ವಿಟಮಿನ್ ‘ಡಿ’ ಕೊರತೆಯಿಂದ ಏನು ಆರೋಗ್ಯ ಸಮಸ್ಯೆ ಉಂಟಾಗುತ್ತೆ? ತಿಳಿದುಕೊಳ್ಳಬೇಕಾದ ವಿಷಯ ಇದು

ಆರೋಗ್ಯವಾಗಿರಲು ಎಷ್ಟೇ ಕಸರತ್ತು ಮಾಡಿದರೂ ಕೆಲವೊಮ್ಮೆ ಸಾಲದು. ದೇಹವನ್ನು ಸಂಪೂರ್ಣವಾಗಿ ಆರೋಗ್ಯಕರವಾಗಿಡಲು ಎಲ್ಲಾ ಜೀವಸತ್ವಗಳು ಅತೀ ಅವಶ್ಯಕವಾಗಿದ್ದು, ವ್ಯಕ್ತಿಗೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸಿ, ಮೂಳೆಗಳು, ಹಲ್ಲುಗಳು ಮತ್ತು ಸ್ನಾಯುಗಳನ್ನು ಆರೋಗ್ಯವಾಗಿಡುವಲ್ಲಿ ವಿಟಮಿನ್ ಡಿ ಪ್ರಮುಖ ಪಾತ್ರ ವಹಿಸುತ್ತದೆ.

 

ವ್ಯಕ್ತಿಯ ಬೆಳವಣಿಗೆ ಹಾಗೂ ಉತ್ತಮ ಆರೋಗ್ಯಕ್ಕೆ ವಿಟಮಿನ್ ಡಿ ಅತ್ಯಗತ್ಯವಾಗಿದೆ. ದೇಹದ ಆರೋಗ್ಯ ಉತ್ತಮವಾಗಿರಲು ವಿಟಮಿನ್ಸ್, ಮಿನರಲ್ಸ್ ಮತ್ತು ಖನಿಜಾಂಶಗಳು ಸಮತೋಲನದಲ್ಲಿ ಇರಬೇಕು. ಪ್ರತಿಯೊಂದು ವಿಟಮಿನ್‍ಗಳು ದೇಹದ ಆರೋಗ್ಯವನ್ನು ಕಾಪಾಡಲು ಸಹಾಯ ಮಾಡುತ್ತವೆ. ಅವುಗಳ ನ್ಯೂನತೆ ಉಂಟಾದಾಗ ಕೆಲವು ಆರೋಗ್ಯ ಸಮಸ್ಯೆಗಳು ಗಂಭೀರತೆಯನ್ನು ಪಡೆದುಕೊಳ್ಳುವ ಸಾಧ್ಯತೆಗಳೇ ಹೆಚ್ಚು. ಸೂರ್ಯನ ಬೆಳಕಿಗೆ ದೇಹವನ್ನು ಒಡ್ಡಿಕೊಂಡಾಗ ದೇಹದಿಂದ ವಿಟಮಿನ್ ಡಿ ಉತ್ಪತ್ತಿ ಆಗುತ್ತದೆ.

ವಿಟಮಿನ್ ‘ಡಿ’ಯ ಕೊರತೆಯಾದರೆ, ಕರುಳಿನ ಕ್ಯಾನ್ಸರ್, ಹೃದ್ರೋಗ, ಅಧಿಕ ರಕ್ತದೊತ್ತಡ, ಪಾಶ್ರ್ವವಾಯು, ರೋಗನಿರೋಧಕ ಶಕ್ತಿಯ ಕೊರತೆ, ಮಧುಮೇಹದಂತಹ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. 55 ವರ್ಷಗಳ ನಂತರ ದೇಹದಲ್ಲಿ ಅನೇಕ ಜೀವಸತ್ವಗಳ ಕೊರತೆ ಇದ್ದರೂ ವಿಟಮಿನ್ ಡಿ ಕೊರತೆ ಹೆಚ್ಚು ಕಾಣಿಸುತ್ತದೆ. ವಿಟಮಿನ್ ಡಿ ಕೊರತೆಯು ಒಂಟಿತನ, ನಿದ್ರಾಹೀನತೆ , ಕಿರಿಕಿರಿ, ಒತ್ತಡ ಮತ್ತು ಕೀಲು ನೋವಿನಂತಹ ಸಮಸ್ಯೆಗಳಿಗೆ ಕಾರಣವಾಗುತ್ತದೆ.

