Women health tip : ಬ್ರಾ ಧರಿಸಿದರೆ ಬೆನ್ನು ನೋವು ಹೆಚ್ಚುತ್ತಾ ? ಸತ್ಯಾಸತ್ಯತೆ ಏನು?

ಮಹಿಳೆಯರ ಒಳ ಉಡುಪುಗಳಲ್ಲಿ ಒಂದಾಗಿರುವಂತಹ ಬ್ರಾ ಇದನ್ನು 1914ರಲ್ಲಿ ಪರಿಚಯಿಸಲಾಯಿತು. ಇದರ ಬಳಿಕ ಬ್ರಾ ಅದ್ಭುತವಾದ ಜನಪ್ರಿಯತೆ ಪಡೆದುಕೊಂಡು, ಇಂದು ವಿವಿಧ ರೂಪ ಹಾಗೂ ವಿನ್ಯಾಸಗಳಲ್ಲಿ ಲಭ್ಯವಿದೆ. ಹೀಗಾಗಿ ಬ್ರಾ ಮಹಿಳೆಯ ಜೀವನದ ಅವಿಭಾಜ್ಯ ಅಂಗವಾಗಿ ಬಿಟ್ಟಿದೆ.

 

ಮಹಿಳೆಯರು ಧರಿಸುವ ಒಳಉಡುಪಾಗಿರುವ ಬ್ರಾ ಮಹಿಳೆಯರಿಗೆ ಫಿಟ್ ಮತ್ತು ಸ್ಟೈಲಿಶ್ ಲುಕ್ ನೀಡುತ್ತದೆ. ಬ್ರಾ ಧರಿಸುವುದರಿಂದ ಅನೇಕ ಪ್ರಯೋಜನಗಳಿವೆ. ಅನೇಕ ಮಂದಿ ಬ್ರಾ ಧರಿಸುವುದರಿಂದ ಸಮಸ್ಯೆಗಳು ಹೆಚ್ಚು ಕಾಣಿಸಿಕೊಳ್ಳುತ್ತವೆ ಎಂಬ ತಪ್ಪು ಕಲ್ಪನೆಯಲ್ಲಿದ್ದಾರೆ. ಬ್ರಾ ಧರಿಸದಿದ್ದಾಗ ಆಗುವ ಅಹಿತಕರ ಭಾವನೆ ಕೂಡ ಕೆಲವರಲ್ಲಿ ಕಾಣಿಸುವುದುಂಟು.

ಇಲ್ಲಿ ನಾವು ಬ್ರಾಗಳ ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳುವ ಮೊದಲು ಸ್ತನದ ಬಗ್ಗೆ ತಿಳಿದುಕೊಳ್ಳುವುದು ಮುಖ್ಯ.

ಸ್ತನಗಳು ಗ್ಲೆಂಡುಲಾರ್ ಅಂಗಾಂಶ ಮತ್ತು ಕೊಬ್ಬಿನಿಂದ ಮಾಡಲ್ಪಟ್ಟಿವೆ. ಸ್ತನವನ್ನು ದೃಢವಾಗಿಡಲು ಕೂಪರ್ ಲಿಗಮೆಂಟ್ ಎಂಬ ಅಸ್ಥಿರಜ್ಜು ಸಹಾಯ ಮಾಡುತ್ತದೆ. ಸ್ತನದ ಆಕಾರವು ಗ್ಲೆಂಡುಲಾರ್ ಅಂಗಾಂಶ ಕೊಬ್ಬನ್ನು ಅವಲಂಬಿಸಿರುತ್ತದೆ.

