ಮುರುಘಾ ಮಠದ ಶ್ರೀಗಳಿಗೆ 14 ದಿನ ನ್ಯಾಯಾಂಗ ಬಂಧನದ ಜೊತೆಯಲ್ಲೇ ಶ್ರೀಗಳಿಗೆ ಎದೆನೋವು, ಆಸ್ಪತ್ರೆಗೆ ಶಿಫ್ಟ್ !!!

ಚಿತ್ರದುರ್ಗದ ಮುರಘಾಮಠದ ಶ್ರೀಗಳ ವಿರುದ್ಧ ಫೋಕ್ಸೋ ಪ್ರಕರಣದ ಹಿನ್ನೆಲೆಯಲ್ಲಿ ಮಠದ ಶಿವಮೂರ್ತಿ ಶ್ರೀಗಳನ್ನು ನಿನ್ನೆ ರಾತ್ರಿ ಬಂಧಿಸಲಾಗಿದ್ದು, ಅವರನನ್ನು 14 ದಿನಗಳ ನ್ಯಾಯಾಂಗ ಬಂಧನವನ್ನು ವಿಧಿಸಲಾಗಿದ್ದು, ಚಿತ್ರದುರ್ಗದ ಜಿಲ್ಲಾ ಕಾರಾಗೃಹ ಕರೆದೊಯ್ಯಲಾಗಿದೆ.

ಮುರುಘಾಮಠದ ಶ್ರೀಗಳನ್ನು ಗುರುವಾರ ರಾತ್ರಿ ಪೊಲೀಸರು ಬಂಧಿಸಿದ್ದಾರೆ. ಬಳಿಕ ವೈದ್ಯಕೀಯ ಪರೀಕ್ಷೆಯ ನಂತರ ಪೊಲೀಸರು ಶ್ರೀಗಳನ್ನು ಚಿತ್ರದುರ್ಗದ ಹೆಚ್ಚುಉವರಿ ಸೆಷನ್ಸ್ ಕೋರ್ಟ್ ಗೆ ಹಾಜರುಪಡಿಸಿದ್ದಾರೆ. ವಿಚಾರಣೆ ನಡೆಸಿದ ನ್ಯಾ. ಕೋಮಾಲಾ ಅವರು ಶ್ರೀಗಳನ್ನು 14 ದಿನ ನ್ಯಾಯಾಂಗ ಬಂಧನಕ್ಕೆ ಆದೇಶ ನೀಡಿದ್ದು, ಆದರೆ ಸದ್ಯ ಮರುಘಾಮಠದ ಶ್ರೀಗಳ ಅನಾರೋಗ್ಯದ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ರವಾನಿಸಲಾಗಿದೆ.

ಮುರುಘಾಮಠದ ಶ್ರೀಗಳನ್ನು ಪೋಕ್ಸೋ ಪ್ರಕರಣದ ಹಿನ್ನೆಲೆಯಲ್ಲಿ ಗುರುವಾರ ರಾತ್ರಿ ಬಂಧಿಸಲಾಗಿತ್ತು. ಬಳಿಕ ನ್ಯಾಯಾಲಾಯ ಶ್ರೀಗಳಿಗೆ 14 ದಿನ ನ್ಯಾಯಾಂಗ ಬಂಧನ ವಿಧಿಸಿತ್ತು. ಬಳಿಕ ಶ್ರೀಗಳನ್ನು ಚಿತ್ರದುರ್ಗದ ಕಾರಾಗೃಹಕ್ಕೆ ರವಾನಿಸಲಾಗಿತ್ತು. ಆದರೆ ಶ್ರೀಗಳಿಗೆ ಎದೆನೋವು ಕಾಣಿಸಕೊಂಡ ಹಿನ್ನೆಲೆಯಲ್ಲಿ ಮುರುಘಾಮಠದ ಶ್ರೀಗಳನ್ನು ಜೈಲಿನಿಂದ ಆಸ್ಪತ್ರೆಗೆ ರವಾನಿಸಲಾಗಿದೆ.

ಶ್ರೀಗಳಿಗೆ ಜಾಮೀನು ಕೋರಿ ಇಂದು ಕೋರ್ಟ್​ಗೆ ಮತ್ತೆ ಅರ್ಜಿ ಸಲ್ಲಿಸುತ್ತೇವೆ. ನಾವು ನಿನ್ನೆ ನ್ಯಾಯಾಲಯಕ್ಕೆ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ರದ್ದಾಗಿದೆ. ಇಂದು ಮತ್ತೊಮ್ಮೆ ಜಾಮೀನಿಗೆ ಅರ್ಜಿ ಸಲ್ಲಿಸುತ್ತೇವೆ. ಮುರುಘಾಶ್ರೀಗಳಿಗೆ ಗೆದ್ದು ಬರುವ ವಿಶ್ವಾಸ ಇದೆ ಎಂದು ಮಠದ ಪರ ವಕೀಲ ಉಮೇಶ್ ಹೇಳಿದರು.

