ಏನು ವಿಚಿತ್ರ…ಮಾನವ ವೀರ್ಯ ಬಳಸಿ ನೆಕ್ಲೇಸ್ ಮಾಡುತ್ತಾಳೆ ಈ ಮಹಿಳೆ !!!

ಹೆಣ್ಣು ಮಕ್ಕಳು ಫ್ಯಾಷನ್, ಜ್ಯುವೆಲ್ಲರಿ ಹೆಚ್ಚು ಇಷ್ಟ ಪಡುತ್ತಾರೆ. ಹಾಗೆನೇ ತಾವು ಧರಿಸಿದಂತಹ ಆಭರಣಗಳು ಡಿಫರೆಂಟ್ ಆಗಿರಬೇಕೆಂದು ಎಲ್ಲಾ ಯುವತಿ/ಯುವಕರು ಬಯಸುತ್ತಾರೆ. ಆದರೆ ಇಲ್ಲೊಬ್ಬಾಕೆಗೆ ವಿಚಿತ್ರ ಆಸೆ ಆಗಿದೆ. ಅದೇನೋ ಈಕೆ ಎಲ್ಲಕ್ಕಿಂತ ವಿಭಿನ್ನವಾಗಿರೋ ನೆಕ್ಲೆಸ್ ಧರಿಸಬೇಕೆಂದು ಬಯಸಿ, ವೀರ್ಯದಿಂದ ನೆಕ್ಲೆಸ್ ತಯಾರಿಸಿದ್ದಾಳೆ.

ಇತ್ತೀಚಿಗೆ ಮಹಿಳೆಯೊಬ್ಬರು ಎದೆಹಾಲನ್ನು ಬಳಸಿ ನೆಕ್ಲೆಸ್, ರಿಂಗ್, ಬಳೆ ಮೊದಲಾದವುಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದ ವಿಚಾರ ಸುದ್ದಿಯಾಗಿತ್ತು. ಅದೇ ರೀತಿ ಕೆನಡದ ಆಭರಣ ವ್ಯಾಪಾರಿ ಮಹಿಳೆಯೊಬ್ಬರು ಒಂದು ನೆಕ್ಲೆಸ್ ತಯಾರಿಸುತ್ತಿದ್ದಾಳೆ. ಮಾನವ ವೀರ್ಯವನ್ನು ಬಳಸಿ ಅದ್ಭುತ ನೆಕ್ಲೆಸ್ ಮಾಡುತ್ತಾಳೆ. ಹೌದು ಅಚ್ಚರಿಯೆನಿಸಿದರೂ ಇದು ನಿಜ.

2021 ರಲ್ಲಿ ವೀರ್ಯವನ್ನು ಬಳಸಿ ತನ್ನ ವ್ಯವಹಾರವನ್ನು ಪ್ರಾರಂಭಿಸಿದ್ದಾರೆ ಶಿಲ್ಪಿ ಮತ್ತು ಆಭರಣ (Jewellery) ವ್ಯಾಪಾರಿ ಅಮಂಡಾ ಬೂತ್. ಟಿಕ್‌ಟಾಕ್‌ನಲ್ಲಿ ಇವರ ಫಾಲೋವರ್ ಒಬ್ಬರು ನೀಡಿದ ಸಲಹೆಯನ್ನು ಆಧರಿಸಿ, ನಂತರ ವೀರ್ಯ (Sperm)ವನ್ನು ಬಳಸಿ ಆಭರಣಗಳನ್ನು ತಯಾರಿಸಲು ಪ್ರಾರಂಭಿಸಿದ್ದಾರೆ. ಈ ಬಗ್ಗೆ ಮಹಿಳೆ (Woman) ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದು, ಜನರಿಂದ ಉತ್ತಮ ಪ್ರತಿಕ್ರಿಯೆ ದೊರಕಿದೆ. ಗ್ರಾಹಕರು ತಮ್ಮ ವೀರ್ಯದ ಮಾದರಿಗಳನ್ನು ಅಮಂಡಾ ಅವರ ಕಾರ್ಯಾಗಾರಕ್ಕೆ ಕಳುಹಿಸುತ್ತಾರೆ, ಅಲ್ಲಿ ಅವುಗಳನ್ನು ನಿರ್ಜಲೀಕರಣಗೊಳಿಸಿ, ಪುಡಿಮಾಡಲಾಗುತ್ತದೆ ಮತ್ತು ಧರಿಸಬಹುದಾದ ಮಣ್ಣಿನ ಮಣಿಗಳು ಅಥವಾ ಟ್ರಂಕೆಟ್‌ಗಳಾಗಿ ಪರಿವರ್ತಿಸಲಾಗುತ್ತದೆ ಎಂದು ಬರೆದಿದ್ದಾಳೆ.

ಮೊದಲಿಗೆ ತನ್ನ ಪತಿಯ ವೀರ್ಯವನ್ನು ಬಳಸಿಕೊಂಡು ನೆಕ್ಲೆಸ್ ಮಾಡಿದ ಮಹಿಳೆ, ವೀರ್ಯದ ನೆಕ್ಲೆಸ್ ಯಶಸ್ವಿಯಾದ ನಂತರ ಜನರಿಂದ ಆರ್ಡರ್ ತೆಗೆದುಕೊಳ್ಳಲು ಆರಂಭಿಸಿದಳು. ವೀರ್ಯದ ಈ ನೆಕ್ಲೆಸ್ ಧರಿಸುವ ಮಹಿಳೆಯರು ವಿಶೇಷ ಖುಷಿಯನ್ನು ಹೊಂದುತ್ತಾರೆ. ಹುಟ್ಟಲಿರುವ ಮಕ್ಕಳು ಜೊತೆಯಲ್ಲೇ ಇದ್ದಾರೆಂದು ಅಂದುಕೊಳ್ಳುತ್ತಾರೆ ಎಂದು ಈಕೆ ಬರೆದುಕೊಂಡಿದ್ದಾಳೆ.

https://www.instagram.com/reel/CgqUK-NLjvX/?utm_source=ig_web_copy_link

Leave A Reply

Your email address will not be published.