ಶಾಸಕಿ ಮೇಲೆ ಸಾರ್ವಜನಿಕರ ಎದುರೇ ಕಪಾಳಕ್ಕೆ ಬಾರಿಸಿದ ಪತಿ !!!

Share the Article

ಆಮ್ ಆದ್ಮಿ ಪಕ್ಷದ (ಎಎಪಿ) ಶಾಸಕಿ ಬಲ್ಜಿಂದರ್ ಕೌರ್ ಅವರ ಮೇಲೆ ಪತಿ ಹಲ್ಲೆ ನಡೆಸಿರುವ ವೀಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಪಂಜಾಬ್ ನಿವಾಸದಲ್ಲಿ ಶಾಸಕಿ ಬಲ್ದಿಂದರ್ ಕೌರ್ ಮೇಲೆ ಶಾಸಕರಾಗಿರುವ ಪತಿ ಹಲ್ಲೆ ನಡೆಸಿರುವುದನ್ನು ನೋಡಿ ಜನ ನಿಜಕ್ಕೂ ಆವಾಕ್ಕಾಗಿದ್ದಾರೆ. ಇದೀಗ ಈ ವೀಡಿಯೋ ಹಲವು ಟೀಕೆಗಳಿಗೆ ಕಾರಣವಾಗಿದೆ.

ಪಂಜಾಬ್‍ನ ತಲ್ವಾಂಡಿ ಸಾಬೋ ಕ್ಷೇತ್ರದಿಂದ ಎರಡು ಸಲ ಶಾಸಕರಾಗಿ ಆಯ್ಕೆಯಾಗಿರುವ ಸುಖರಾಜ್ ಸಿಂಗ್ ಅವರೊಂದಿಗೆ ಪತ್ನಿ ಬಲ್ಜಿಂದರ್ ಕೌರ್ ವಾದ ಮಾಡುತ್ತಿರುವ ಸಂದರ್ಭದಲ್ಲಿ ಆಕ್ರೋಶಗೊಂಡ ಸುಖರಾಜ್ ಪತ್ನಿಗೆ ಎಲ್ಲರ ಮುಂದೆ ಕಪಾಳಕ್ಕೆ ಬಾರಿಸಿದ್ದಾರೆ. ಆಗ ಕೆಲವರು ಮಧ್ಯಪ್ರವೇಶಿಸಿ ಇಬ್ಬರನ್ನು ದೂರ ತಳ್ಳಿದ್ದಾರೆ.

ಈ ಬಗ್ಗೆ ಯಾವುದೇ ಪ್ರಕರಣ ದಾಖಲಾಗಿಲ್ಲ. ಆದರೆ ಪಂಜಾಬ್ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಮನೀಶಾ ಅವರು, ನಾನು ಗಲಾಟೆಯ ವೀಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ನೋಡಿದ್ದೇನೆ. ಘಟನೆಯ ಬಗ್ಗೆ ನಾವು ಸ್ವಯಂ ಪ್ರೇರಿತ ನೋಟಿಸ್ ನೀಡುವಂತೆ ಪೊಲೀಸ್ ಇಲಾಖೆಗೆ ಸೂಚಿಸಿದ್ದೇವೆ. ಸಾರ್ವಜನಿಕ ಸಮಸ್ಯೆಗಳನ್ನು ಪ್ರಸ್ತಾಪಿಸುವ ಮಹಿಳೆಯೇ ಮನೆಯಲ್ಲಿ ಕಿರುಕುಳ ಎದುರಿಸುತ್ತಿರುವುದು ಬೇಸರ ತಂದಿದೆ ಎಂದು ತಿಳಿಸಿದ್ದಾರೆ.

Leave A Reply