ಇನ್ಸ್ಟಾಗ್ರಾಮ್ ಬಳಕೆದಾರರಿಗೆ ಸಿಹಿಸುದ್ದಿ | ಇನ್ಮುಂದೆ ದೊರೆಯಲಿದೆ ಈ ಹೊಸ ಫೀಚರ್!
ಇನ್ಸ್ಟಾಗ್ರಾಮ್ ತನ್ನ ಬಳಕೆದಾರರನ್ನು ಹೆಚ್ಚಿಸಲು ಹೊಸ ಅಪ್ಡೇಟ್ ಗಳನ್ನು ಮಾಡುತ್ತಲೇ ಬಂದಿದ್ದು, ಈ ಮೂಲಕ ಅತೀ ಹೆಚ್ಚು ಜನರನ್ನು ತನ್ನದಾಗಿಸಿಕೊಂಡಿದೆ. ಇದೀಗ ಇನ್ಸ್ಟಾಗ್ರಾಮ್ ಬಳಕೆದಾರರಿಗೆ ಮತ್ತೊಂದು ಫೀಚರ್ ಅಪ್ಡೇಟ್ ನೊಂದಿಗೆ ಸಿಹಿಸುದ್ದಿ ನೀಡಿದ್ದು, ಪೋಸ್ಟ್ಗಳನ್ನು ರಿಪೋಸ್ಟ್ ಮಾಡಲು ಅನುಮತಿಸಿದೆ.
ಸದ್ಯ ಈ ಹೊಸ ಫೀಚರ್ ಕುರಿತು ಸೊಶೀಯಲ್ ಮೀಡಿಯಾ ವಿಶ್ಲೇಷಕ ಮ್ಯಾಟ್ ನರ‍್ರಾ ಅವರು ಮಾಹಿತಿ ನೀಡಿದ್ದಾರೆ. ಟ್ವೀಟ್ನಲ್ಲಿ ಇನ್ಸ್ಟಾಗ್ರಾಮ್ ಪ್ರೊಫೈಲ್ಗಳು ‘ರಿಪೋಸ್ಟ್ಗಳು’ ಟ್ಯಾಬ್ ಅನ್ನು ಸಹ ಪಡೆಯುತ್ತವೆ ಎಂದು ಬಹಿರಂಗಪಡಿಸಿದ್ದಾರೆ ಎನ್ನಲಾಗಿದೆ.
ಇನ್‌ಸ್ಟಾಗ್ರಾಮ್‌ನಲ್ಲಿ ನೀವು ಬಯಸುವ ಪೋಸ್ಟ್ ರಿಪೋಸ್ಟ್ ಮಾಡುವುದಕ್ಕೆ ಹೊಸ ಫೀಚರ್ ಅನುಕೂಲ ಮಾಡಿಕೊಡಲಿದೆ. ರಿಪೋಸ್ಟ್ಗಳು ಬಳಕೆದಾರರು ತಮ್ಮ ಹಿಂಬಾಲಕರೊಂದಿಗೆ ಹಂಚಿಕೊಳ್ಳಲು ಬಯಸುವ ಪೋಸ್ಟ್ಗಳನ್ನು ನೇರವಾಗಿ ಅವರ ಹೋಮ್ ಫೀಡ್ಗಳಿಗೆ ಕಳುಹಿಸಲು ಅನುಮತಿಸುತ್ತದೆ.
ಪೋಸ್ಟ್‌ಗಳನ್ನು ರಿಪೋಸ್ಟ್ ಮಾಡಲು ಅನುಮತಿಸುವುದಕ್ಕೆ ಮುಂದಾಗಿದೆ. ಇದಕ್ಕಾಗಿ ಹೊಸ ಬಟನ್ ಪರಿಚಯಿಸಲಿದ್ದು, ಶೀಘ್ರದಲ್ಲೇ ಇದು ಇನ್‌ಸ್ಟಾಗ್ರಾಮ್ ಫ್ಲಾಟ್ ಫಾರ್ಮ್ ನಲ್ಲಿ ಲಭ್ಯವಾಗಲಿದೆ. ಇದು ನಿಮ್ಮ ಪ್ರೊಫೈಲ್‌ನಲ್ಲಿ ನೀವು ಎಲ್ಲಿಯವರೆಗೆ ಬಯಸುತ್ತೀರೋ ಅಲ್ಲಿಯವರೆಗೆ ರಿಪೋಸ್ಟ್ ಉಳಿಯುವಂತೆ ಮಾಡಲಿದೆ.