ಕೊರೋನ ಸೋಂಕು ಕಡಿಮೆಯಾಗಿದೆ ಅಂದುಕೊಳ್ಳುವಷ್ಟರಲ್ಲೇ ಶಾಕಿಂಗ್ ನ್ಯೂಸ್ ಬಹಿರಂಗಪಡಿಸಿದ WHO

Share the Article

ಕೊರೋನ ಆತಂಕ ದೂರವಾಗಿದೆ ಎಂದು ನಿಟ್ಟುಸಿರು ಬಿಡುವಷ್ಟರಲ್ಲೇ, ಅಲ್ಲಲ್ಲಿ ಸೋಂಕು ಪತ್ತೆಯಾಗುತ್ತಲೇ ಇದೆ. ಇದರ ನಡುವೆ ಆರೋಗ್ಯ ಸಂಸ್ಥೆ ಮತ್ತೊಂದು ಆಘಾತಕಾರಿ ಮಾಹಿತಿಯನ್ನು ತಿಳಿಸಿದೆ.

ಹೌದು. ಕೊರೋನ ಸೋಂಕಿತರ ಸಂಖ್ಯೆ ಇಳಿಕೆ ಕಂಡರೂ, ವಿಶ್ವದಲ್ಲಿ ಪ್ರತಿ 44 ಸೆಕೆಂಡ್‍ಗೆ ಒಬ್ಬರಂತೆ ಈಗಲೂ ಸಾವನ್ನಪ್ಪುತ್ತಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ (WHO) ತಿಳಿಸಿದೆ. ಭಾರತದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ 5,076 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಒಟ್ಟು 47,945 ಸಕ್ರಿಯ ಪ್ರಕರಣ ದೇಶದಲ್ಲಿದೆ. ಹೀಗಾಗಿ, ಜನಸಾಮಾನ್ಯರು ಸೋಂಕಿನ ಬಗ್ಗೆ ನಿರ್ಲಕ್ಷ್ಯ ವಹಿಸಬೇಡಿ ಎಂದು ಎಚ್ಚರಿಕೆ ನೀಡಿದರು.

ವಿಶ್ವದಾದ್ಯಂತ ಕೊರೊನಾ ಕೇಸ್‍ಗಳ ಸಂಖ್ಯೆ ಇಳಿಕೆ ಕಾಣುವುದರ ಜೊತೆಗೆ ಮರಣ ಪ್ರಮಾಣ ಕೂಡ ಗಣನೀಯ ಇಳಿಕೆ ಕಂಡಿದೆ. ಕಳೆದ ಒಂದು ವಾರದ ಅಂಕಿ ಅಂಶಗಳನ್ನು ಗಮನಿಸಿದ ಬಳಿಕ ಕೊರೊನಾದಿಂದಾಗಿ ಸಾವನ್ನಪ್ಪುತ್ತಿರುವವರ ಸಂಖ್ಯೆ ಶೇ.80ರಷ್ಟು ಇಳಿಕೆ ಕಂಡಿದೆ. ಆದರೂ ಪ್ರತಿ 44 ಸೆಕೆಂಡ್‍ಗೆ ಒಬ್ಬರಂತೆ ಈಗಲೂ ಸಾವನ್ನಪ್ಪುತ್ತಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥ ಟೆಡ್ರೊಸ್ ಅಧಾನೊಮ್ ಫೆಬ್ರೆಯೆಸಸ್ ಹೇಳಿದ್ದಾರೆ.

Leave A Reply