Home Interesting ಭಾರತಕ್ಕೆ ಹೆದರಿತೇ ಚೀನಾ? ; ಅಗ್ಗದ ಮೊಬೈಲ್ ಬ್ಯಾನ್ ನಿರ್ಧಾರಕ್ಕೆ ಚೀನಾ ಕಂಪನಿ ಗಡ-ಗಡ!!

ಭಾರತಕ್ಕೆ ಹೆದರಿತೇ ಚೀನಾ? ; ಅಗ್ಗದ ಮೊಬೈಲ್ ಬ್ಯಾನ್ ನಿರ್ಧಾರಕ್ಕೆ ಚೀನಾ ಕಂಪನಿ ಗಡ-ಗಡ!!

Hindu neighbor gifts plot of land

Hindu neighbour gifts land to Muslim journalist

ಚೀನಾ ಉತ್ಪನ್ನಗಳ ಮೇಲೆ ಭಾರತೀಯರ ಮೋಹ ಕಡಿಮೆ ಆಗುತ್ತಲೇ ಬಂದಿದೆ. ಕಾರಣ ಕೊರೋನ ಎಂಬ ಮಹಾಮಾರಿ ಹಾಗೂ ಗಡಿ ಸಂಕಷ್ಟ. ಒಂದೊಂದೇ ಉತ್ಪನ್ನಗಳನ್ನು ಬ್ಯಾನ್ ಮಾಡುತ್ತಾ ಬರುತ್ತಿರುವ ಭಾರತ ಚೀನಿ ಅಗ್ಗದ ಮೊಬೈಲ್ ಬ್ಯಾನ್ ಗೂ ಯೋಜನೆ ರೂಪಿಸಿತ್ತು. ಆದರೆ, ಈ ಕುರಿತು ಸ್ಪಷ್ಟನೆ ಕೂಡ ನೀಡಿದ್ದು, ಅಂತಹ ಯಾವುದೇ ಯೋಜನೆ ಸದ್ಯಕ್ಕೆ ರೂಪಿಸಿಲ್ಲ ಎಂದು ಹೇಳಿದ್ದರು. ಆದರೂ, ಭಾರತಕ್ಕೆ ಹೆದರಿತೆ ಚೀನಾ??

ಹೌದು. ಭಾರತದಲ್ಲಿ ಮೊಬೈಲ್ ಬ್ಯಾನ್ ಮಾಡುವ ಇಂತಹದ್ದೊಂದು ಚರ್ಚೆ ಆರಂಭವಾಗಿದ್ದೆ ತಡ ಚೀನಾದ ಮೊಬೈಲ್ ತಯಾರಿಕಾ ಕಂಪೆನಿಗಳಲ್ಲಿ ಕಂಪನ ಶುರುವಾಗಿದೆ. ಭಾರತ ಸರ್ಕಾರದ ಬ್ಯಾನ್ ನೀತಿಗೆ ಹೆದರಿ Xiaomi, Vivo ಮತ್ತು Oppo ನಂತಹ ಚೀನಾದ ಬ್ರ್ಯಾಂಡ್‌ಗಳು ಅಗ್ಗದ ಸ್ಮಾರ್ಟ್‌ಫೋನ್ ಮಾರುಕಟ್ಟೆಯಿಂದ ದೂರವಾಗಲು ಪ್ರಾರಂಭಿಸಿವೆ.

ಇತ್ತೀಚೆಗೆ ಭಾರತದಲ್ಲಿ 12,000 ರೂಪಾಯಿಗಿಂತ ಕಡಿಮೆ ಬೆಲೆಯ ಮೇಡ್ ಇನ್ ಚೈನಾ ಫೋನ್‌ಗಳನ್ನು ಸರ್ಕಾರ ನಿಷೇಧಿಸಬಹುದು ಎಂಬ ಸುದ್ದಿ ಇತ್ತು. ಆದರೆ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಖಾತೆ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಈ ಫೋನ್‌ಗಳ ಮೇಲಿನ ನಿಷೇಧವನ್ನು ನಿರಾಕರಿಸಿದ್ದಾರೆ. ಅಲ್ಲದೆ, ಚೀನಾ ಮೂಲದ ಮೊಬೈಲ್ ಆಪ್ ಗಳನ್ನು ಬ್ಯಾನ್ ಮಾಡಿದ ರೀತಿಯಲ್ಲಿಯೇ 12 ಸಾವಿರ ರೂ ಒಳಗಿನ ಚೀನಾ ಮೂಲದ ಕಂಪನಿಗಳ ಮೊಬೈಲ್ ಬ್ಯಾನ್ ಮಾಡುವ ಬಗ್ಗೆ ಭಾರತದಲ್ಲಿ ಚರ್ಚೆ ಆರಂಭವಾಗಿತ್ತು. ಇದರಿಂದಾಗಿ ಭಯಗೊಂಡು ಚೀನಾ ಈ ನಿರ್ಧಾರಕ್ಕೆ ಬಂದಿದೆ.

