ಪ್ರಬಲ ಭೂಕಂಪಕ್ಕೆ ತತ್ತರಿಸಿದ ಜನ | 46 ಮಂದಿಯ ದಾರುಣ ಸಾವು

ಚೀನಾದಲ್ಲಿ ಪ್ರಬಲ ಭೂಕಂಪವಾಗಿದೆ. ಚೀನಾದ ಸಿಚುವಾನ್ ಪ್ರಾಂತ್ಯದಲ್ಲಿ ಸೋಮವಾರ 6.6 ತೀವ್ರತೆಯ ಭೂಕಂಪ ಸಂಭವಿಸಿದೆ. ಕನಿಷ್ಠ 46 ಮಂದಿ ಸಾವಿಗೀಡಾಗಿರುವುದಾಗಿ ವರದಿಯಾಗಿದೆ.

ಈ ಭಾಗದಲ್ಲಿ 2017ರ ಬಳಿಕ ಸಂಭವಿಸಿದ ಪ್ರಬಲ ಭೂಕಂಪ ಇದಾಗಿದ್ದು ಎಂದು ವರದಿಯಾಗಿದೆ. ಈ ಭೂಕಂಪನದ ತೀವ್ರತೆ ಎಷ್ಟಿತ್ತು ಎಂದರೆ ರಸ್ತೆಗಳು ಹಾಗೂ ಮನೆಗಳಿಗೆ ಭೂಕುಸಿತದಿಂದ ಗಂಭೀರ ಹಾನಿಯಾಗಿವೆ. ಅದೃಷ್ಟವಶಾತ್ ಅಣೆಕಟ್ಟುಗಳಿಗೆ ಹಾಗೂ ಜಲವಿದ್ಯುತ್ ಕೇಂದ್ರಗಳಿಗೆ ಯಾವುದೇ ಹಾನಿ ಸಂಭವಿಸಿಲ್ಲ. ಆದರೆ, ಸುಮಾರು 40,000 ಮನೆಗಳಿಗೆ ವಿದ್ಯುತ್ ಕಡಿತಗೊಂಡಿದೆ ಹಾಗೂ ಸಂಪರ್ಕ ಕಡಿತಗೊಂಡಿದೆ.

ಚೀನಾದ ಲೂಡಿಂಗ್ ಪಟ್ಟಣದಲ್ಲಿ ಭೂಕಂಪನ ಸಂಭವಿಸಿದ್ದು, ಇದುವೇ ಮುಖ್ಯ ಕೇಂದ್ರಬಿಂದುವಾಗಿತ್ತು. ಭೂಮಿ ಕಂಪಿಸುತ್ತಿದ್ದಂತೆ ಜನ ಮನೆಗಳಿಂದ ರಸ್ತೆಗೆ ಓಡಿ ಬಂದಿದ್ದರು. ಎಲ್ಲಾ ಕಡೆ ವಸ್ತುಗಳು ಚೆಲ್ಲಾಪಿಲ್ಲಿಯಾದವು. ಕಟ್ಟಡಗಳು ಅಲುಗಾಡಿದವು ಹಾಗೂ ಭಾರಿ ಸದ್ದು ಕೇಳಿರುವುದು ವರದಿಯಾಗಿದೆ.

ಭೂಮಿಯ ಮೇಲೆ ಆಗಾಗ ಆಗುವ ವಿಲಕ್ಷಣ ಹವಾಮಾನ ಈ ಎಲ್ಲಾ ವೈಪರೀತ್ಯಕ್ಕೆ ಕಾರಣವೆಂದೇ ಹೇಳಬಹುದು. ಮಳೆಗಾಲ ಮುಗಿದ ನಂತರ, ಪ್ರವಾಹದಿಂದ ತಣ್ಣಗೆ ಆಗಿದ್ದ ನೆಲ ನಂತರ ಸುಡು ಬಿಸಿಲಿಗೆ ಸುಡತೊಡಗುತ್ತದೆ. ಸದಾ ತಣ್ಣಗೆ ಇರುವ ದೇಶಗಳಲ್ಲಿ ಬಿಸಿಗಾಳಿ ಜನರ ಜೀವವನ್ನು ತೆಗೆಯುತ್ತದೆ. ಸದ್ಯ ಇಂತಹದ್ದೊಂದು ಸ್ಥಿತಿಯನ್ನು ಅಕ್ಕಪಕ್ಕದಲ್ಲಿರುವ ಪಾಕಿಸ್ತಾನ ಹಾಗೂ ಚೀನಾ ಎದುರಿಸುತ್ತಿದೆ.

Leave A Reply

Your email address will not be published.