಿನಗೆ ಅನ್ನ ಬಿಗ್ ಬಾಸ್ ನೀಡಿರಬಹುದು, ಆದರೆ ಅನ್ನ ಮಾಡಿಕೊಟ್ಟಿದ್ದು ನಾನು’...

Aryavardhan Guruji: ‘ ನಿನಗೆ ಅನ್ನ ಬಿಗ್ ಬಾಸ್ ನೀಡಿರಬಹುದು, ಆದರೆ ಅನ್ನ ಮಾಡಿಕೊಟ್ಟಿದ್ದು ನಾನು’ ಪಂಚ್ ಡೈಲಾಗ್ ಹೊಡೆದ ಗುರೂಜಿ

Hindu neighbor gifts plot of land

Hindu neighbour gifts land to Muslim journalist

‘ಬಿಗ್ ಬಾಸ್ ಕನ್ನಡ ಒಟಿಟಿ’ (Bigg Boss
Kannada OTT) ರಿಯಾಲಿಟಿ ಶೋ ಈಗ ಬಹಳ ಕುತೂಹಲಕಾರಿ ಘಟ್ಟದಲ್ಲಿದೆ. ಎಂಟು ಜನರ ನಡುವೆ ಪೈಪೋಟಿ ನಡೆಯುತ್ತಿದೆ. ಈಗಲೂ ಸ್ಪರ್ಧಿಗಳ ನಡುವೆ ಉತ್ಸಾಹ ಕಡಿಮೆಯಾಗಿಲ್ಲ. ಅದರಲ್ಲೂ ಆರ್ಯವರ್ಧನ್ ಗುರೂಜಿ (Aryavardhan Guruji) ಅವರು ಎಲ್ಲರಿಗಿಂತ ಹೆಚ್ಚು ಖುಷಿ ಜೊತೆಗೆ ಉಳಿದವರಿಗೂ ತಮ್ಮ ಮಾತಿನ ಮೂಲಕ ಖುಷಿ ನೀಡುತ್ತಿದ್ದಾರೆ.

ಇತ್ತೀಚೆಗಷ್ಟೇ ಸುದೀಪ್ ( Sudeep) ಅವರ ಎದುರು ಮನೆ ಮಂದಿ ಯಾವುದೇ ವಿಚಾರ ಪ್ರಸ್ತಾಪವಾದರೂ ಕೂಡ ಅವರು ತಮ್ಮ ಪೂರ್ವಾಶ್ರಮದ ಬೇಕರಿ ಬಗ್ಗೆ ಮಾತನಾಡುತ್ತಾರೆ ಎಂದು ಹೇಳಿ ಕಾಲೆಳೆದಿದ್ದರು. ತಮಗೆ ಅನಿಸಿದ್ದನ್ನು ನೇರವಾಗಿ ಹೇಳುವ ಗುರೂಜಿ, ಸಿಟ್ಟು ಬಂದರೆ ಹಳ್ಳಿ ಭಾಷೆಯಲ್ಲಿ ಬೈಯ್ದು ಬಿಡುತ್ತೇನೆ ಎಂದು ಹೇಳುತ್ತಾರೆ.
ಈ ಎಲ್ಲ ಕಾರಣದಿಂದಾಗಿ ಅವರ ವ್ಯಕ್ತಿತ್ವ ದೊಡ್ಮನೆಯಲ್ಲಿ ಸಖತ್ ಇಂಟರೆಸ್ಟಿಂಗ್ ಎನಿಸಿದೆ.