ಚೀನಾದ ಕಂಪನಿಗಳು 10,000 ರೂಪಾಯಿಗಿಂತ ಕಡಿಮೆ ಬೆಲೆಯ ಫೋನ್‌ಗಳನ್ನು ಬಿಡುಗಡೆ ಮಾಡುವುದನ್ನು ನಿಲ್ಲಿಸಿವೆ. ಚೀನಾದ ಬ್ರ್ಯಾಂಡ್ ಮತ್ತು ಸರ್ಕಾರದ ನಡುವಿನ ವಿವಾದದ ಪರಿಣಾಮವು ಕಂಪನಿಗಳ ನಿರ್ಧಾರದ ಮೇಲೆ ಸ್ಪಷ್ಟವಾಗಿ ಗೋಚರಿಸುತ್ತಿದೆ. ಚೀನಾದ ಕಂಪನಿಗಳ ಜೊತೆಗೆ ದಕ್ಷಿಣ ಕೊರಿಯಾದ ಸ್ಯಾಮ್‌ಸಂಗ್ ಕಂಪನಿಯು ಈ ವರ್ಷ ಕೇವಲ ಒಂದೆ ಒಂದು ಫೋನ್ ಅನ್ನು 10 ಸಾವಿರಕ್ಕಿಂತ ಕಡಿಮೆ ಬೆಲೆಗೆ ಬಿಡುಗಡೆ ಮಾಡಿದೆ.

ಅದೇ ರೀತಿ Xiaomi ಕಂಪೆನಿಯ ಕಡಿಮೆ‌ ದರದ‌ ಮೊಬೈಲ್ ಗಳು ಮಾರುಕಟ್ಟೆಯಲ್ಲಿ ಸುಮಾರು ಶೇ 12 % ಇಳಿಕೆ ಕಂಡುಬಂದಿದೆ. ಇಂಟರ್ನ್ಯಾಷನಲ್ ಡಾಟಾ ಕಾರ್ಪೊರೇಷನ್ (IDC) ಯ ಅಂಕಿಅಂಶಗಳ ಪ್ರಕಾರ Xiaomi ಯ ₹ 7,500 ರೂ ಮೊಬೈಲ್ ವಿಭಾಗದ ಷೇರುಗಳು 28% ರಿಂದ 25% ಕ್ಕೆ ಇಳಿದಿವೆ. 10 ಸಾವಿರದೊಳಗಿನ ಫೋನ್‌ಗಳ ಮಾರುಕಟ್ಟೆ ಪಾಲು ಕೂಡ ಕುಸಿದಿದೆ.

Xiaomi ಮೊಬೈಲ್ ಕಂಪನಿಯ ಮಾರುಕಟ್ಟೆ ಪಾಲು 2015 ರಲ್ಲಿ ಶೇ84 ಹೋಲಿಸಿದರೆ ಈಗ ಕೇವಲ ಶೇ 35 ಕ್ಕೆ‌ ಇಳಿದಿದೆ. ಈ ವರ್ಷ ಈ ಕಂಪನಿಗಳು ಕೇವಲ 39 ಸ್ಮಾರ್ಟ್‌ಫೋನ್‌ಗಳನ್ನು 10 ಸಾವಿರಕ್ಕಿಂತ ಕಡಿಮೆ ಬೆಲೆಯಲ್ಲಿ ಬಿಡುಗಡೆ ಮಾಡಿದೆ. ಕಳೆದ ವರ್ಷ ಬಿಡುಗಡೆಯಾದ 60 ಫೋನ್‌ಗಳಿಗಿಂತ ಕಡಿಮೆಯಾಗಿದೆ.