ಲಿಂಬಾವಳಿ ಹೆಣ್ಮಕ್ಕಳನ್ನು ರೇಪ್ ಮಾಡಲ್ಲ : ಅವರದ್ದು ಬೇರೆಯದೇ ಇದೆ -ಹೆಚ್‌.ಡಿ.ಕುಮಾರಸ್ವಾಮಿ

ಮಹಿಳೆಯೋರ್ವರು ಶಾಸಕ ಅರವಿಂದ ಲಿಂಬಾವಳಿ ಅವರಲ್ಲಿ ತನ್ನ ಅಹವಾಲು ತಗೊಂಡು ಬಂದಾಗ, ಆಕೆಯನ್ನು ದಬಾಯಿಸಿದ್ದು ಮಾತ್ರವಲ್ಲದೇ, ಹಲ್ಲೆಗೂ ಮುಂದಾಗಿದ್ದು ನಂತರ ಲೇಡಿ ಪೊಲೀಸ್ ನವರಲ್ಲಿ ಆಕೆಯ ಮೇಲೆಯೇ ಕೇಸ್ ಹಾಕಲು ಹೇಳಿದ್ದು, ಜೊತೆಗೆ ಇದನ್ನು ಪ್ರಶ್ನಿಸಿದವರಲ್ಲಿ ನಾನೇನು ಆಕೆಯನ್ನು ರೇಪ್ ಮಾಡಿದ್ದೀನಾ ಎನ್ನುವ ದರ್ಪದ ಮಾತಾಡಿದ್ದು ಈಗ ವಿವಾದಕ್ಕೀಡು ಮಾಡಿದೆ.

 

ಈ ಬಗ್ಗೆ ಕುಮಾರಸ್ವಾಮಿ ಅವರು ತಮ್ಮ ಹೇಳಿಕೆಯನ್ನು ನೀಡಿದ್ದಾರೆ. ” ಅವರು ಹೆಣ್ಣು ಮಕ್ಕಳನ್ನ ರೇಪ್ ಮಾಡುವವರಲ್ಲ ” ಎಂದು ಹೇಳಿದ್ದಾರೆ.

“ನಾಗಮಂಗಲದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಅರವಿಂದ ಲಿಂಬಾವಳಿ ಹೆಣ್ಣು ಮಕ್ಕಳನ್ನ ರೇಪ್ ಮಾಡಲ್ಲ. ಅವರ ಒಂದು ಸಿಡಿ ಇತ್ತಲ್ಲ. ಕೋರ್ಟ್ ನಿಂದ ಸ್ಟೇ ತಂದ್ರಲ್ಲ.ವಅದನ್ನು ನೋಡಿದ್ರೆ ಏನು ಅಂತ ಗೊತ್ತಾಗತ್ತೆ ” ಎಂದು ಹೇಳಿದ್ದಾರೆ.

ಆದ್ರೆ, ಅದನ್ನು ನೋಡದಂತೆ ಕೋರ್ಟ್‌ನಿಂದ ಸ್ಟೇ ತಂದಿದ್ದಾರೆ. ಅವರು ಹೆಣ್ಣು ಮಕ್ಕಳ ಮೇಲೆ ಆ ರೀತಿ ಮಾಡಲ್ಲ. ಅವರ ನಡವಳಿಕೆಯೇ ಬೇರೆ ಇದೆ ಎಂದು ಪರೋಕ್ಷವಾಗಿ ಲಿಂಬಾವಳಿ ಹಳೆ ಪ್ರಕರಣದ ಕುರಿತು ಟಾಂಗ್ ನೀಡಿದ್ದಾರೆ.

ಯಾರೇ ಆಗಲಿ ಜನಪ್ರತಿನಿಧಿಗಳ ಬಳಿ ಅಹವಾಲು ತಂದಾಗ ಗೌರವಯುತವಾಗಿ ಮನವಿ ಸ್ವೀಕಾರ ಮಾಡಬೇಕು. ಕಾನೂನಿನ ಚೌಕಟ್ಟಿನಲ್ಲಿ ಏನು ಮಾಡಬಹುದು ಅನ್ನೋದನ್ನು ನೋಡಬೇಕು. ಅವರಿಗೆ ಮನವರಿಕೆ ಮಾಡಬೇಕು. ಈ ರೀತಿ ಹೆಣ್ಣು ಮಗಳ ಮೇಲೆ
ಅಗೌರವವಾಗಿ ನಡೆದುಕೊಳ್ಳಬಾರದು ಎಂದು
ಎಂದು ಕುಮಾರಸ್ವಾಮಿ ಹೇಳಿದ್ದಾರೆ.

Leave A Reply

Your email address will not be published.