ಬೇರೆ ಎಲ್ಲ ಸ್ಪರ್ಧಿಗಳಿಗಿಂತಲೂ ಆರ್ಯವರ್ಧನ್ ಭಿನ್ನವಾಗಿದ್ದಾರೆ ಎಂದೇ ಹೇಳಬಹುದು. ಅವರಲ್ಲಿ ಇನ್ನೂ ಆ ಮುಗ್ಧತೆ ಇದೆ. ಅವರು ಯಾರ ವಿರುದ್ಧವೂ ದ್ವೇಷ ಕಟ್ಟಿಕೊಂಡಿಲ್ಲ. ಎಲ್ಲರ ಜೊತೆಯೂ ಬೆರೆಯುತ್ತಿದ್ದಾರೆ. ವಿಶೇಷ ಏನೆಂದರೆ, ಅಡುಗೆ ಮನೆಯಲ್ಲಿ ಅವರು ಹೆಚ್ಚು ಸಮಯ ಕಳೆದಿದ್ದಾರೆ. ಅಡುಗೆ ಕೆಲಸ ಮಾಡುವುದು ಅವರಿಗೆ ಪ್ರಿಯವಾದ ಕೆಲಸವೆಂದೇ ಅವರು ಹೇಳಿದ್ದಾರೆ.

ಈಗ ಕಲರ್ಸ್ ಸೂಪರ್ ವಾಹಿನಿ ( Colors Super) ಒಂದು ಪ್ರೋಮೋ ಹಂಚಿಕೊಂಡಿದೆ. ಅದರಲ್ಲಿ ಆರ್ಯವರ್ಧನ್ ಗುರೂಜಿ ( Aryavardhan Guruji) ಅವರ ಮಾತುಗಳು ಕಾಮಿಡಿಯಾಗಿದೆ. ‘ರಾಕಿ ರಾಕಿ ರಾಕಿ, ನಿಮ್ಮ ವೋಟ್ ನನಗೆ ಹಾಕಿ’ ಎಂದು ಅವರು ಪ್ರಾಸ ನುಡಿದಿದ್ದಾರೆ. ‘ನನ್ನ ಕೈಯಲ್ಲಿ ಅನ್ನ ತಿಂದಿದ್ದೀಯ. ಒಂದೇ ಒಂದು ವೋಟ್ ಕೊಡು. ಬಿಗ್ ಬಾಸ್ ನಿನಗೆ ಅನ್ನ ಕೊಟ್ಟಿರಬಹುದು. ಆದರೆ ಅನ್ನ ಮಾಡಿ ಹಾಕಿದವನು ನಾನು’ ಎಂದು ಗುರೂಜಿ ಹೇಳಿದ್ದು, ನಿಜಕ್ಕೂ ಸೂಪರ್ ಎನಿಸಿದೆ.

ಸದ್ಯ ಬಿಗ್ ಬಾಸ್ ಮನೆಯಲ್ಲಿ ಆರ್ಯವರ್ಧನ್ ಗುರೂಜಿ, ರಾಕೇಶ್ ಅಡಿಗ, ಜಯಶ್ರೀ ಆರಾಧ್ಯ, ಸೋನು ಶ್ರೀನಿವಾಸ್ ಗೌಡ, ಜಸ್ವಂತ್, ರೂಪೇಶ್ ಶೆಟ್ಟಿ, ಸಾನ್ಯಾ ಅಯ್ಯರ್, ಸೋಮಣ್ಣ ಮಾಚಿಮಾಡ ಇದ್ದಾರೆ. ಇವರ ಪೈಕಿ ನಾಲ್ಕು ಜನರು ಟಿವಿಯಲ್ಲಿ ಪ್ರಸಾರವಾಗುವ ‘ಬಿಗ್ ಬಾಸ್ ಕನ್ನಡ 9ನೇ ಸೀಸನ್’ನಲ್ಲಿ ಸ್ಪರ್ಧಿಸುವ ಅವಕಾಶ ಪಡೆಯುವ ಕಾಲ ಸನ್ನಿಹಿತವಾಗಿದೆ. ಕೊನೆಯ ವಾರ ಆಗಿರುವುದರಿಂದ ಬಿಗ್ ಬಾಸ್ ವೀಕ್ಷಕರಲ್ಲಿ ಕುತೂಹಲ ಹೆಚ್ಚಾಗಿದೆ.