ಮತ್ತೆ ಸಂಭವಿಸಿದ ತೀವ್ರ ಭೂಕಂಪ | 6 ಮಂದಿ ಸಾವು

Share the Article

ದೇಶದಾದ್ಯಂತ ಅಲ್ಲಲ್ಲಿ ಭೂಕಂಪನಗಳ ವರದಿಯಾಗುತ್ತಲೇ ಇರುತ್ತದೆ. ಈಗ ಅಫ್ಘಾನಿಸ್ತಾನದ ಹಲವು ಪ್ರಾಂತ್ಯಗಳಲ್ಲಿ ಇಂದು ಬೆಳಿಗ್ಗೆ ಭಾರೀ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 5.3ರ ತೀವ್ರತೆಯನ್ನು ತೋರಿಸಿದೆ. ಈ ಭೂಕಂಪನದ ತೀವ್ರತೆಗೆ 6 ಮಂದಿ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

ನಂಗರ್‌ಹಾರ್ ಪ್ರಾಂತ್ಯದ ರಾಜಧಾನಿಯಾದ ಜಲಾಲಾಬಾದ್ ಬಳಿ ಬೆಳಗಿನ ಜಾವ 2:27 (ಅಫ್ಘಾನಿಸ್ತಾನ ಸಮಯ)ರಲ್ಲಿ ಮತ್ತು 10 ಕಿಲೋಮೀಟರ್ ಆಳದಲ್ಲಿ ಭೂಮಿ ಕಂಪಿಸಿದೆ ಎಂದು ಯುನೈಟೆಡ್ ಸ್ಟೇಟ್ಸ್ ಜಿಯೋಲಾಜಿಕಲ್ ಸರ್ವೆ (USGS) ತಿಳಿಸಿದೆ.

‘ಕುನಾರ್‌ನ ನೂರ್ಗುಲ್ ಜಿಲ್ಲೆಯಲ್ಲಿ ಸಂಭವಿಸಿದ ಭೂಕಂಪದಲ್ಲಿ ಆರು ಜನರು ಸಾವನ್ನಪ್ಪಿದ್ದಾರೆ ಮತ್ತು ಒಂಬತ್ತು ಮಂದಿ ಗಾಯಗೊಂಡಿದ್ದಾರೆ’ ಎಂದು ಕುನಾ‌ರ್ ಪ್ರಾಂತ್ಯದ ಸ್ಥಳೀಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಈ ಭೂಕಂಪನದ ತೀವ್ರತೆಗೆ ಇನ್ನೂ ಹೆಚ್ಚು ಸಾವು ನೋವು ಉಂಟಾಗಬಹುದು ಎಂದು ಅಂದಾಜಿಸಲಾಗಿದೆ.

Leave A Reply