ಅಬ್ಬಬ್ಬಾ ಬೆಂಗಳೂರು ಟ್ರಾಫಿಕ್ | ವರ್ಷಕ್ಕೆ ಎಷ್ಟು ಗಂಟೆಗಳ ಕಾಲ ಟ್ರಾಫಿಕ್‌ನಲ್ಲಿ ಕಳೆಯುತ್ತಾರೆ ಗೊತ್ತಾ ಬೆಂಗಳೂರಿಗರು?
ಬೆಂಗಳೂರಿಗರಿಗೆ ಟ್ರಾಫಿಕ್ ಅಂತೂ ತಲೆಯನ್ನು ತಿಂದು ಹಾಕಿ ಬಿಡುತ್ತೆ. ಅತ್ಯಂತ ದೊಡ್ಡ ಸಮಸ್ಯೆ ಎಂದರೆ ತಪ್ಪಾಗಲಿಕ್ಕಿಲ್ಲ. ಬೆಂಗಳೂರಿನ ಟ್ರಾಫಿಕ್ ಅದೆಷ್ಟರ ಮಟ್ಟಿಗಿದೆ ಎಂದರೆ ವಿಶ್ವದಲ್ಲಿ ಅತಿ ಹೆಚ್ಚು ಟ್ರಾಫಿಕ್ ಇರುವ ನಗರಗಳ ಪಟ್ಟಿಯಲ್ಲಿ ಬೆಂಗಳೂರು 5ನೇ ಸ್ಥಾನ ಪಡೆದಿದೆ.
ವಾಣಿಜ್ಯ ನಗರಿ ಮುಂಬೈ ಪಟ್ಟಿಯ ಮೂರನೇ ಸ್ಥಾನದಲ್ಲಿ ಮುಂಬೈ ಇದ್ದು, 6ನೇ ಸ್ಥಾನದಲ್ಲಿ ರಾಷ್ಟ್ರ ರಾಜಧಾನಿ ನವದೆಹಲಿಯಿದೆ. ಜಾಗತಿಕ ಸಂಶೋಧನಾ ಸಂಸ್ಥೆಯಾಗಿರುವ ಗೋಶಾರ್ಟಿ ಬಿಡುಗಡೆ ಮಾಡಿರುವ ಅಧ್ಯಯನ ವರದಿಯಲ್ಲಿ ಈ ಅಂಶ ಹೊರಬಿದ್ದಿದೆ.
ಮುಂಬೈನಲ್ಲಿ ವಾಹನ ಮಾಲೀಕರು ವರ್ಷಕ್ಕೆ 121 ಗಂಟೆಗಳನ್ನು ಟ್ರಾಫಿಕ್‌ನಲ್ಲಿಯೇ ಕಳೆಯುತ್ತಾರೆ. ಬೆಂಗಳೂರು ಮತ್ತು ನವದೆಹಲಿಯಲ್ಲಿ ಜನರು ವರ್ಷದಲ್ಲಿ 110 ಗಂಟೆಗಳನ್ನು ಟ್ರಾಫಿಕ್‌ನಲ್ಲಿಯೇ ಕಳೆಯುತ್ತಾರೆ.