ಮಕ್ಕಳಲ್ಲಿ ವಿಟಮಿನ್ ಡಿ ಕೊರತೆಯು ರಿಕೆಟ್’ಗಳಿಗೆ ಕಾರಣವಾಗುತ್ತದೆ. ಅಲ್ಲದೇ ವಯಸ್ಕರಲ್ಲಿ ಇದು ಆಸ್ಟಿಯೊಮಲೇಶಿಯಾಕ್ಕೆ ಕಾರಣವಾಗಬಹುದು. ಆಸ್ಟಿಯೊಮಲೇಶಿಯಾ ಬಂತೆಂದರೆ ಮೂಳೆ ನೋವು ಮತ್ತು ಮೃದುತ್ವವನ್ನು ಉಂಟುಮಾಡಿ, ಇದರಿಂದ ಖಿನ್ನತೆ, ಕೂದಲು ಉದುರುವುದು, ಸ್ನಾಯು ದೌರ್ಬಲ್ಯ ಮತ್ತು ಆಲಸ್ಯಕ್ಕೆ ಕಾರಣವಾಗಲೂ ಬಹುದು.

ಸಾಮಾನ್ಯವಾಗಿ ವಿಟಮಿನ್ ಡಿ ಕೊರತೆ ರಕ್ತ ಪರೀಕ್ಷೆಯಿಂದ ತಿಳಿಯಬಹುದು. ವಿಟಮಿನ್ ಡಿ ಕೊರತೆ ಪತ್ತೆ ಹಚ್ಚಲು ಸಂಶೋಧಕರು ನಾಲಿಗೆಯನ್ನು ಸ್ವಯಂ ಪರೀಕ್ಷೆ ಮಾಡುವ ಮೂಲಕ ಕಂಡು ಹಿಡಿಯಬಹುದೆಂದು ತಿಳಿಸಿದ್ದಾರೆ.

ವಿಟಮಿನ್ ಡಿ ಯ ಕೊರತೆಯನ್ನು ಪರೀಕ್ಷಿಸಲು ಮೇಯೊ ಕ್ಲಿನಿಕ್ ಪ್ರಕಾರ ಜನರಲ್ಲಿ ಬಾಯಿಯಲ್ಲಿ ಸುಡುವ ಸಂವೇದನೆ ಲಕ್ಷಣಗಳು ವಿಟಮಿನ್ ಗಳು, ಖನಿಜಗಳ ಕೊರತೆಯಿಂದ ಕಾಣಿಸಬಹುದು.ಈ ವೇಳೆ ರಕ್ತದ ಗ್ಲೋಕೋಸ್, ವಿಟಮಿನ್ ಡಿ (ಡಿ 2 ಮತ್ತು ಡಿ 3), ವಿಟಮಿನ್ ಬಿ 6, ಸತು, ವಿಟಮಿನ್ ಬಿ 1 ಮತ್ತು ಟಿಎಸ್ಎಚ್ ಅನ್ನು ಪರೀಕ್ಷಿಸಬೇಕು.

ಈ ಸುಡುವ ನೋವು ಅಥವಾ ಬೆಚ್ಚಗಿನ ಸಂವೇದನೆಯು ಸಾಮಾನ್ಯವಾಗಿ ತುಟಿಗಳು ಅಥವಾ ನಾಲಿಗೆಯ ಮೇಲೆ ಅಥವಾ ಬಾಯಿಯಲ್ಲಿ ಹೆಚ್ಚು ವ್ಯಾಪಕವಾಗಿ ಕಂಡು ಬರುತ್ತವೆ. ಇದು ವ್ಯಕ್ತಿಯು ಮರಗಟ್ಟುವಿಕೆ, ಶುಷ್ಕತೆ ಮತ್ತು ಬಾಯಿಯಲ್ಲಿ ಅಹಿತಕರ ರುಚಿ ಅನುಭವ, ಆಹಾರ ಸೇವಿಸುವಾಗ ನೋವು ಹೆಚ್ಚಾಗುತ್ತದೆ. ಸ್ಥಿತಿಯ ತೀವ್ರತೆಯು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತದೆ.

