Home News ಅನ್ಯ ಜಾತಿಯ ಯುವಕನೊಂದಿಗೆ ಸಂಬಂಧ ಹೊಂದಿದ್ದಕ್ಕಾಗಿ ಜೀವವನ್ನೇ ಕಳೆದುಕೊಂಡ ಯುವತಿ!

ಅನ್ಯ ಜಾತಿಯ ಯುವಕನೊಂದಿಗೆ ಸಂಬಂಧ ಹೊಂದಿದ್ದಕ್ಕಾಗಿ ಜೀವವನ್ನೇ ಕಳೆದುಕೊಂಡ ಯುವತಿ!

Hindu neighbor gifts plot of land

Hindu neighbour gifts land to Muslim journalist

ಬಣ್ಣ, ಜಾತಿ, ಕುಲ ಯಾವುದಾದರೇನು ಎಲ್ಲರ ಮೈಯಲ್ಲಿ ಹರಿಯುತ್ತಿರುವುದು ಕೆಂಪು ಬಣ್ಣದ ರಕ್ತವೇ. ಆದರೂ, ಇಂದಿಗೂ ನಡೆಯುತ್ತಿದೆ ಭೇದ-ಭಾವ. ಹೌದು. ಅದೆಷ್ಟೋ ಪ್ರೇಮಿಗಳು ಜಾತಿ ಎಂಬ ಅನಿಷ್ಟಕ್ಕಾಗಿ ಜೀವವನ್ನೇ ಬಲಿ ತೆಗೆದುಕೊಂಡಿದ್ದಾರೆ. ಪ್ರೀತಿಗೆ ಪೋಷಕರು ವಿರೋಧಿಸಿದ್ದಾರೆ ಎಂದು ಆತ್ಮಹತ್ಯೆ ಮಾಡಿಕೊಂಡಂತಹ ಅದೆಷ್ಟೋ ಪ್ರಕರಣಗಳು ಬೆಳಕಿಗೆ ಬಂದಿದೆ. ಅದರಂತೆ ಇಲ್ಲೊಂದು ಕಡೆ ಅನ್ಯ ಜಾತಿಯ ಯುವಕನೊಂದಿಗೆ ಸಂಬಂಧ ಹೊಂದಿದ್ದಕ್ಕಾಗಿ ಮಗಳನ್ನೇ ಅಪ್ಪ ಕೊಲೆ ಮಾಡಿರುವ ಘಟನೆ ವರದಿಯಾಗಿದೆ.

ರೈತ ಪ್ರಮೋದ್ ಕುಮಾರ್ ಎಂಬಾತನನ್ನು ಕೊಲೆ ಕೇಸ್ ಗೆ ಸಂಬಂಧಿಸಿ ಬಂಧಿಸಿರುವ ಬಗ್ಗೆ ಪೊಲೀಸರು ಸ್ಪಷ್ಟಡಿಸಿದ್ದಾರೆ. ಈ ಘಟನೆ ಉತ್ತರಪ್ರದೇಶದ ಶಾಮ್ಲಿ ಜಿಲ್ಲೆಯ ಹಳ್ಳಿಯಲ್ಲಿ ನಡೆದಿದೆ.

ಅನ್ಯ ಜಾತಿಯ ಯುವಕನೊಂದಿಗೆ ಸಂಬಂಧ ಹೊಂದಿದ್ದಕ್ಕಾಗಿ 18 ವರ್ಷದ ಯುವತಿಯನ್ನು ಕೊಲೆ ಮಾಡಿ ಬೆಂಕಿ ಹಚ್ಚಿದ್ದಾನೆ. ಪ್ರಮೋದ್ ಮೇಲ್ಜಾತಿಯ ವ್ಯಕ್ತಿಯಾಗಿದ್ದು, ಮಗಳು ಕಾಜಲ್ ಹಿಂದುಳಿದ ಜಾತಿಯ ಯುವಕ ಅಜಯ್ ಜೊತೆಗಿನ ಸಂಬಂಧಕ್ಕೆ ವಿರೋಧಿಸಿದ್ದ. ತನ್ನ ಮಗಳಿಗೆ ಅಜಯ್ ಜೊತೆ ಮಾತನಾಡದಂತೆ ಹೇಳಿದ್ದ.‌ ಇದಕ್ಕೆ ಕಾಜಲ್ ವಿರೋಧಿಸಿದ್ದಕ್ಕಾಗಿ ಕೊಲೆ ಮಾಡಿದ್ದಾನೆ.

ಪ್ರಮೋದ್ ಅವರ ಮಗಳು ಇತ್ತೀಚೆಗೆ 20 ವರ್ಷದ ಅಜಯ್ ಎಂಬಾತನೊಂದಿಗೆ ಕುಟುಂಬಕ್ಕೆ ತಿಳಿಸದೆ ಮನೆಯಿಂದ ಹೊರಟು ಹೋಗಿದ್ದಳು. ನಂತರ ಸಾಮಾಜಿಕ ಕಳಂಕದ ಭಯದಿಂದ ಅವಳನ್ನು ಕೊಲ್ಲಲು ಪ್ರಮೋದ್ ನಿರ್ಧರಿಸಿ ಸೆಪ್ಟೆಂಬರ್ 9 ಮತ್ತು ಸೆಪ್ಟೆಂಬರ್ 10 ರ ರಾತ್ರಿ ಯಾವುದೋ ಕೆಲಸದ ನೆಪದಲ್ಲಿ ಹೊಲಕ್ಕೆ ಕರೆದೊಯ್ದು ಆಕೆಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ನಂತರ ಆಕೆಯ ಶವವನ್ನು ಸುಟ್ಟು ಹಾಕಿದ್ದಾನೆ.

ಅಷ್ಟೇ ಅಲ್ಲದೆ, ಮನೆಗೆ ಮರಳಿದ ನಂತರ, ಮಗಳನ್ನು ಪಾಣಿಪತ್‌ನಲ್ಲಿ ತನ್ನ ಸಹೋದರನೊಂದಿಗೆ ಬಿಟ್ಟು ಬಂದಿರುವುದಾಗಿ ಪ್ರಮೋದ್ ತನ್ನ ಕುಟುಂಬಕ್ಕೆ ತಿಳಿಸಿದ್ದಾನೆ ಎಂದು ಝಿಝಾನಾ ಪೊಲೀಸ್ ಠಾಣೆಯ ಎಸ್‌ಹೆಚ್‌ಒ ಪಂಕಜ್ ತ್ಯಾಗಿ‌ ಈ ಕುರಿತು ಮಾಹಿತಿ ಬಿಚ್ಚಿಟ್ಟಿದ್ದಾರೆ.

ಹೊಲಕ್ಕೆ ಕರೆದೋಗಿ ಅಲ್ಲೇ ಕೊಲೆ ಮಾಡಿದ್ದರಿಂದ, ಮಾಲಕನಿಗೆ ಹೊಲದಲ್ಲಿ ಶವ ಸುಟ್ಟು ಹೋಗಿರುವುದು ಕಂಡು ಬಂದಿದೆ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದು, ಈ ಕುರಿತು ತನಿಖೆ‌ ನಡೆಸಿದಾಗ ಅಪ್ಪನ ಗುಟ್ಟು ರಟ್ಟಾಗಿದೆ.