ಬ್ರಾ ಧರಿಸುವುದು ಅಥವಾ ಧರಿಸದಿರುವುದು ಪ್ರತಿಯೊಬ್ಬ ಮಹಿಳೆಯ ವೈಯಕ್ತಿಕ ಆಯ್ಕೆಯಾಗಿದೆ. ಆದರೆ ಮಹಿಳೆಯರು ಬ್ರಾ ಧರಿಸದಿದ್ದರೆ ಅದರಿಂದ ಸ್ತನಕ್ಕೆ ಹಾನಿಯಾಗುತ್ತದೆಯೆಂಬ ಭಯ ಹಾಗೂ ಕಾಯಿಲೆಗಳು ಬರುತ್ತವೆ ಎಂಬ ಆತಂಕ ಹಲವರಿಗಿದೆ.
ಈ ರೀತಿಯ ತಪ್ಪು ಕಲ್ಪನೆಗಳು ಮತ್ತು ಅದರ ಸತ್ಯಾ ಸತ್ಯತೆ ಬಗ್ಗೆ ಹೇಳಿಕೊಡುವ ಕಿರು ಮಾತು ಇದಾಗಿದೆ.

  1. ಅಂಡರ್‌ವೇರ್ ಬ್ರಾಗಳು ಮಹಿಳೆಯರ ಸ್ತನ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತವೆ – 1990ರ ದಶಕದ ಕೆಲವು ಸಂಶೋಧನೆಗಳು ಅಂಡರ್‌ವೇರ್ ಬ್ರಾಗಳು ಸ್ತನದಲ್ಲಿ ವಿಷವನ್ನು ಹಿಡಿದಿಟ್ಟುಕೊಳ್ಳುವ ಮೂಲಕ ಸ್ತನ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತವೆ ಎಂದು ಹೇಳಿವೆ.

ಅಂಡರ್‌ವೇರ್ ಬ್ರಾಗಳು ದೀರ್ಘಕಾಲದ ವರೆಗೆ ಧರಿಸಲು ಅನಾನುಕೂಲವಾಗಬಹುದು. ಆದರೆ ಇಂಥಾ ಬ್ರಾ ಧರಿಸುವುದರಿಂದ ಸ್ತನ ಕ್ಯಾನ್ಸರ್ ಬರುತ್ತದೆ ಎಂಬುದನ್ನು ಸಮರ್ಥಿಸಲು ಯಾವುದೇ ಪುರಾವೆಗಳಿಲ್ಲ. ಅಂಡರ್‌ವೇರ್ರ್ ಬ್ರಾಗಳು ಸ್ತನ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತವೆ ಎಂಬುದು ಸಾಬೀತಾಗಿಲ್ಲ. 

2. ಸರಿಯಾದ ಬ್ರಾ ಬೆನ್ನು ನೋವನ್ನು ತಡೆಯುತ್ತದೆ : ಸರಿಯಾದ ಸ್ತನಬಂಧವು ಮಹಿಳೆಯರ ಭಂಗಿಯನ್ನು ಸುಧಾರಿಸುತ್ತದೆ ಅಥವಾ ಬೆನ್ನು ನೋವನ್ನು ತಡೆಯುತ್ತದೆ ಎಂಬುದಾಗಿ ಹೇಳುತ್ತದೆ. ಆದರೆ ಇದು ಸುಳ್ಳು. ಬ್ರಾ ಬೆನ್ನುನೋವಿನ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಬೆನ್ನುನೋವಿಗೆ ಧರಿಸುವ ಬ್ರಾ ಯಾವುದೇ ರೀತಿಯಲ್ಲಿ ಕಾರಣವಾಗುವುದಿಲ್ಲ. 