ಜೈಲಿನಲ್ಲಿ ಮೊದಲ ರಾತ್ರಿ ಕಳೆದ ಮುರುಘಾ ಶ್ರೀಗಳು

ಲೈಂಗಿಕ ದೌರ್ಜನ್ಯ ಆರೋಪಕ್ಕೆ ಸಂಬಂಧಿಸಿದಂತೆ ಪೋಕ್ಸೊ ಪ್ರಕರಣದಡಿ ಬಂಧನಕ್ಕೊಳಗಾಗಿರುವ ಮುರುಘಾ ಶ್ರೀಗಳು ರಾತ್ರಿಯಿಡೀ ನಿದ್ದೆ ಇಲ್ಲದೇ ಜೈಲಿನಲ್ಲಿ ಕಳೆದರು. ಗುರುವಾರ ರಾತ್ರಿ ಶ್ರೀಗಳು ನ್ಯಾಯಾಂಗ ಬಂಧನಕ್ಕೊಳಗಾದರು. ನ್ಯಾಯಾಧೀಶರು 14 ದಿನ ನ್ಯಾಯಾಂಗ ಬಂಧನ ವಿಧಿಸಿದ ಹಿನ್ನೆಲೆ ತಡರಾತ್ರಿ ಜೈಲಿಗೆ ಸೇರಿದ, ಶ್ರೀಗಳು ರಾತ್ರಿಯಿಡೀ ನಿದ್ದೆ ಇಲ್ಲದೇ, ಚಿಂತಾಕ್ರಾಂತರಾಗಿದ್ದರು. ಬೆಳಗ್ಗೆಯಾದ ಕೂಡಲೇ ವಿಶ್ರಾಂತಿ ಮುಗಿಸಿ ಎದ್ದು, ನಂತರ ಧ್ಯಾನದಲ್ಲಿ ಸ್ವಾಮೀಜಿ ನಿರತರಾಗಿದ್ದರು. ಬಳಿಕ ಇತರ ಕೈದಿಗಳಿಗೆ ನೀಡುವಂತೆ ಜೈಲು ಸಿಬ್ಬಂದಿ ಶ್ರೀಗಳಿಗೂ ಸಹ ಚಹಾ ನೀಡಿದರು.

ತಡರಾತ್ರಿ 2:50ರ ಸುಮಾರಿಗೆ ಬಂಧಿತರಾದ ಶ್ರೀಗಳು ಬೆಳಗ್ಗೆ 6 ಗಂಟೆಗೆ ಎದ್ದು, ನಂತರ ಮುರುಘಾಶ್ರೀಗೆ ಮೆಡಿಸಿನ್ ಮತ್ತು ಟೂತ್ ಪೇಸ್ಟ್, ಬ್ರಶ್ ಅನ್ನು ವಕೀಲರು ನೀಡಿ ಬಂದರು. ಈ ಹಿಂದೆ ಕಾರಾಗೃಹದಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಮಾಡಿದ್ದ ಮುರುಘಾಶ್ರೀ ಮಧ್ಯರಾತ್ರಿಯೇ ಬಂಧಿಯಾಗಿರುವ ವಿಚಾರ ತಿಳಿದು ಕಾರಾಗೃಹ ಸಿಬ್ಬಂದಿಯೇ ಶಾಕ್ ಆಗಿದ್ದಾರೆ.

ಗುರುವಾರ ತಡರಾತ್ರಿ ಮಠದಿಂದ ಕಾವಿ ಕಳಚಿ ಬಿಳಿ ವಸ್ತ್ರ ಧರಿಸಿ ಶ್ರೀಗಳು ಹೊರಬಂದಿದ್ದರು. ನಂತರ ಅವರನ್ನು ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಯಿತು. ನಸುಕಿನ 2.25ಕ್ಕೆ ಆಸ್ಪತ್ರೆಯಿಂದ ಹೊರಟ ಪೊಲೀಸರು 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶೆ ಕೋಮಲಾ ಅವರ ಮುಂದೆ ಹಾಜರುಪಡಿಸಿದರು. ಶರಣರ ಪರ ಜಾಮೀನು ಕೋರಿ ಸ್ಥಳದಲ್ಲೇ ಅರ್ಜಿ ಸಲ್ಲಿಸಿದರು. ಅರ್ಜಿ ತಿರಸ್ಕರಿಸಿದ ನ್ಯಾಯಾಧೀಶರು ಶುಕ್ರವಾರ ನ್ಯಾಯಾಲಯದಲ್ಲಿ ಸಲ್ಲಿಸುವಂತೆ ಸೂಚಿಸಿ, ಶ್ರೀಗಳನ್ನು 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು.

Leave A Reply

Your email address will not be published.