Canara Bank ನಿಂದ ಬಡ್ಡಿದರ ಏರಿಕೆ | RBI ರೆಪೋ ದರ ಏರಿಕೆ ಎಫೆಕ್ಟ್
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಆಗಸ್ಟ್ ತಿಂಗಳೊಂದರಲ್ಲೆ ರೆಪೋ ದರವನ್ನು ಮೂರನೇ ಬಾರಿಗೆ ಹೆಚ್ಚಳ ಮಾಡಿದೆ. ಈ ಬೆನ್ನಲ್ಲೇ ಹಲವಾರು ಬ್ಯಾಂಕುಗಳು ತಮ್ಮ ಸಾಲದ ಬಡ್ಡಿದರ ಹಾಗೂ ಫಿಕ್ಸೆಡ್ ಡೆಪಾಸಿಟ್ ಬಡ್ಡಿದರವನ್ನು ಪರಿಷ್ಕರಿಸಿ ಏರಿಕೆ ಮಾಡಿದೆ. ಈಗ ಕೆನರಾ ಬ್ಯಾಂಕ್ ನ ಸರದಿ. ಕೆನರಾ ಬ್ಯಾಂಕ್ ತನ್ನ ಎಂಸಿಎಲ್ಆರ್ ಅನ್ನು ಶೇಕಡ 0.15 ರಷ್ಟು ಅಧಿಕ ಮಾಡಿದೆ. ಇದರಿಂದಾಗಿ ಗ್ರಾಹಕರಿಗೆ ಹೆಚ್ಚಿನ EMI ಹೊರೆಯು ಬೀಳಲಿದೆ. ಮನೆ ನಿರ್ವಹಣೆ ‘ಮನೆಯವರಿಗೆ ‘ ಕಷ್ಟ ಆಗಲಿದೆ.
ಕೆನರಾ ಬ್ಯಾಂಕ್ ಶೇಕಡ 0.15 ರಷ್ಟು ತನ್ನ ನ್ಯೂ ಮಾರ್ಜಿನಲ್ ಕಾಸ್ಟ್ ಆಫ್ ಫಂಡ್ ಬೇಸ್ಟ್ ಲೆಂಡಿಂಗ್ ರೇಟ್ (ಎಂಸಿಎಲ್ಆರ್) ಅನ್ನು ಅಧಿಕ ಮಾಡಿದ್ದು, ಈ ನೂತನ ಬಡ್ಡಿದರವು ಮೊನ್ನೆ ಸೆಪ್ಟೆಂಬರ್ 6, ಬುಧವಾರದಿಂದ ಜಾರಿಗೆ ಬಂದಿದೆ.
ಕಳೆದ ತಿಂಗಳು ಆಗಿತ್ತು ರೆಪೋ ದರ ಹೆಚ್ಚಳ !
ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ರೆಪೋ ದರವನ್ನು ಮತ್ತೆ ಏರಿಕೆ ಮಾಡಿದೆ. ಆರ್ಬಿಐ ರೆಪೋ ದರವನ್ನು 50 ಮೂಲಾಂಕ ಏರಿಕೆ ಮಾಡಿದ್ದು, ಶೇಕಡ 5.4ಕ್ಕೆ ತಲುಪಿದೆ. ದೇಶದಲ್ಲಿ ಹಣದುಬ್ಬರವನ್ನು ಹತೋಟಿಗೆ ತರುವ ನಿಟ್ಟಿನಲ್ಲಿ ಆರ್ಬಿಯ ಹಲವು ಬಾರಿ ರೆಪೋ ದರವನ್ನು ಏರಿಕೆ ಮಾಡಿದೆ.
ಸಾಲದ ಬಡ್ಡಿದರ ಹೆಚ್ಚಿಸಿದ ಕೆನರಾ ಬ್ಯಾಂಕ್ ನ ನೂತನ ಬಡ್ಡಿದರ ಇಲ್ಲಿದೆ :
ಹಿಂದೆ ಎಂಸಿಎಲ್ಆರ್ ಶೇಕಡ 7.65 ಆಗಿತ್ತು, ಶೇಕಡ 0.15 ರಷ್ಟು ದರ ಹೆಚ್ಚಳ ಮಾಡಿದ ಬಳಿಕ ಒಂದು ವರ್ಷದ ಅವಧಿಯ ಎಂಸಿಎಲ್ಆರ್ ಶೇಕಡ 7.75 ಕ್ಕೆ ಏರಿಕೆ ಆಗಿದೆ. ಸಾಮಾನ್ಯವಾಗಿ ಹೆಚ್ಚಿನ ಸಾಲಗಳು ಅಂದರೆ ಆಟೋ, ವೈಯಕ್ತಿಕ, ಗೃಹ ಸಾಲಗಳು ಒಂದು ವರ್ಷದ ಅವಧಿಗೆ ನಿಶ್ಚಿತವಾಗಿರುತ್ತದೆ. ಅದರಲ್ಲಿ ಬದಲಾವಣೆ ಇರುವುದಿಲ್ಲ.
ಕಳೆದ ಜುಲೈ ತಿಂಗಳಿನಲ್ಲಿ ಸಾಲದ ಬಡ್ಡಿದರ ಹೆಚ್ಚಿಸಿದ್ದ ಸಾರ್ವಜನಿಕ ವಲಯದ ಪ್ರಮುಖ ಬ್ಯಾಂಕ್ ಆದ ಕೆನರಾ ಬ್ಯಾಂಕ್ ಸಾಲದ ಮೇಲಿನ ಬಡ್ಡಿದರವನ್ನು ಹೆಚ್ಚಳ ಮಾಡಿದೆ. ಜುಲೈ 7ರಿಂದ ಜಾರಿಗೆ ಬರುವಂತೆ ಕೆನರಾ ಬ್ಯಾಂಕ್ ಎಂಸಿಎಲ್ಆರ್ ಹಾಗೂ ರೆಪೊ ಲಿಂಕ್ ಲೆಂಡಿಂಗ್ ದರ (RLLR) ಅನ್ನು ಹೆಚ್ಚಳ ಮಾಡಿದೆ. ಒಂದು ವರ್ಷದವರೆಗಿನ ಸಾಲದ ಬಡ್ಡಿದರವನ್ನು ಹೆಚ್ಚಿಸಿತ್ತು. ಈಗ ಮತ್ತೆ ಹೆಚ್ಚಳ ಕಂಡಿದೆ.