BREAKING NEWS : ಪ್ರವೀಣ್ ನೆಟ್ಟಾರು ನಡೆಸ್ತಿದ್ದ ಚಿಕನ್ ಸೆಂಟರ್ ಮತ್ತೆ ಓಪನ್, ಪುನಾರಂಭ ಮಾಡಿದ್ದು ಯಾರು ಗೊತ್ತಾ ?
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಜು.26ರಂದು ಹಂತಕರಿಂದ ಹತ್ಯೆಗೊಳಗಾದ ಹಿಂದೂ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಮಾಲಕತ್ವದ ಅಕ್ಷಯ ಚಿಕನ್ ಮತ್ತೆ ಸೆಂಟರ್ ಪುನರಾಂಭಗೊಳ್ಳುತ್ತಿದೆ. ಮಾಸ್ತಿಕಟ್ಟೆಯಲ್ಲಿರುವ ಈ ಅಂಗಡಿ ಬಿಜೆಪಿ ಹಾಗೂ ಹಿಂದೂ ಸಂಘಟನೆಯ ಸಕ್ರಿಯ ಕಾರ್ಯಕರ್ತ ಯತೀಶ್ ಮುರ್ಕೆತ್ತಿ ಅವರ ಮಾಲಕತ್ವದಲ್ಲಿ ಮತ್ತೆ ಆರಂಭಗೊಳ್ಳುತ್ತಿದೆ.
ಯತೀಶ್ ಅವರು ಕೋಳಿ ಸಾಕಾಣಿಕೆಯನ್ನು ಮಾಡುತ್ತಿದ್ದು, ಇದೀಗ ಚಿಕನ್ ಸೆಂಟರ್ ಓಪನ್ ಮಾಡುತ್ತಿದ್ದಾರೆ. ಯತೀಶ್ ಈ ಹಿಂದೆ ಎಬಿವಿಪಿಯಲ್ಲಿ ಜಿಲ್ಲಾ ಸಂಚಾಲಕರಾಗಿ ಕೆಲಸ ಮಾಡಿದ್ದು, ಬಳಿಕ ಸುಳ್ಯ ತಾಲೂಕು ಜವಾಬ್ದಾರಿಯಲ್ಲಿ ತೊಡಗಿಕೊಂಡಿದ್ದರು.
ಈ ಅಂಗಡಿಯೂ ಅಕ್ಷಯ ಚಿಕನ್ ಸೆಂಟರ್ ಹೆಸರಿನಲ್ಲೇ
ಮುಂದುವರೆಯಲಿದ್ದು, ಗ್ರಾಹಕರು ಸಹಕರಿಸಬೇಕು ಜೊತೆಗೆ ಪ್ರವೀಣ್ ನೆನಪಿನಲ್ಲಿ ಅಂಗಡಿ ಉಳಿಯುವ ದೃಷ್ಠಿಯಿಂದ ಮುಂದುವರಿಸುತ್ತೇನೆ. ಗ್ರಾಹಕರು ಯಾವುದೇ ಭಯವಿಲ್ಲದೇ ಬಂದು ಖರೀದಿಸಿ ಎಂದು ಯತೀಶ್ ಅಭಿಪ್ರಾಯ ಪಟ್ಟಿದ್ದಾರೆ.
ಪ್ರವೀಣ್ ನೆಟ್ಟಾರು ಹತ್ಯೆಗೆ ಕೋಳಿ ಅಂಗಡಿಯೂ ಒಂದು ಕಾರಣ ಅನ್ನೋ ಮಾತುಗಳು ಕೇಳಿ ಬಂದಿತ್ತು. ಹಲವು ಆಯಾಮಗಳಲ್ಲಿ ಕೋಳಿ ಅಂಗಡಿ ಕಾರಣಕ್ಕೆ ಪ್ರವೀಣ್ ಟಾರ್ಗೆಟ್ ಆಗಿದ್ದ ಅನ್ನೋದು ಆರೋಪಿಗಳ ಬಂಧನವಾದ ಬಳಿಕವೂ ಮಾತೊಂದು ಕೇಳಿ ಬಂದಿತ್ತು.
ಇನ್ನು ಪ್ರಮುಖ ಆರೋಪಿಯಾದ ಶಫೀಕ್ ತಂದೆ ಪ್ರವೀಣ್ ಅಂಗಡಿಯಲ್ಲಿ ಕೆಲಸ ಮಾಡ್ತಾ ಇದ್ದರು ಅನ್ನೋದು ಪ್ರಕರಣದಲ್ಲಿ ಪ್ರಮುಖ ಸುಳಿವು. ಜಟ್ಕಾ-ಹಲಾಲ್ ವಿವಾದ ಹಾಗೂ ಹಲವು ಹಿಂದೂ ಯುವಕರಿಗೆ ಪ್ರವೀಣ್ ಕೋಳಿ ಅಂಗಡಿಗೆ ಪ್ರೋತ್ಸಾಹ ನೀಡಿದ್ದೇ ಘಟನೆಗೆ ಕಾರಣ ಅನ್ನೋದು ತನಿಖೆ ವೇಳೆಯೂ ಬಹಿರಂಗವಾಗಿದೆ.
ಪ್ರವೀಣ್ ಹತ್ಯೆ ನಂತರ, ಪ್ರವೀಣ್ ಕುಟುಂಬಿಕರು ಈ ನೋವಿನ ಮಧ್ಯೆ ಅದನ್ನು ಮತ್ತೆ ಆರಂಭಿಸೋ ಮನಸ್ಸು ಮಾಡೋಕೆ ಹೋಗಿರಲಿಲ್ಲ. ಹಾಗಾಗಿ ಮತ್ತೆ ಅಕ್ಷಯ ಚಿಕನ್ ಫ್ರಾಂಚೈಸಿ ಪಡೆಯಲು ಯಾರೂ ಧೈರ್ಯ ಮಾಡಿರಲಿಲ್ಲ. ಈಗ ಬೆಳ್ಳಾರೆ ಭಾಗದ ಹಿಂದೂ ಕಾರ್ಯಕರ್ತ ಯತೀಶ್ ಅಕ್ಷಯ್ ಚಿಕನ್ ಅಂಗಡಿ ಓಪನ್ ಮಾಡೋ ಆಸಕ್ತಿ ತೋರಿದ್ದಾರೆ. ಪಕ್ಷ ಮತ್ತು ಆರ್.ಎಸ್.ಎಸ್ ಜೊತೆ ಉತ್ತಮ ಬಾಂಧವ್ಯ ಹೊಂದಿರುವ ಯತೀಶ್ ಪೂಜೆ ನೆರವೇರಿಸಿ ಅಂಗಡಿ ಪುನಾರಂಭಿಸಿದ್ದಾರೆ.