ವಿಟಮಿನ್ ಡಿ ಕೊರತೆಯಿಂದ ಆಯಾಸ, ಕೂದಲು ಉದುರುವಿಕೆ, ಬೊಜ್ಜು, ಸುಡುವ ನಾಲಿಗೆ ಅಥವಾ ಬಾಯಿ, ಸ್ನಾಯು ನೋವು, ನಿಧಾನ ಗಾಯ ಗುಣವಾಗುವುದು, ಮನಸ್ಥಿತಿಯಲ್ಲಿ ಏರು ಪೇರು, ಆತಂಕ ಮತ್ತು ಖಿನ್ನತೆ, ಮೂಳೆ ನೋವು, ನಿದ್ರೆಯ ಕೊರತೆ, ಮಧುಮೇಹ, ಹೃದಯರೋಗ, ಸ್ವಯಂ ನಿರೋಧಕ ಅಸ್ವಸ್ಥತೆಯಂತಹ ಲಕ್ಷಣಗಳು ಕಂಡು ಬರುತ್ತವೆ.

ವಿಟಮಿನ್ ಡಿ ದೇಹದಲ್ಲಿ ಕ್ಯಾಲ್ಸಿಯಂ ಅನ್ನು ಹೀರಿಕೊಳ್ಳುತ್ತದೆ ಮತ್ತು ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಸೂರ್ಯನ ಬೆಳಕು ವಾಸ್ತವವಾಗಿ ವಿಟಮಿನ್ ಡಿ ಯ ಅತ್ಯುತ್ತಮ ಮೂಲ.

ಆಹಾರದಲ್ಲಿ ಪಾಲಕ್, ಎಲೆಕೋಸು, ಬೆಂಡೆಕಾಯಿ, ಸೋಯಾಬೀನ್, ಬಿಳಿ ಬೀನ್ಸ್, ಸಾರ್ಡೀನ್ ಮತ್ತು ಸಾಲ್ಮನ್, ಮೀನು, ಡೈರಿ ಉತ್ಪನ್ನಗಳನ್ನು ಸೇವಿಸುವ ಮೂಲಕ ವಿಟಮಿನ್ ಡಿ ಕೊರತೆ ನೀಗಿಸಬಹುದು. ಮಕ್ಕಳಲ್ಲಿ ವಿಟಮಿನ್ ಡಿ ಕೊರತೆಯಾದಾಗ ಹಾಲನ್ನು ದಿನಕ್ಕೆ ಎರಡು ಬಾರಿ ಕುಡಿಸಲು ವೈದ್ಯರು ಸಲಹೆ ನೀಡುವುದು ತಿಳಿದಿರಬಹುದು. ಬಿಸಿಲಿಗೆ ಮೈಯೊಡ್ಡು ವುದರಿಂದ ವಿಟಮಿನ್ ಡಿ ಯ ಸಂಪೂರ್ಣ ಲಾಭ ಪಡೆಯಬಹುದು.

4 Comments
  1. MichaelLiemo says

    ventolin price uk: Ventolin inhaler best price – rx coupon ventolin
    can i buy ventolin over the counter in usa

  2. Josephquees says

    buy ventolin tablets online: Ventolin inhaler price – ventolin us price

  3. Timothydub says

    mexican rx online: mexico drug stores pharmacies – buying prescription drugs in mexico online

  4. Timothydub says

    indian pharmacy online: online Indian pharmacy – online pharmacy india

Leave A Reply

Your email address will not be published.