ಬೈಕ್ ಏರಿ ಕುಳಿತ ಎತ್ತು | ಮಾಲೀಕನೊಂದಿಗೆ ಜಾಲಿ ರೈಡ್ ಹೋಗುತ್ತಿರುವ ವೀಡಿಯೋ ವೈರಲ್

ಪ್ರಾಣಿಗಳು ಮೂರು ಹೊತ್ತು ಮನೆಯಲ್ಲಿಯೇ ಇರುತ್ತವೆ. ಮನೆಗಾವಲು ಮತ್ತು ಅದರಿಂದ ಏನಾದರೂ ನಾವು ಸಹಾಯವನ್ನು ಅಪೇಕ್ಷಿಸುತ್ತಲೇ ಇರುತ್ತೇವೆ. ಆದರೆ ಅವುಗಳಿಗೆ ಜೀವವಿದೆ. ಹಾಗಾಗಿ, ಅವುಗಳಿಗೂ ಮನರಂಜನೆ ಬೇಕು. ಇದಕ್ಕಾಗಿ ಇಲ್ಲೊಬ್ಬ ವ್ಯಕ್ತಿ ತನ್ನ ಪ್ರಾಣಿಯನ್ನು ಏನು ಮಾಡಿದ್ದಾನೆ ನೋಡಿ.

 


ಈ ಫೋಟೊದಲ್ಲಿ ವ್ಯಕ್ತಿಯೊಬ್ಬ ತನ್ನ ಬೈಕ್ ಚಲಾಯಿಸುತ್ತಿರುವುದನ್ನು ನೀವು ನೋಡಬಹುದು. ಆದರೆ, ಅದರಲ್ಲೇನು ಬೆಚ್ಚಿಬೀಳಿಸುವ ವಿಷಯ ಅಂತ ನೀವು ಪ್ರಶ್ನಿಸಬಹುದು. ಹಾಗಾದರೆ ಕೇಳಿ. ಫೋಟೋದಲ್ಲಿ ವ್ಯಕ್ತಿ ತನ್ನ ಬೈಕ್ ಮೇಲೆ ಕೂರಿಸಿರುವ ಪ್ರಾಣಿ ಮನುಷ್ಯನಾಗಿಲ್ಲ. ಅದೊಂದು ಎತ್ತು ಆಗಿದೆ. ಅಷ್ಟೇ ಅಲ್ಲ ಆ ಎತ್ತು ಸೀಟ್ ಬೆಲ್ಟ್ ಕೂಡ ಧರಿಸಿದೆ ಎಂಬುದು ಇನ್ನೂ ಆಶ್ಚರ್ಯಕರವಾಗಿದೆ.
ಈ ಫೋಟೋ ಈಗ ಎಲ್ಲೆಡೆ ವೈರಲ್ ಆಗಿದೆ.


ಆ ಫೊಟೋ ನೇ ಹೇಳ್ತಾ ಇದೆ. ಮನುಷ್ಯನು ತನ್ನ ಎತ್ತನ್ನು ಎಷ್ಟು ಪ್ರೀತಿ ಮಾಡ್ತಾನೆ ಅಂತ. ಎತ್ತನ್ನು ಬೈಕ್ ನಲ್ಲಿ ಕೂರಿಸಿಕೊಂಡು ಹೋಗುವುದು ಅಂದ್ರೆ ಅಷ್ಟು ಸುಲಭದ ಮಾತಲ್ಲ. ನೋಡಿ ನಿಮ್ಮ ಮನೆಯ ಪ್ರಾಣಿಗಳನ್ನು ಹೀಗೆ ಒಂದು ದಿನ ಟ್ರಿಪ್ ಕರೆದುಕೊಂಡು ಹೋಗಿ ಅವುಗಳಿಗೂ ಸುಂದರ ಪ್ರಪಂಚ ತೋರಿಸಿ… ಮನುಷ್ಯ ಮೂಕ ಪ್ರಾಣಿಗಳಿಗೂ ಬದುಕು ಇದೇ ಅನ್ನೋದನ್ನ ಮರೀಬೇಡಿ…

https://www.instagram.com/reel/Ch0nfCJo9wu/?utm_source=ig_web_copy_link

Leave A Reply

Your email address will not be published.