3. ಬ್ರಾ ಪಟ್ಟಿಗಳು ಬೆನ್ನು ನೋವಿಗೆ ಕಾರಣವಾಗಬಹುದು : ಸರಿಯಾದ ಗಾತ್ರದ ಸ್ತನಬಂಧವು ಆರಾಮವನ್ನು ಮಾತ್ರ ನೀಡುತ್ತದೆ. ಆದರೆ ತಪ್ಪಾದ ಗಾತ್ರದ ಸ್ತನಬಂಧವು ಸ್ವಲ್ಪ ಅಸ್ವಸ್ಥತೆಯನ್ನು ಉಂಟುಮಾಡಬಹುದು. ಆದ್ದರಿಂದ ಬ್ರಾ ದಿಂದ ಬೆನ್ನು ನೋವನ್ನು ಕಾಣಿಸುತ್ತದೆ ಎಂಬುದು ಸತ್ಯಕ್ಕೆ ದೂರವಾದ ಮಾತಾಗಿದ್ದು, ಸಮಸ್ಯೆ ಎದುರಾದವರು ಸ್ತನಬಂಧದ ಗಾತ್ರವನ್ನು ಪರಿಶೀಲಿಸಬೇಕಾಗುತ್ತದೆ. 

4.ಮಲಗುವಾಗ ಬ್ರಾ ಧರಿಸುವುದರಿಂದ ಸ್ತನ ಕ್ಯಾನ್ಸರ್ ಬರುತ್ತದೆ :
ಮಲಗುವಾಗ ಮಹಿಳೆಯರು ಬ್ರಾ ಧರಿಸುವುದು ಸ್ತನ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ. ವಾಸ್ತವವಾಗಿ, ಡಾ.ಕ್ಯುಟೆರಸ್ ಕೂಡ ಒಳ ಉಡುಪು ಬ್ರಾಗಳಿಂದ ಕ್ಯಾನ್ಸರ್ ಅಪಾಯವಿಲ್ಲ ಮತ್ತು ಬ್ರಾ ಮತ್ತು ಸ್ತನ ಕ್ಯಾನ್ಸರ್‌ಗೆ ಯಾವುದೇ ಲಿಂಕ್ ಇಲ್ಲ ಎಂದು ತಿಳಿಸಿದ್ದಾರೆ.

5. ಬ್ರಾ ಧರಿಸದಿರುವುದು ಸ್ತನಗಳ ಗಾತ್ರ ಕುಗ್ಗಿಸುತ್ತದೆ: ಬ್ರಾ ಧರಿಸದಿರುವುದು ಮಹಿಳೆಯರ ಸ್ತನಗಳು ಕುಗ್ಗಲು ಕಾರಣವಾಗುತ್ತದೆ ಎಂಬುದು ಹೆಚ್ಚಿನ ಮಹಿಳೆಯರಲ್ಲಿ ಸಾಮಾನ್ಯ ನಂಬಿಕೆಯಾಗಿದೆ. ಆದರೆ ಇದು ನಿಜವಲ್ಲ, ಏಕೆಂದರೆ ಸ್ತನಬಂಧವಿಲ್ಲದೆ ಹೋಗುವುದು ಸ್ತನಗಳನ್ನು ಅವುಗಳ ಮೂಲ ಆಕಾರಕ್ಕೆ ತರುತ್ತದೆ ಮತ್ತು ಕುಗ್ಗುವಿಕೆಗೆ ಕಾರಣವಾಗುವುದಿಲ್ಲ.

    ನಾವು ಧರಿಸುವ ಒಳ ಉಡುಪುಗಳು ಕೂಡ ಎಷ್ಟು ಪ್ರಯೋಜನಕಾರಿ ಎಂಬ ಅಂಶವು ಕೂಡ ನಮಗೆ ತಿಳಿದಿರಬೇಕಾಗುತ್ತದೆ. ಕೆಲವೊಮ್ಮೆ ಯಾರೋ ಹೇಳಿದ ಗಾಳಿ ಮಾತನ್ನು ನಂಬಿ ತಪ್ಪು ಕಲ್ಪನೆಯಿಂದ ಹೊಸ ಪ್ರಯೋಗಗಳನ್ನು ಮಾಡುವ ಬದಲು ಅದರ ಬಗ್ಗೆ ಸಂಪೂರ್ಣ ಮಾಹಿತಿ ಕಲೆ ಹಾಕುವುದು ಅತಿ ಮುಖ್ಯ.

    Leave A Reply

    Your email address will not be published.